India: ಚೀನಾ ದೇಶದ ಬಲಿಷ್ಠ ಕಂಪನಿ ಭಾರತದ ತೆಕ್ಕೆಗೆ- ಇನ್ನು ಮುಂದೆ ಆಟ ಏನಿದ್ದರೂ ನಮ್ಮದೇ. ಏನಾಗಿದೆ ಗೊತ್ತೇ?

India: MG ಮೋಟಾರ್ಸ್ ಇದು ಭಾರತದಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿರುವ ಸಂಸ್ಥೆಗಳಲ್ಲಿ ಒಂದು, ಇದು ಶಾಂಗೈ ಮೂಲದ ಸರ್ಕಾರಿ ಸ್ವಾಮ್ಯದ ಚೈನಾದ ವಾಹನಗಳು ತಯಾರಾಗುವ SAIC ಮೋಟಾರ್ ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಗಿದೆ. ಈ ಕಾರಣದಲ್ಲಿ ನಮ್ಮ ದೇಶದಲ್ಲಿ ಈ ಸಂಸ್ಥೆ ಬರುವುದಕ್ಕೆ ಕೇಂದ್ರ ಸರ್ಕಾರ ಇನ್ನು ಒಪ್ಪಿಗೆ ನೀಡಿಲ್ಲ. 2020ರಲ್ಲಿ ಭಾರತ ಹಾಗೂ ಚೈನಾ ನಡುವೆ ಆದ ಬಾರ್ಡರ್ ಸಮಸ್ಯೆ ಇಂದ ಭಾರತ ದೇಶವು ಚೈನಾ ದೇಶದ ಕಂಪನಿಗಳ ವಿಷಯದಲ್ಲಿ ಸಾಕಷ್ಟು ನಿಬಂಧನೆಗಳನ್ನು ಹಾಕಿದೆ. ಆದರೆ MG ಕಂಪನಿಯು MG ಹೆಕ್ಟರ್, MG ಹೆಕ್ಟರ್ ಪ್ಲಸ್, MG ಆಸ್ಟರ್ ಮತ್ತು MG ಗ್ಲೋಸ್ಟರ್ ಹಾಗೂ ಬೇರೆ ಕಾರ್ ತಯಾರಿಸುವ ಕಂಪನಿಗಳು ಇಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

MG ಸಂಸ್ಥೆ ಎಲೆಕ್ಟ್ರಿಕ್ ಮೋಟಾರ್ ವಾಹನಗಳಲ್ಲಿ ಸಹ ಮುಂಚೂಣಿಯಲ್ಲಿದೆ, MG ZS EV ಮತ್ತು MG ಕಾಮೆಟ್ EV ಕಾರ್ ಗಳನ್ನು ಮಾರಾಟ ಮಾಡುತ್ತಾ ಹೆಸರು ಮಾಡುತ್ತಿದೆ. ಹಾಗಾಗಿ ಭಾರತದಲ್ಲಿ ಸಹ ತಯಾರಿಕೆ ಶುರು ಮಾಡಬೇಕು ಎಂದು ಈ ಸಂಸ್ಥೆ ಬಯಸುತ್ತಿದೆ ಆದರೆ ಅದು ಸುಲಭವಾಗಿಲ್ಲ. ಸಂಸ್ಥೆಯು ಭಾರತದಲ್ಲಿ ಅನುದಾನ ಪಡೆಯುವುದು ಕಷ್ಟವಾಗಿದೆ, ಚೀನಾ ಮೂಲದ SAIC ಸಂಸ್ಥೆ ಇದರ ಮಾಲೀಕಾರಗಿರುವ ಕಾರಣ ಕೇಂದ್ರ ಸರ್ಕಾರದ ಹಲವು ನಿರ್ಬಂಧನೆಗಳಿವೆ, ಈ ಕಾರಣಕ್ಕೆ MG ಸಂಸ್ಥೆಯು ತನ್ನ ಮಾತೃ ಸಂಸ್ಥೆಯಿಂದ ಹಣ ಸಂಗ್ರಹಿಸುವ ಹಾಗಿಲ್ಲ, ಇದರಿಂದ ಭಾರತದಲ್ಲಿ ಈ ಸಂಸ್ಥೆ ಶುರುವಾಗಲು ಬ್ರೇಕ್ ಹಾಕಿದ ಹಾಗೆ ಆಗಿದೆ. ಇದನ್ನು ಓದಿ..Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.

