ಎಣ್ಣೆ ಬಳಸದೆಯೂ ಅಡುಗೆ ಮಾಡಬಹುದು; ಹೇಗೆ ಗೊತ್ತಾ?? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಮಸ್ಕಾರ ಸ್ನೇಹಿತರೇ ಡಯಟ್, ಜಾಗಿಂಗ್, ವಾಕಿಂಗ್ ಅದೇನಾದ್ರೂ ಮಾಡಿ, ನಮ್ಮ ಆಹಾರ ಪದ್ದತಿ ಸರಿಯಾಗಿ ಇಲ್ಲದಿದ್ದರೆ, ಒಂದು ಗ್ರಾಂ ತೂಕವನ್ನೂ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೌದು ಸ್ನೇಹಿತರೆ, ಸಾಮಾನ್ಯವಾಗಿ ದೇಶದ ಯಾವ ಭಾಗದಲ್ಲಿಯೂ ಎಣ್ಣೆ ಬಳಸದೆ ಅಡುಗೆ ಮಾಡುವುದೇ ಇಲ್ಲ. ಬೇರೆ ಏನಿಲ್ಲಾ ಅಂದ್ರೂ ಅಡುಗೆ ಎಣ್ಣೆ ಅಥವಾ ತುಪ್ಪ ಇದ್ದರೆ ಸಾಕು ತರಕಾರಿಯನ್ನೋ ಮಾಂಸವನ್ನೋ ಪ್ರೈ ಮಾಡಿಯೇ ಬಿಡುತ್ತೇವೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಸೂಕ್ತ? ಹಾಗಾದರೆ ಬನ್ನಿ ಎಣ್ಣೆ ಬಳಸದೆಯೂ ರುಚಿಕರ ಆಹಾರ ತಯಾರಿಸುವ ಬಗ್ಗೆ ನಾವು ತಿಳಿಸ್ತೇವೆ.

ಪ್ರೆಶರ್ ಕುಕ್ಕರ್ ಬಳಸಿ ರುಚಿಕರವಾದ ಸೂಪ್ ತಯಾರಿಸಬಹುದು. ಕುಕ್ಕರ್ ನಲ್ಲಿ ಚಿಕನ್ ಸೂಪ್ ಮತ್ತು ತರಕಾರಿ ಸೂಪ್‌ ತಯಾರಿಸಿಕೊಳ್ಳಬಹುದು. ಎಣ್ಣೆ ಸೇರಿಸದೆಯೇ ಪ್ರೆಶರ್ ಕುಕ್ಕರ್‌ನಲ್ಲಿ ಆಹಾರವನ್ನು ಸುಲಭವಾಗಿ ಬೇಯಿಸಿಕೊಂಡು ತಿನ್ನಬಹುದು. ಇನ್ನು ಆಹಾರವನ್ನು ಫ್ರೈ ಮಾಡುವುದಕ್ಕಿಂತ ಬೇಯಿಸಿ ತಿನ್ನುವುದು ಆರೋಗ್ಯಕ್ಕೂ ಉತ್ತಮ. ಹಾಗೆಯೇ ಅಡುಗೆಯೂ ರುಚಿಕರವಾಗಿರುತ್ತದೆ. ಬಟರ್ ಪೇಪರ್ ಎಣೆಯ ಬದಲು ನೀರಿನಲ್ಲಿ ತರಕಾರಿಗಳನ್ನು ಬೇಯಿಸಿ ಅಡುಗೆ ಮಾಡಬಹುದು.

ಹುರಿಯುವುದು ಕೂಡ ಉತ್ತಮ ವಿಧಾನ. ಬ್ರೆಡ್ ನಂಥ ತಿನಿಸುಗಳನ್ನು ಡ್ರೈ ರೋಸ್ಟ್ ಮಾಡಬಹುದು. ಇನ್ನು ಪನ್ನೀರ್‌, ತರಕಾರಿ, ಚಿಕನ್ ಇತ್ಯಾದಿಗಳನ್ನು ಮೊಸರು ಹಾಕಿ ರೋಸ್ಟ್ ಮಾಡಬಹುದು. ಇದು ಸಾಕಷ್ಟು ತೇವಾಂಶ ಉಳಿದುಕೊಳ್ಳುವಂತೆ ಮಾಡುತ್ತದೆ. ಸಲಾಡ್‍ಗೆ ಚೀಸ್ ಹಾಕಿ ಹುರಿದು ತಿನ್ನಬಹುದು. ಇದು ರುಚಿಕರವಾಗಿಯೂ ಇರುತ್ತದೆ ಹಾಗೂ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಹಬೆಯಲ್ಲಿ ಆಹಾರವನ್ನು ಬೇಯಿಸಿ ಕೂಡ ಸೇವಿಸಬಹುದು. ಇರು ಅತ್ಯಂತ ರುಚಿಕರ ಕೂಡ. ಆಹಾರವನ್ನು ಹುರಿಯುವ ಬದಲು ಹಬೆಯಲ್ಲಿ ಬೇಯಿಸಿ. ತರಕಾರಿಯನ್ನು ಬೇಯಿಸುವಾಗ ಎಣ್ಣೆ ಹಾಕಬೇಡಿ. ಅದರ ಬದಲು ಎಲ್ಲಾ ಪದಾರ್ಥಗಳನ್ನು ನಿಧಾನವಾಗಿ ಹಬೆಯಲ್ಲಿ ಬೇಯಿಸಿದರೆ ಉತ್ತಮ. ಒಟ್ಟಿನಲ್ಲಿ ತೂಕ ಇಳಿಸಿಕೊಳ್ಳಲು ಹಾಗೂ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಎಣ್ಣೆ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.