Airtel Plans: ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್ ಸ್ಟಾರ್, ಹೀಗೆ OTT ಪ್ಲಾಟ್ಫಾರ್ಮ್ ಗಳನ್ನು ಉಚಿತವಾಗಿ ನೀಡುವ ಏರ್ಟೆಲ್ ಪ್ಲಾನ್ ಗಳು ಯಾವ್ಯಾವು ಗೊತ್ತೇ??

Airtel Plans: ನಮ್ಮ ದೇಶದ ಪ್ರಮುಲಹ ಟೆಲಿಕಾಂ ಕಂಪೆನಿಗಳಲ್ಲಿ ಒಂದು ಏರ್ಟೆಲ್ ಸಂಸ್ಥೆ, ಈ ಸಂಸ್ಥೆಯು ಗ್ರಾಹಕರಿಗೆ ಒಳ್ಳೆಯ ಪ್ಲಾನ್ ಗಳನ್ನು ನೀಡುತ್ತಿದೆ. ಈ ವರ್ಷ ಏರ್ಟೆಲ್ ಸಂಸ್ಥೆ ಹೊಸ ಯೋಜನೆ ಹಾಕಿಕೊಂಡಿದ್ದು, ಅದರ ಪ್ರಕಾರ, 2023ರ ಡಿಸೆಂಬರ್ ವೇಳೆಗೆ ಭಾರತ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಶುರು ಮಾಡಲಿದೆ. 300ಕ್ಕಿಂತ ಹೆಚ್ಚು ನಗರಗಳಲ್ಲಿ 5ಜಿ ಸೇವೆ ಸಿಗಲಿದೆ. ಈ ಸೇವೆಯು ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ ಗಳ ಮೂಲಕ ಸಿಗಲಿದೆ. ಏರ್ಟೆಲ್ ಪ್ಲಾನ್ ಗಳಲ್ಲಿ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ ಕೂಡ ಸಿಗಲಿದ್ದು, ಆ ಪ್ಲಾನ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

499 ರೂಪಾಯಿಯ ಪ್ಲಾನ್ :- ಏರ್ಟೆಲ್ ನ ಈ ಪ್ಲಾನ್ ನಲ್ಲಿ, ದಿನಕ್ಕೆ 100 ಉಚಿತ ಎಸ್.ಎಂ.ಎಸ್, 5ಜಿ ಇಂಟರ್ನೆಟ್ ಸೇವೆ, 3 ತಿಂಗಳಿಗೆ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ ಸಿಗಲಿದ್ದು, ಇದು 28 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ಆಗಿದೆ. ಇದರ ಜೊತೆಗೆ ಏರ್ಟೆಲ್ ಏಕ್ಸ್ಟ್ರೀಮ್ ಹಾಗೂ ಬೇರೆ ಏರ್ಟೆಲ್ ಅಪ್ಲಿಕೇಶನ್ ಗಳು ಸಿಗುತ್ತದೆ. 5ಜಿ ಸೇವೆ ಸಿಗದವರಿಗೆ ಅನ್ ಲಿಮಿಟೆಡ್ 4ಜಿ ಡೇಟಾ ಹಾಗೂ 3ಜಿಬಿ ಡೇಲಿ ಡೇಟಾ ಸಿಗುತ್ತದೆ.

ಇದನ್ನು ಓದಿ: SBI Scheme: ಹಣವನ್ನೇ ಮನೆಯಲ್ಲಿ ಇಡುವ ಬದಲು ಈ ಭರ್ಜರಿ ಯೋಜನೆಯಲ್ಲಿ ಹೂಡಿಕೆ ಮಾಡಿ, ಹೆಚ್ಚು ಲಾಭ ಗಳಿಸುವುದು ಹೇಗೆ ಗೊತ್ತೇ?SBI ತಂದಿದೆ ಭರ್ಜರಿ ಯೋಜನೆ

