Student: ಭಾನುವಾರ ರಜಾ ಇತ್ತು, ಆದ್ರೂ ಶಾಲೆಗೇ ಹೋಗಿದ್ದ ಬಾಲಕಿ- 10 ನೇ ತರಗತಿ ಬೇರೆ, ಉಯ್ಯಾಲೆ ಕೂಡ ಜೋರಾಗಿತ್ತು. ಕೊನೆಗೆ ಏನಾಯ್ತು ಗೊತ್ತೇ?

Student: ಈಗ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ನಡೆಯುತ್ತಿದೆ. ಹಾಗಿದ್ದರೂ ಉತ್ತರ ಪ್ರದೇಶದ ಈ ವಿದ್ಯಾರ್ಥಿನಿಯನ್ನು ಮೇ 26ರಂದು ಶಾಲೆಗೆ ಕರೆಸಿಕೊಳ್ಳಲಾಗಿದೆ. ಆದರೆ ಶಾಲೆಗೆ ಬಂದ ಸ್ವಲ್ಪ ಹೊತ್ತಿನಲ್ಲೇ ಆಕೆ ಉಯ್ಯಾಲೆ ಮೇಲಿಂದ, ಟೆರೇಸ್ ಇಂದ ಬಿದ್ದು ಸಾವನ್ನಪ್ಪಿದ್ದಾಳೆ. ಈ ಘಟನೆ ಸ್ಥಳೀಯರಲ್ಲಿ ನಿಗೂಢತೆ ಇರುವ ಅನುಮಾನ ಮೂಡಿಸಿದೆ. ಅಷ್ಟಕ್ಕೂ ನಡೆದಿರುವುದು ಏನು ಎಂದು ತಿಳಿಸುತ್ತೇವೆ ನೋಡಿ..

ಈ ಘಟನೆ ನಡೆದಿರುವುಡು ಉತ್ತರ ಪ್ರದೇಶದ, ಅಯೋಧ್ಯೆಯ, ಸನ್ ಬೀಮ್ ಶಾಲೆಯಲ್ಲಿ. ಬೇಸಿಗೆ ರಜೆ ಇದ್ದರು ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಲಾಗಿದೆ. ಬಂದ ಸ್ವಲ್ಪ ಹೊತ್ತಿಗೆ ಈ ಅನಾಹುತ ಸಂಭವಿಸಿದೆ, ಆಕೆ ಟೆರೇಸ್ ಇಂದ ಬೀಳುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯ ಪೋಷಕರು ತಮ್ಮ ಮಗಳಿಗೆ ಹೀಗೆ ಆಗುವುದಕ್ಕೆ ಯಾರದ್ದೋ ಕೈವಾಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Kannada News: ಪಾತ್ರೆ ತೊಳೆಯುತ್ತಿದ್ದ ಹೋಟೆಲ್ ಅನ್ನು ಖರೀದಿ ಮಾಡಿದ 18 ರ ಯುವತಿ; ಪಾತ್ರೆ ತೊಳೆಯುವ ಕೆಲಸದಿಂದ ಮಾಲಿಕೆ ಆಗಿದ್ದು ಹೇಗೆ ಗೊತ್ತೇ? ಇದು ಚಿಕ್ಕ ಟ್ರಿಕ್. ನೀವು ಟ್ರೈ ಮಾಡಿ.

ಮಗಳು 8 ಗಂಟೆ ವೇಳೆಗೆ ಶಾಲೆಗೆ ಹೋಗಿದ್ದು, 8:45 ಸಮಯಕ್ಕೆ ಆಕೆ ಟೆರೇಸ್ ಇಂದ ಬಿದ್ದಿರುವ ಘಟನೆ ನಡೆದಿದೆ. 10 ಗಂಟೆ ವೇಳೆಗೆ ಆಕೆಯ ತಂದೆ ತಾಯಿಗೆ ಕರೆ ಹೋಗಿದ್ದು, ಟೆರೇಸ್ ಇಂದ ಬಿದ್ದು ನಿಮ್ಮ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಬಾಲಕಿಯ ಪೋಷಕರು ಗಾಬರಿಯಾಗಿ ಹೋಗಿ ನೋಡಿದಾಗ ಮಗಳು ಇನ್ನಿಲ್ಲವಾಗಿದ್ದಳು.

ಆದರೆ ಆಕೆಯ ಮುಖ ಊದಿದ್ದು, ಕೈಕಾಲುಗಳ ಹತ್ತಿರ ಗುರುತುಗಳು ಇರುವುದು ನೋಡಿ ಇದು ಆಕಸ್ಮಿಕ ಅಲ್ಲ, ಇದರ ಹಿಂದೆ ಸಂಚು ಇದೆ. ಶಾಲೆಯ ಉಯ್ಯಾಲೆ ಇರುವುದು ಒಂದೂವರೆ ಅಡಿ ಎತ್ತರದಲ್ಲಿ ಅದರಿಂದ ಬಿದ್ದರೆ ಹೀಗಾಗುವುದಿಲ್ಲ. ಇದರ ಹಿಂದೆ, ಶಿಕ್ಷಕ ಅಭಿಷೇಕ್ ಕನೊಜಿಯಾ ಹಾಗೂ ಆಡಳಿತ ವಿಭಾಗದ ಬ್ರಿಜೇಶ್ ಕೈವಾಡ ಇದೆ ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಈಗ ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Business Idea: ಕೇವಲ 5 ಸಾವಿರ ಹಾಕಿ, ನಿಮ್ಮ ಹಳ್ಳಿಯಲ್ಲಿಯೇ ಕನಿಷ್ಠ ತಿಂಗಳಿಗೆ 30 ಸಾವಿರ ಗಳಿಸಿ- ಬೆಂಗಳೂರಿನಲ್ಲಿ ಆದರೆ ಲಕ್ಷ ಪಕ್ಕ. ಯಾವ ಉದ್ಯಮ ಗೊತ್ತೇ??