ಚಿಕನ್ ಸುಕ್ಕಾಗೆ ಒಳ್ಳೆ ಕಾಂಬಿನೇಷನ್ ಈ ಕಪ್ಪರೊಟ್ಟಿ/ಓಡುದೋಸೆ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಚಿಕ್ಕನ್ ಸುಕ್ಕಾ ಎಂದರೆನೇ ಬಾಯಲ್ಲಿ ನಿರೂರುತ್ತೆ. ಇನ್ನು ಇದಕ್ಕೊಂದು ಸೂಪರ್ ಕಾಂಬಿನೇಶನ್ ದೋಸೆ ಇದ್ದರೆ ಹೇಗೆ? ಹೌದು ಓಡ್ ದೋಸೆ ಅಥವಾ ಕಪ್ಪ ರೊಟ್ಟಿ ಚಿಕ್ಕನ್ ಸುಕ್ಕಾ ಸವಿಯೋಕೆ ಸೂಟ್ ಆಗತ್ತೆ. ಈ ದೋಸೆಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡೋದು ಹೇಗೆ? ಮುಂದೆ ಓದಿ..

ಓಡು ದೋಸೆ ಮಾಡಲು ಬೇಕಾಗಿರುವ ಸಾಮಗ್ರಿಗಳು: ಅಕ್ಕಿ 3 ಕಪ್, ತೆಂಗಿನ ತುರಿ ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರು. ದೋಸೆ ಮಾಡುವ ವಿಧಾನ: 3 ಕಪ್ ಅಕ್ಕಿಯನ್ನು ರಾತ್ರಿಪೂರ್ತಿ ನೆನೆಸಿಡಿ. ಬೆಳಗ್ಗೆ ಎದ್ದು ದೋಸೆಗೆ ಹಿಟ್ಟು ರುಬ್ಬಿದರಾಯಿತು. ರುಬ್ಬುವಾಗ ಅಕ್ಕಿ ಹಾಗೂ ಅದಕ್ಕೆ ತಾಜಾ ಕಾಯಿತುರಿಯನ್ನು ಸೇರಿಸಿ ನಂತರ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಗೂ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ಹಿಟ್ಟು ಸ್ವಲ್ಪ ಗಟ್ಟಿಯಾಗಿಯೇ ಇರಲಿ ನೀರು ದೋಸೆಯಷ್ಟು ತೆಳ್ಳಗಾಗುವುದು ಬೇಡ.

ಓಡು ದೋಸೆಯನ್ನು ಓಡು ಅಂದರೆ ಮಣ್ಣಿನ ತವಾ ಮೇಲೆಯೇ ಮಾಡಬೇಕು. ಹಿಟ್ಟನ್ನು ತವಾ ಕಾದ ಕೂಡಲೇ ಹಾಕಿ. ಇದನ್ನು ದಪ್ಪವಾಗಿಯೇ ಮಾಡಬೇಕು. ತೆಳ್ಳಗೆ ಹುಯ್ಯಬೇಡಿ. ಒಂದೆರಡು ಹುಟ್ಟು ದೋಸೆ ಹಿಟ್ಟನ್ನು ತವಾ ಮೇಲೆ ಹಾಗೆಯೇ ಮುಚ್ಚಳ ಮುಚ್ಚಿ. ಈ ದೋಸೆಗೆ ಎಣ್ಣೆಯನ್ನು ಬಳಸುವುದಿಲ್ಲ. ಹಾಗಾಗಿ ದೋಸೆ ತವಾಗೆ ಹಿಡಿದುಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ದೋಸೆ ಮುಚ್ಚಳದ ಸುತ್ತ ನೀರನ್ನು ಚಿಮುಕಿಸಿ. ಇದು ದೋಸೆ ಸುಲಭವಾಗಿ ಎಬ್ಬಿಸಲು ಸಹಾಯವಾಗುತ್ತದೆ. ಹೀಗೆ ತಯಾರಾದ ದೋಸೆಯನ್ನು ಚಿಕ್ಕನ್ ಸುಕ್ಕ ಜೊತೆ ಸವಿಯಲು ನೀಡಿ. ಚಟ್ನಿ ಜೊತೆಗೂ ಸಹ ತಿನ್ನಬಹುದು.