839 ರೂಪಾಯಿಯ ಯೋಜನೆ :- ಈ ಪ್ಲಾನ್ ನಲ್ಲಿ ನಿಮಗೆ ಅನ್ ಲಿಮಿಟೆಡ್ 5ಜಿ ಡೇಟಾ, ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 ಫ್ರೀ ಎಸ್.ಎಂ.ಎಸ್, 3 ತಿಂಗಳು ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ, ಸಿಗುತ್ತದೆ. 5ಜಿ ಸೇವೆ ಸಿಗದವರಿಗೆ ಕೂಡ ಇದು ಒಳ್ಳೆಯ ಪ್ಲಾನ್ ಆಗಿದ್ದು, ಡೇಲಿ 2ಜಿಬಿ ಡೇಟಾ ಹಾಗೂ ಅನ್ ಲಿಮಿಟೆಡ್ 4ಜಿ ಡೇಟಾ ಸಿಗುತ್ತದೆ. ಈ ಯೋಜನೇಯು 84 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆ ಆಗಿದೆ.

3,359 ರೂಪಾಯಿಯ ಯೋಜನೆ :- ಈ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ 5ಜಿ ಡೇಟಾ, ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 ಫ್ರೀ ಎಸ್.ಎಂ.ಎಸ್, 1 ವರ್ಷದ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ, ಸಿಗುತ್ತದೆ. 5ಜಿ ಸೇವೆ ಸಿಗದವರಿಗೆ ಕೂಡ ಇದು ಒಳ್ಳೆಯ ಪ್ಲಾನ್ ಆಗಿದ್ದು, ಡೇಲಿ 2ಜಿಬಿ ಡೇಟಾ ಹಾಗೂ ಅನ್ ಲಿಮಿಟೆಡ್ 4ಜಿ ಡೇಟಾ ಸಿಗುತ್ತದೆ. ಜೊತೆಗೆ ಅಪೋಲೊ 24*7, ವಿಂಕ್ ಮ್ಯೂಸಿಕ್ ಚಂದಾದಾರಿಕೆ ಸಿಗುತ್ತದೆ. ಈ 1 ವರ್ಷದ ವ್ಯಾಲಿಡಿಟಿ ಇರುವ ಪ್ಲಾನ್ ಆಗಿದೆ.

699 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ 5ಜಿ ಡೇಟಾ, ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 ಫ್ರೀ ಎಸ್.ಎಂ.ಎಸ್, ಹಾಗೂ 56 ದಿನಗಳಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಸಿಗುತ್ತದೆ.. 5ಜಿ ನೆಟ್ವರ್ಕ್ ಸಿಗದ ಜಾಗದಲ್ಲಿ ಇದ್ದರೆ, 3ಜಿಬಿ ಡೇಲಿ ಡೇಟಾ ಹಾಗೂ ಅನ್ ಲಿಮಿಟೆಡ್ 4ಜಿ ಡೇಟಾ ಸಿಗುತ್ತದೆ. ಇದು 56 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಆಗಿದೆ.

ಇದನ್ನು ಓದಿ: Business: ಏನನ್ನು ಒತ್ತೆ ಇಡದೆ, ಬಿಸಿನೆಸ್ ಮಾಡಬೇಕು ಎಂದು ಕೊಂಡಿದ್ದಾರೆ, ಇಲ್ಲಿದೆ ನಿಮಗೆ ಸುವರ್ಣಾವಕಾಶ. ಏನು ಮಾಡಬೇಕು ಗೊತ್ತೇ?

999 ರೂಪಾಯಿಯ ಪ್ಲಾನ್ :- ಅನ್ ಲಿಮಿಟೆಡ್ 5ಜಿ ಡೇಟಾ, ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 ಫ್ರೀ ಎಸ್.ಎಂ.ಎಸ್, ಹಾಗೂ 84 ದಿನಗಳಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಸಿಗುತ್ತದೆ.. 5ಜಿ ನೆಟ್ವರ್ಕ್ ಸಿಗದ ಜಾಗದಲ್ಲಿ ಇದ್ದರೆ, 2.5ಜಿಬಿ ಡೇಲಿ ಡೇಟಾ ಹಾಗೂ ಅನ್ ಲಿಮಿಟೆಡ್ 4ಜಿ ಡೇಟಾ ಸಿಗುತ್ತದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಆಗಿದೆ.

airtel ott plansairtel plansairtel plans in kannadaBest News in Kannadakannada livekannada newsKannada Trending Newslive newsLive News Kannadalive trending newsNews in Kannadatop news kannada