Best Courses: ಕಡಿಮೆ ಓದಿದ್ದರೂ ಬೇಗ ಕೆಲಸ ಪಡೆಯಬೇಕು ಎಂದರೆ ಈ ಕೋರ್ಸ್ ಗಳನ್ನೂ ಮಾಡಿ.- ಕೈತುಂಬಾ ಸಂಬಳದ ಜೊತೆ ಲೈಫ್ ಸೆಟ್ಲ್ ಮಾಡಿಕೊಳ್ಳಿ.

Best Courses: ಪಿಯುಸಿ ಮುಗಿಸಿದ ನಂತರ ಮುಂದೆ ಏನು ಓದಬೇಕು ಎನ್ನುವ ಪ್ರಶ್ನೆ ಗೊಂದಲ ಎಲ್ಲರಲ್ಲೂ ಇರುತ್ತದೆ. ಹಲವು ಜನರು ಬೇಗ ಓದು ಮುಗಿಸಿ ಕೆಲಸಕ್ಕೆ ಸೇರಿ, ಚೆನ್ನಾಗಿ ಸಂಪಾದನೆ ಮಾಡಬೇಕು ಎಂದುಕೊಳ್ಳುತ್ತಾರೆ. ಅಂಥವರಿಗಾಗಿ ಕೆಲವು ಡಿಪ್ಲೊಮಾ ಕೋರ್ಸ್ ಗಳಿವೆ, ಅವುಗಳನ್ನು ಮಾಡಿಕೊಂಡರೆ ಬೇಗ ಕೆಲಸ ಸಿಗುವುದರ ಜೊತೆಗೆ, ಉತ್ತಮವಾದ ಸಂಬಳ ಕೂಡ ಸಿಗುತ್ತದೆ. ಆ ಕೋರ್ಸ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಡಿ ಫಾರ್ಮಸಿ :- ನೀವು ಮೆಡಿಸಿನ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಬಯಸಿದ್ದರೆ ಡಿ ಫಾರ್ಮ ಮಾಡಬಹುದು. ಈ ಕೋರ್ಸ್ ಮಾಡಿದ ಬಳಿಕ ನಿಮ್ಮದೇ ಮೆಡಿಕಲ್ ಸ್ಟೋರ್ ತೆರೆಯಬಹುದು. ಅಥವಾ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಬಹುದು.
ಹೋಟೆಲ್ ಮ್ಯಾನೇಜ್ಮೆಂಟ್ :- ಪಿಯುಸಿ ಮುಗಿದ ನಂತರ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವವರು ಈ ಕೋರ್ಸ್ ಮಾಡಿ ಡಿಪ್ಲೊಮಾ ಪಡೆಯಬಹುದು. ಚಿಕ್ಕ ವಯಸ್ಸಿನಲ್ಲೇ ಈ ಕೆಲಸಕ್ಕೆ ಒಳ್ಳೆಯ ಸಂಬಳ ಸಿಗುತ್ತದೆ. ಇದನ್ನು ಓದಿ..Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.

ಕಂಪ್ಯೂಟರ್ ಸೈನ್ಸ್ :- ಈಗ ಎಲ್ಲಾ ಕೆಲಸಕ್ಕೂ ಕಂಪ್ಯೂಟರ್ ಬಗ್ಗೆ ತಿಳಿದಿರಬೇಕು. ಆಗ ಕೆಲಸ್ ಸಿಗುವುದು ಕೂಡ ಸುಲಭ ಆಗುತ್ತದೆ. ಹಾಗಾಗಿ ನೀವು ಈ ಕೋರ್ಸ್ ಮಾಡಬಹುದು. ಕೆಲಸ ಮತ್ತು ಸಂಬಳ ಎರಡು ಕೂಡ ಚೆನ್ನಾಗಿರುತ್ತದೆ.
ಅನಿಮೇಷನ್ ಮಲ್ಟಿ ಮೀಡಿಯಾ :- ಇದು ಈಗ ಟ್ರೆಂಡಿಂಗ್ ಕೋರ್ಸ್ ಆಗಿದ್ದು ಒಳ್ಳೆಯ ಸಂಬಳ ಪಡೆಯಬಹುದು. ಗ್ರಾಫಿಕ್ ಡಿಸೈನರ್ ಆಗಿಯೂ ಕೆಲಸ ಮಾಡಬಹುದು.
ಪಾಲಿಟೆಕ್ನಿಕ್ ಮತ್ತು ಐಟಿಐ :- ಇದಕ್ಕೆ ಪಿಯುಸಿ ಪಾಸ್ ಅಗತ್ಯವಿಲ್ಲ, 10ನೇ ತರಗತಿ ಪಾಸ್ ಆಗಿದ್ದರು ಸಾಕು, ನೀವು ಈ ಕೋರ್ಸ್ ಗೆ ಸೇರಿಕೊಳ್ಳಬಹುದು. ಕಡಿಮೆ ಸಮಯದಲ್ಲಿ ಒಳ್ಳೆಯ ಕೆಲಸ ಪಡೆಯುತ್ತೀರಿ.

ನರ್ಸಿಂಗ್ :- ಹುಡುಗಿಯರಿಗೆ ಇದು ಒಳ್ಳೆಯ ಕೋರ್ಸ್ ಮತ್ತು ಕೆಲಸ ಆಗಿದೆ. ಡಿಪ್ಲೊನಾ ಇನ್ ನರ್ಸಿಂಗ್ ಮಾಡಿದರೆ, ಆಸ್ಪತ್ರೆಗಳಲ್ಲಿ ಸುಲಭವಾಗಿ ಕೆಲಸ ಸಿಗುತ್ತದೆ..
ಇಂಟೀರಿಯರ್ ಡಿಸೈನಿಂಗ್ :- ಆರ್ಟ್ಸ್ ಮತ್ತು ಡಿಸೈನಿಂಗ್ ಇಷ್ಟಪಡುವವರು ಇಂಟೀರಿಯರ್ ಡಿಸೈನರ್ ಆಗು ಕೆಲಸ ಮಾಡಬಹುದು. ಈ ಕೆಲಸ ಖುಷಿ ಕೊಡುತ್ತದೆ. ಜೊತೆಗೆ ಒಳ್ಳೆಯ ಆದಾಯ ಕೂಡ ಸಿಗುತ್ತದೆ. ಇದನ್ನು ಓದಿ..SIP: ನೋಡುಗುರು ಕಡಿಮೆ ಅಂದ್ರೆ 266 ರೂಪಾಯಿಯಂತೆ ಪ್ಲಾನ್ ಮಾಡಿ ನೀವು ಉಳಿಸಿದ, ಕೋಟ್ಯಧಿಪತಿ ಆಗ್ತೀರಾ. ಅದೆಷ್ಟು ಸುಲಭ ಗೊತ್ತೆ? ನೀವೇನು ಮಾಡ್ಬೇಕು ಗೊತ್ತೇ?

Best News in Kannadakannada livekannada newsKannada Trending Newslive newsLive News Kannadalive trending newsNews in Kannadatop news kannada