Saving Schemes: ಗಂಡ ಹೆಂಡತಿಗಾಗಿ ಪೋಸ್ಟ್ ಆಫೀಸ್ ನಲ್ಲಿ ಹೊಸ ಯೋಜನೆ: ಕಂಡು ಕೆಲರಿಯಂತೆ 25 ಲಕ್ಷ ಪಡೆಯುವ ಯೋಜನೆ; ಎಷ್ಟು ಸುಲಭ ಗೊತ್ತೇ??

Saving Schemes: ಹಣ ಉಳಿತಾಯ ಮಾಡುವ ಪ್ಲಾನ್ ನಲ್ಲಿ ಇರುವವರಿಗೆ ಪೋಸ್ಟ್ ಆಫೀಸ್ (Post Office) ನಲ್ಲಿ ಬಹಳಷ್ಟು ಸ್ಕೀಮ್ ಗಳು ಸಿಗುತ್ತದೆ. ಸ್ಥಿರವಾದ ಮತ್ತು ನಿಶ್ಚಿತವಾದ ಹಣ ಉಳಿತಾಯಕ್ಕೆ ಪೋಸ್ಟ್ ಆಫೀಸ್ ಉತ್ತಮವಾದ ಆಯ್ಕೆ ಆಗಿರುತ್ತದೆ. ಅದರಲ್ಲೂ ಹಿರಿಯ ನಾಗರೀಕರ ಉಳಿತಾಯ ಯೋಜನೆ ಪ್ರಮುಖವಾದದ್ದು, ಈ ಯೋಜನೆಯ ಅಡಿಯಲ್ಲಿ ಬಹಳಷ್ಟು ಪ್ರಯೋಜನಗಳು ಕೂಡ ಸಿಗುತ್ತದೆ. ಇನ್ನು ಕೆಲವು ಸಣ್ಣ ಉಳಿತಾಯ ಯೋಜನೆ ಇದ್ದರು ಸಹ, ಹೆಚ್ಚು ಬಡ್ಡಿ ಸಿಗುವ ಯೋಜನೆ ಕೂಡ ಇದೇ ಆಗಿದೆ.

ಈಗ ಮೋದಿ (Narendra Modi) ಅವರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ (Small Savings Scheme) ಮೇಲೆ ಬಡ್ಡಿ ದರವನ್ನು ಕೂಡ ಜಾಸ್ತಿ ಮಾಡಿದೆ. ಏಪ್ರಿಲ್ 1ರಿಂದ ಹೊಸ ಬಡ್ಡಿದರ ಜಾರಿಗೆ ಬರಲಿದ್ದು, ಈಗ 8.2% ಬಡ್ಡಿದರ ನಿಮಗೆ ಸಿಗುತ್ತದೆ. ಹಿರಿಯ ನಾಗರೀಕರ ಯೋಜನೆ ಮುಗಿಯುವುದು 5 ವರ್ಷಕ್ಕೆ, ಈ ಯೋಜನೆಯಲ್ಲಿ ನೀವು ಒಂದು ಸಾರಿ ಹಣವನ್ನು ಠೇವಣಿ ಇಟ್ಟರೆ, ಅದನ್ನು 5 ವರ್ಷಗಳ ವರೆಗು ವಾಪಸ್ ಪಡೆಯಲು ಸಾಧ್ಯವಾಗುವುದಿಲ್ಲ. ಕೊನೆಯಲ್ಲಿ ನಿಮಗೆ ಅಸಲಿನ ಜೊತೆಗೆ ಬಡ್ಡಿ ಹಣವನ್ನು ಸಹ ಕೊಡುತ್ತಾರೆ. ಇದನ್ನು ಓದಿ..Savings Tips: ತಿಂಗಳಿಗೆ ಹೆಚ್ಚು ಬೇಡ, 500 ರೂಪಾಯಿ ಉಳಿಸಿ, ಬರೋಬ್ಬರಿ 35 ಲಕ್ಷ ಪಡೆಯುವುದು ಹೇಗೆ ಗೊತ್ತೇ?? ಇದಕ್ಕಿಂತ ಬೆಸ್ಟ್ ಆಯ್ಕೆ ಮತ್ತೊಂದು ಇಲ್ಲ.

ಈ ಯೋಜನೆ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಸೆಂಟ್ರಲ್ ಗವರ್ನಮೆಂಟ್ ವತಿಯೊಂದು ಇನ್ನೊಂದು ಸಿಹಿ ಸುದ್ದಿ ಕೂಡ ಸಿಕ್ಕಿದ್ದು, ಈ ಯೋಜನೆಯಲ್ಲಿ ಠೇವಣಿ ಇಡಬಹುದಾದ ಹಣದ ಮೊತ್ತವನ್ನು ಈಗ ಜಾಸ್ತಿ ಮಾಡಲಾಗಿದೆ, ಅಂದರೆ ದ್ವಿಗುಣಗೊಳಿಸಲಾಗಿದೆ. ಮೊದಲು ಈ ಸ್ಕೀಮ್ ನಲ್ಲಿ 15 ಲಕ್ಷದ ವರೆಗು ಠೇವಣಿ ಇಡಬಹುದಿತ್ತು, ಆದರೆ ಈಗ 30 ಲಕ್ಷದ ವರೆಗು ಹಿರಿಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು.

ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಈ ಯೋಜನೆಯಲ್ಲಿ ಹಿರಿಯರು 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಐದು ವರ್ಷಕ್ಕೆ 8.2% ಬಡ್ಡಿಯ ಜೊತೆಗೆ ₹42.3 ಲಕ್ಷ ರೂಪಾಯಿ ನಿಮ್ಮ ಕೈಗೆ ಬರುತ್ತದೆ. ಐದು ವರ್ಷದಲ್ಲಿ 12 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಸಿಗುತ್ತದೆ. ಈ ಯೋಜನೆಯಲ್ಲಿ 3 ತಿಂಗಳಿಗೆ ಒಂದು ಸಾರಿ ಬಡ್ಡಿ ಸಿಗುತ್ತದೆ, ₹61,500 ರೂಪಾಯಿ ಬರುತ್ತದೆ, ಅಂದರೆ ಒಂದು ವರ್ಷಕ್ಕೆ ₹2.46ಲಕ್ಷ ರೂಪಾಯಿ ಬರುತ್ತದೆ. ಗಂಡ ಹೆಂಡತಿ ಇಬ್ಬರು ಈ ಯೋಜನೆಗೆ ಸೇರಿಕೊಂಡರೆ, ಇಬ್ಬರಿಗೂ 12.3ಲಕ್ಷ ಸಿಗುತ್ತದೆ. ಇಬ್ಬರಿಗೂ ಸೇರಿಸಿ 25ಲಕ್ಷ ರೂಪಾಯಿ ಪಡೆಯಬಹುದು. ಇದನ್ನು ಓದಿ..Savings Scheme: ಕೇವಲ 417 ರೂಪಾಯಿಯಂತೆ ಕೂಡಿಟ್ಟು, ಒಂದು ಕೋಟಿ ಖಚಿತ ಹಣ ಪಡೆಯುವುದು ಹೇಗೆ ಗೊತ್ತೇ? ಈ ಯೋಜನೆಯೇ ಬೆಸ್ಟ್.

kannada news livelive newspost officepost office savings schemesavings schemesmall savings scheesmall savings scheme