Ambati Rayudu: ಫುಲ್ ಬಿಲ್ಡ್ ಅಪ್ ಕೊಟ್ಟು ರಾಜಕೀಯ ಎಂಟ್ರಿ ಸಿದ್ಧವಾಗುತ್ತಿರುವ ರಾಯುಡು- ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

Ambati Rayudu: ರಾಜಕೀಯ ಎನ್ನುವುದು ಒಂದು ಸಮುದ್ರದ ಹಾಗೆ ಇಲ್ಲಿ ಯಶಸ್ವಿಯಾಗಿ ತೇಲುವುದು ಸುಲಭದ ಕೆಲಸವಲ್ಲ. ಈ ಹಿಂದಿನಿಂದಲೂ ಹಲವು ಸಿನಿಮಾ ಕಲಾವಿದರು, ಕ್ರೀಡೆಯಲ್ಲಿ ನಿರತರಾಗಿರುವವರು ರಾಜಕೀಯಕ್ಕೆ ಬಂದಿರುವ ಉದಾಹರಣೆ ಸಾಕಷ್ಟಿದೆ. ಇದೀಗ ಮತ್ತೊಬ್ಬ ಕ್ರಿಕೆಟಿಗ ರಾಜಕೀಯಕ್ಕೆ ಎಂಟ್ರಿ ಕೊಡುವುದು ಫಿಕ್ಸ್ ಆಗಿದೆ. ಅವರು ಮತ್ಯಾರು ಅಲ್ಲ ಅಂಬಾಟಿ ರಾಯುಡು (Ambati Rayudu).

ambati rayudu started activity in politics

ಈ ಯುವ ಕ್ರಿಕೆಟಿಗ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಇವರು ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರನ್ನು ಭೇಟಿ ಮಾಡಿದ ನಂತರ ಈ ವಿಚಾರ ಹೆಚ್ಚಾಗಿ ಕೇಳಿಬರಲು ಶುರುವಾಯಿತು. ಇನ್ನು ವೈಸಿಸಿ (YCC) ವಿರುದ್ಧ ಟ್ವೀಟ್ ಗಳನ್ನು ಮಾಡಿದ್ದು, ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವ ಕುತೂಹಲವನ್ನು ಇನ್ನು ಜಾಸ್ತಿ ಮಾಡಿತ್ತು. ಆದರೆ ಈಗ ಅಂಬಾಟಿ ರಾಯುಡು (Ambati Rayudu) ರಾಜಕೀಯಕ್ಕೆ ಬರುವುದು ಪಕ್ಕಾ ಎಂದು ಅವರೇ ತಿಳಿಸಿದ್ದಾರೆ.. ಇದನ್ನು ಓದಿ..Shakti Yojane: ಶಕ್ತಿ ಯೋಜನೆಯ ಶಕ್ತಿ ಬಹಿರಂಗ- ಮಹಿಳೆಯರಿಗೆ ಉಚಿತ ಬಸ್ ನೀಡಿದ್ದಕೆ ಇದುವರೆಗೂ ಖರ್ಚಾದದ್ದು ಎಷ್ಟು ಕೋಟಿ ಗೊತ್ತೇ? ಸಾರಿಗೆ ಬೊಕ್ಕಸ ಉಡೀಸ್.

ಇತ್ತೀಚೆಗೆ ಅಂಬಾಟಿ ರಾಯುಡು (Ambati Rayudu) ಅವರು ಗುಂಟೂರು (Guntur) ಜಿಲ್ಲೆಯ ವಟ್ಟಿಚೆರುಕೂರು ಗ್ರಾಮಕ್ಕೆ ಭೇಟಿ ನೀಡಿ, ಹಳ್ಳಿ ಜನರ ಜೊತೆಗೆ ಸಮಯ ಕಳೆದು, ಅವರ ಕಷ್ಟಸುಖಗಳ ಬಗ್ಗೆ ಮಾತನಾಡಿದ್ದಾರೆ. ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಅಂಬಟಿ ರಾಯುಡು (Ambati Rayudu) ಅವರು.. ಇಲ್ಲಿನ ಜನರು, ಅವರ ಮನಸ್ಥಿತಿ ಹೇಗಿದೆ ಎಂದು ಅರ್ಥ ಮಾಡಿಕೊಳ್ಳುವುದಕ್ಕಾಗಿ ಗ್ರಾಮಗಳಿಗೆ ಬಂದಿದ್ದೇನೆ, ಅವರಿಗೆ ಏನು ಬೇಕು ಏನು ಬೇಡ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳುತ್ತೇನೆ..

