Kannada News: ತಿರುಪತಿಗೆ ಹೋಗುತ್ತಿರುವ ಎಲ್ಲಾ ಭಕ್ತರಿಗೆ ಮಹತ್ವದ ಮಾಹಿತಿ: ಇನ್ನು ಮುಂದೆ ತಿರುಪತಿಯಲ್ಲಿ ಏನೆಲ್ಲಾ ಬದಲಾಗಿದೆ ಗೊತ್ತೇ??

Kannada News: ನಮ್ಮ ದೇಶದಲ್ಲಿ ಅತಿಹೆಚ್ಚಿನ ಜನರು ದರ್ಶನ ಪಡೆಯುವ ಪುಣ್ಯಸ್ಥಳಗಳಲ್ಲಿ ಅಗ್ರಸ್ಥಾನದಲ್ಲಿ ಇರುವುದು ತಿರುಪತಿ (Tirupati) ಎಂದು ಹೇಳಬಹುದು. ದೇಶ ವಿದೇಶಗಳಿಂದ ಭಕ್ತಾದಿಗಳು ಇಲ್ಲಿಗೆ ದೇವರ ಆಶೀರ್ವಾದ ಪಡೆಯಲು ಬರುತ್ತಾರೆ. ಇದೀಗ ಕಳೆದ ಎರಡು ದಿನಗಳಿಂದ ತಿರುಪತಿಗೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರುಗಳಿಗಾಗಿ ತಿರುಪತಿಯಲ್ಲಿ ಟಿಟಿಡಿ (TTD) ಕೆಲವು ಹೊಸ ವ್ಯವಸ್ಥೆಗಳನ್ನು ಮಾಡಿದೆ.

ತಿರುಪತಿಗೆ ಹೋಗಬೇಕು ಎಂದು ಪ್ಲಾನ್ ಮಾಡಿಕೊಂಡಿರುವವರು ಟಿಟಿಡಿಯಲ್ಲಿ ನೀಡುತ್ತಿರುವ ಈ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳಬೇಕು. ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಬಿಲ್ಡಿಂಗ್ ನಲ್ಲಿ ಭಕ್ತರಿಗೆ ಊಟ, ಹಾಲು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ, ತಿರುಮಲದಲ್ಲಿರುವ ಅನ್ನ ಪ್ರಸಾದದ ಕೌಂಟರ್ ಗಳು, ನಾರಾಯಣಗಿರಿ ಪಾರ್ಕ್ ಮತ್ತು ಹೆಚ್ಜು ಭಕ್ತರು ಇರುವ ಜಾಗದಲ್ಲಿ ಊಟ, ಹಾಲು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಸೇವಕರು ಆಹಾರ, ಆರೋಗ್ಯ ಮತ್ತು ಮುಂಜಾಗ್ರತೆ ಇಲಾಖೆಗಳು ಎಲ್ಲದರಲ್ಲೂ ಒಳ್ಳೆಯ ಸೇವೆ ನೀಡುತ್ತಿದ್ದಾರೆ. ಇದನ್ನು ಓದಿ..Saving Scheme: ಭರ್ಜರಿ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಇದೆ, ಏಪ್ರಿಲ್ ನಿಂದ ಶುರುವಾಗಿದೆ ಡಬಲ್ ಲಾಭ. ಚಿಲ್ಲರೆ ಹಾಕಿ ಲಕ್ಷ ಲಕ್ಷ ಪಡೆಯುವುದು ಹೇಗೆ ಗೊತ್ತೇ??

ಟಿಟಿಡಿ ಅಧಿಕಾರಿಗಳು ಹೇಳುವ ಹಾಗೆ, ಭಕ್ತರಿಗೆ ಇಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ. ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಸಮುದಾಯ ಭವನದಲ್ಲಿ ಸುಮಾರು 79,000 ಜನರಿಗೆ ಮಧ್ಯಾಹ್ನದ ಭೋಜನ ವಿತರಿಸಲಾಗಿದೆ, ಹಾಗೆಯೇ ವೈಕುಂಠಂ ಸರತಿ ಸಾಲಿನಲ್ಲಿ, 80 ಸಾವಿರ ಜನರಿಗೆ ಅನ್ನಪ್ರಸಾದ ನೀಡಲಾಗಿದೆ. ಯಾವಾಗಲೂ ಇರುವುದಕ್ಕಿಂತ ಇದು ದುಪ್ಪಟ್ಟು ಆಗಿದ್ದು, ಇದರ ಜೊತೆಗೆ ಮಕ್ಕಳಿಗೆ ಹಾಲಿನ ವ್ಯವಸ್ಥೆ ಮಾಡಲಾಗಿದೆ.
ಭಕ್ತರು ಸಾಲಿನಲ್ಲಿ ಚಲಿಸುವಾಗ, ಕಾಲ್ತುಳಿತಕ್ಕೆ ಯಾರು ಸಿಲುಕದ ಹಾಗೆ.

ಯಾರಿಗೂ ತೊಂದರೆ ಆಗದ ಹಾಗೆ, ಟಿಟಿಡಿ ವಿಜಿಲೆನ್ಸ್ ಹಾಗೂ ಅಲ್ಲಿನ ಪೊಲೀಸ್ ಎಲ್ಲರೂ ಸಹ ಬಹಳ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಜನರು ಇರುವುದರಿಂದ ಟೋಕನ್ ಗಳು ಇರುವ ಭಕ್ತರು ಮಾತ್ರ ತಿರುಮಲಕ್ಕೆ ಎಂದು ಟಿಟಿಡಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಟಿಟಿಡಿ ಇಓ ಶ್ರೀ ಎ.ವಿ.ಧರ್ಮಾ ರೆಡ್ಡಿ ಅವರು ಹೇಳಿರುವ ಜಾಗೆ, ಜೆಇಓ ಶ್ರೀ ವೀರಬ್ರಹ್ಮ ಅವರು ಇಂಜಿನಿಯರಿಂಗ್, ಅನ್ನಪ್ರಸಾದ, ಆರೋಗ್ಯ, ಹೆಲ್ತ್ ಇದೆಲ್ಲವನ್ನು ನೋಡುಕೊಳ್ಳುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಹೀಗಿರುವಾಗ, ಜನರು ಈಗ ಹೋಗುವುದನ್ನು ಕಡಿಮೆ ಮಾಡುವುದೇ ಒಳ್ಳೆಯದು. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Best News in Kannadakannada livekannada newsKannada Trending Newslive newsLive News Kannadalive trending newsNews in Kannadatirumalatirupatitop news kannada