ಗುಜರಾತ್ ನಲ್ಲಿರುವ ಹಲೋಲ್ ಎನ್ನುವ ಕಡೆ ಈ ಸಂಸ್ಥೆ ಶುರು ಮಾಡಬೇಕು ಎಂದು ಪ್ಲಾನ್ ಮಾಡಲಾಗಿತ್ತು, ಆದರೆ ಈಗ ಇದು ನಿಂತಿದೆ, ಇದಕ್ಕೆ ಬೇರೆ ಮಾರ್ಗಗಳಿವೆ, ಆದರೆ ಈಗ ಆರ್ಥಿಕ ಸಮಸ್ಯೆಯಿಂದ ಎಲ್ಲವೂ ಅರ್ಧಕ್ಕೆ ನಿಂತಿದೆ. ಈ ಕಂಪನಿ ಭಾರತದಲ್ಲಿ ಶುರು ಆಗುವುದಕ್ಕೆ ಕೆಲವು ಸಾಧ್ಯತೆ ಇದೆ, ಒಂದು ವೇಳೆ ಈ ಸಂಸ್ಥೆಯು 45 ಇಂದ 48% ಶೇರ್ ಅನ್ನು ನಮ್ಮ ದೇಶದವರಿಗೆ ಮಾರಾಟ ಮಾಡಬೇಕೆಂದು ನಿರ್ಧಾರ ಮಾಡಿದೆ. ಆಗ ಭಾರತದ ಹೂಡಿಕೆದಾರರು ಈ ಸಂಸ್ಥೆಯ ಮೇಲೆ ಹೂಡಿಕೆ ಮಾಡುತ್ತಾರೆ, ಇದರಿಂದ ಚೈನಾದ ಮೂಲ ಕಡಿಮೆ ಆದ ಹಾಗೆ ಆಗುತ್ತದೆ..

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಭಾರತದ JSW ಗ್ರೂಪ್ ನ ಬ್ಯುಸಿನೆಸ್ ಮ್ಯಾನ್ ಸಜ್ಜನ್ ಜಿಂದಾಲ್ ಅವರು ಎಂಜಿ ಮೋಟಾರ್ ಸಂಸ್ಥೆಯ ಹೆಚ್ಚಿನ ಶೇರ್ ಖರೀದಿ ಮಾಡುವ ನಿರ್ಧಾರ ಮಾಡಿದ್ದಾರೆ, MG ಸಂಸ್ಥೆ ಭಾರತದಲ್ಲಿ ಶುರುವಾಗಲು ಇದೊಂದು ಕಾರಣವಿದೆ. ಮಹಿಂದ್ರ ಹಾಗೂ ಮಹಿಂದ್ರ ಎಂಜಿ ಮೋಟಾರ್ ಕಂಪನಿ ಸಹ ಶೇಟ್ ಪಡೆಯುವ ಪ್ರಯತ್ನದಲ್ಲಿದೆ. ಹಿಂದುಜಾ ಗ್ರೂಪ್ ಸಹ ಶೇರ್ ಪಡೆಯುವ ಪ್ರಯತ್ನದಲ್ಲಿದೆ. ಮೊದಲು ಇಂಗ್ಲೆಂಡ್ ಮೂಲದ ಕಂಪನಿ ಆಗಿದ್ದ MG ಗ್ರೂಪ್ಸ್ ನ ಈಗಿನ ಮಾಲೀಕರು ಚೈನಾ ದೇಶದವರು, ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Motorola Edge 40: ಫೈರ್ – ಬೋಲ್ಟ್ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಹೇಗಿದೆ ಗೊತ್ತೇ?? ದೀರ್ಘ ಬ್ಯಾಟರಿ, ಕರೆ ಮಾಡುವುದರ ಜೊತೆಗೆ ಏನೆಲ್ಲಾ ಇದೆ ಗೊತ್ತೇ? ತಿಳಿದರೆ ಇಂದೇ ಖರೀದಿ ಮಾಡುತ್ತೀರಿ

automobilesbest kannada newsindia chinakannada newskannada news livelive kannada newsmg motorsnarendra modi