Automobiles: ಬಿಗ್ ನ್ಯೂಸ್: ಥಾರ್ ಗೆ ಪೈಪೋಟಿ ನೀಡಲು, ದೇಶವೇ ಶೇಕ್ ಆಗುವಂತಹ ಕಾರ್ ಬಿಡುಗಡೆ ಮಾಡಿದ ಸುಜುಕಿ. ಬೆಲೆ ವಿಶೇಷತೆ ಏನು ಗೊತ್ತೇ?

Automobiles: ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಈಗ ಹೆಚ್ಚು ಎಸ್.ಯು.ವಿ ಮಾದರಿಯ ಕಾರ್ ಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸದಾಗಿ ಜಿಮ್ನಿ ಕಾರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿಮ್ನಿ ಕಾರ್ ಈಗ ಎಲ್ಲರ ಗಮನ ಸೆಳೆಯುತ್ತಿದೆ ಎಂದು ಹೇಳಬಹುದು. ಆಟೋಮೊಬೈಲ್ಸ್ ಪ್ರಪಂಚದಲ್ಲಿ ಭಾರಿ ಸದ್ದು ಮಾಡುತ್ತಿರುವ ಜಿಮ್ನಿ 2023ರಲ್ಲಿ ಭಾರತದಲ್ಲಿ ಲಾಂಚ್ ಆಗುವುದಕ್ಕೆ ರೋಡ್ ಟೆಸ್ಟ್ ಗಳನ್ನು ನಡೆಸಲಾಗುತ್ತಿದೆಯಂತೆ. ಈ ಕಾರ್ 2023ರ ಜನವರಿ ತಿಂಗಳಿನಲ್ಲಿ ಆಟೋ ಎಕ್ಸ್ಪೋ ದಲ್ಲಿ ಮಾರಾಟ ಆಗಬಹುದು ಎಂದು ಮಾಹಿತಿ ಸಿಕ್ಕಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಎಕ್ಸ್ಪೋ ದಲ್ಲಿ ಜಿಮ್ನಿ ಕಾರ್ ಅನಾವರಣಗೊಂಡ ಬಳಿಕ ಅಧಿಕೃತವಾಗಿ ಬಿಡುಗಡೆ ಆಗಿದೆ ಎಂದು ಅರ್ಥ. ಈ ಕಾರ್ ಪ್ರಸ್ತುತ ಯುವ ಜನತೆಯ ಗಮನ ಸೆಳೆಯುತ್ತಿರುವ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಕಾರ್ ಗೆ ಭಾರಿ ಪೈಪೋಟಿ ನೀಡಲಿದೆ. ಜಿಮ್ನಿ ಕಾರ್ ನಲ್ಲಿ 1.5 ಲೀಟರ್ ಕೆ15ಬಿ ಪೆಟ್ರೋಲ್ ಇಂಜಿನ್ ಇದೆ, ಇದರ ಜೊತೆಗೆ ವೈಲ್ಡ್ ಹೈಬ್ರಿಡ್ ಟೆಕ್ನಾಲಜಿಯನ್ನು ಕೂಡ ಹೊಂದಿದೆ. ಉತ್ತಮ ಪರ್ಫಾರ್ಮೆನ್ಸ್ ಹಾಗು ಒಳ್ಳೆಯ ಇಂಧನ ದಕ್ಷತೆಯನ್ನು ಸಹ ನೀಡುತ್ತದೆ. ಈ ಕಾರ್ ನ ವಿಶೇಷತೆಯ ಬಗ್ಗೆ ಹೇಳುವುದಾದರೆ, ಬೇರೆ ಬೇರೆ ರೀತಿಯ ಇಂಜಿನ್ ಆಯ್ಕೆಗಳಲ್ಲಿ 3 ಡೋರ್ ವರ್ಷನ್ ಗಳಲ್ಲಿ ಜಿಮ್ನಿ ಕಾರ್ ಮಾರಾಟ ಆಗುತ್ತಿದೆ. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟು ಬಿಟ್ಟ ಏರ್ಟೆಲ್: ಕೇವಲ 9.15 ರೂ ಗೆ ಏನು ಕೊಡುತ್ತಿದೆ ಗೊತ್ತೇ?

ನಮ್ಮ ದೇಶದಲ್ಲಿ ಈ ಕಾರ್ ಅನ್ನು ಮಾರಾಟ ಮಾಡಲು 3ಡೋರ್ ಬದಲಾಗಿ, 5 ಡೋರ್ ವರ್ಷನ್ ಮಾರಾಟ ಮಾಡಲಿದೆ. ಜಿಮ್ನಿ ಎಂದು ಇರುವ ಹೆಸರನ್ನು ಬದಲಾಯಿಸಿ, ಭಾರತದಲ್ಲಿ ಬಹಳ ವರ್ಷಗಳಿಂದ ಇರುವ ಜಿಪ್ಸಿ ಎನ್ನುವ ಹೆಸರನ್ನೇ ಇಡಬಹುದು ಎಂದು ಹೇಳಲಾಗುತ್ತಿದೆ. ವರ್ಷಗಳ ಹಿಂದೆ ಜಿಪ್ಸಿ ಕಾರ್ ತಯಾರಿಕೆಯನ್ನು ಸಂಸ್ಥೆ ನಿಲ್ಲಿಸಿತ್ತು, ಈ ಮೂಲಕ ಮುಂದುವರೆಸಬಹುದು ಎನ್ನಲಾಗುತ್ತಿದೆ. ಹೊಸ ಜಿಮ್ನಿ ಕಾರ್ ಲ್ಯಾಡರ್ ಫ್ರೇಮ್ ಚಾಸಿಸ್ ಆಧಾರದ ಮೇಲೆ ತಯಾರಾಗಿದ್ದು,3 ಲಿಂಕ್ ಆಕ್ಸಲ್ ಸಸ್ಪೆಂಷನ್ ಇದರಲ್ಲಿದೆ ಹಾಗೆಯೇ 4X4 ಸೌಲಭ್ಯ ಇರಲಿದೆ. ಈಗ ಸಿಕ್ಕಿರುವ ಮಾಹಿತಿಯ ಅನುಸಾರ, ಈ ಕಾರ್ ನ ಬೆಲೆ ಸುಮಾರು 12 ರಿಂದ 15 ಲಕ್ಷ ರೂಪಾಯಿಯ ಒಳಗೆ ಇರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.