ಅದೆಲ್ಲವನ್ನು ತಿಳಿದುಕೊಂಡ ನಂತರ ರಾಜಕೀಯಕ್ಕೆ ಬರುತ್ತೇನೆ…ಜನಸೇವೆ ಶುರು ಮಾಡುವುದಕ್ಕಿಂತ ಮೊದಲು ಎಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಂಡಿರಬೇಕು.. ಎಂದಿದ್ದಾರೆ ಅಂಬಟಿ ರಾಯುಡು. ಇದೀಗ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ. ಕ್ರಿಕೆಟ್ ನಂತರ ರಾಜಕೀಯಕ್ಕೆ ಬರಲು ಸಜ್ಜಾಗಿರುವ ಅಂಬಟಿ ರಾಯುಡು (Ambati Rayudu) ಅವರನ್ನು ಜನರು ಹೇಗೆ ಸ್ವಾಗತ ಮಾಡುತ್ತಾರೆ ಎನ್ನುವ ಕುತೂಹಲ ಇದೆ. ಇದನ್ನು ಓದಿ..Amazon Prime Day: ಮತ್ತೆ ಬರುತ್ತಿದೆ ಅಮೆಜಾನ್ ಪ್ರೈಮ್ ಡೇ- ಈ ಬಾರಿಯ ಭರ್ಜರಿ ಆಫರ್, ಹೊಸ ವಸ್ತುಗಳು ಮಾರಾಟಕ್ಕೆ. ವಿಶೇಷತೆ, ಡೀಟೇಲ್ಸ್.

ಮುಂಬರುವ ಲೋಕಸಭಾ ಎಲೆಕ್ಷನ್ ನಲ್ಲಿ ಗುಂಟೂರು ಅಥವಾ ಕೃಷ್ಣ ಕ್ಷೇತ್ರದಿಂದ ಇವರು ಎಲೆಕ್ಷನ್ ಗೆ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಸಹ, ಪೊನ್ನೂರು ಅಥವಾ ಗುಂಟೂರು ಕ್ಷೇತ್ರದಿಂದ ಅಂಬಟಿ ರಾಯುಡು (Ambati Rayudu) ಅವರು ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಪಕ್ಷದವರು ಸಹ ಅಂಬಟಿ ರಾಯುಡು ಅವರಿಗೆ ಟಿಕೆಟ್ ಕೊಡುವುದಕ್ಕೆ ಸಿದ್ಧವಾಗಿದ್ದಾರೆ. ಹಾಗಾಗಿ ಈ ಸಾರಿ ಅಂಬಟಿ ರಾಯುಡು ಅವರು ಎಲೆಕ್ಷನ್ ಗೆ ನಿಲ್ಲುವುವುದು ಪಕ್ಕಾ ಎನ್ನಲಾಗುತ್ತಿದೆ. ಇದನ್ನು ಓದಿ..Law: ಹೆಂಡತಿಯರು ಪದೇ ಪದೇ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ, ಆದರೆ ಅದರಲ್ಲಿ ನಿಜಾಂಶದ ಶೇಕಡಾವಾರು ಲೆಕ್ಕಾಚಾರ ಕಂಡು ಶಾಕ್.

ambati rayuduBest News in Kannadajagan mohan reddykannada livekannada newsKannada Trending Newslive newsLive News Kannadalive trending newsNews in Kannadatop news kannada