ಟೊಮೊಟೊ ಬೆಲೆ ಗಗನಕ್ಕೆ ಏರಿದಾದ ಚಿಂತೆ ಯಾಕೆ?? ಅಡುಗೆಯಲ್ಲಿ ಟೊಮ್ಯಾಟೊ ಪರ್ಯಾಯವಾಗಿ ಈ ವಸ್ತುಗಳನ್ನು ಬಳಸಿ.

ನಮಸ್ಕಾರ ಸ್ನೇಹಿತರೇ ತರಕಾರಿಯ ಬೆಲೆ ದಿನದಿಂದ ಏರುತ್ತಲೇ ಇದೆ. ಅದರಲ್ಲೂ ಟೊಮ್ಯಾಟೊ ಬೆಲೆ ಎಷ್ಟು ಅಂತ ನಿಮಗೇ ಗೊತ್ತು, ಈಗಾಗಲೇ ಟೊಮ್ಯಾಟೋವನ್ನು ಎಷ್ಟು ಬಳಸಬೇಕು ಎಂದೇ ಯೋಚನೆಯಾಗಿರಬಹುದು ಅಲ್ವಾ? ಹಾಗೆಂದ ಮಾತ್ರಕ್ಕೆ ಈ ಬೆಲೆ ಹೀಗೆ ಇರುತ್ತೇ ಎನ್ನಲಾಗುವುದಿಲ್ಲ, ಕಡಿಮೆ ಆಗಲೂಬಹುದು. ಆದರೂ ದಿನವೂ ಅಡುಗೆಗೆ ಹೆಚ್ಚಾಗಿ ಬಳಸುವ ಟೊಮ್ಯಾಟೊ ಬದಲಿಗೆ ಬೇರೆ ಯಾವುದಾದರು ಪದಾರ್ಥವನ್ನು ಬಳಸುವ ಹಾಗಿದ್ದರೆ ಹೇಗೆ? ಯಾವ ಪದಾರ್ಥ ಅಂತೀರಾ ಹೇಳುತ್ತೇವೆ ಕೇಳಿ.

ಮೊದಲನೆಯದಾಗಿ ಮಾವಿನಕಾಯಿ ಪುಡಿ (ಡ್ರೈ ಮ್ಯಾಂಗೋ ಪೌಡರ್) ಇದು ಹುಳಿ ಸಿಹಿ ಎರಡೂ ರುಚಿಯನ್ನೂ ಕೊಡುವಂಥದ್ದಾಗಿದ್ದು ಅಗ್ಗದ ಬೆಲೆಗೆ ಸಿಗುತ್ತದೆ. ಅದರಲ್ಲೂ ಈ ಪುಡಿಯನ್ನು ತಂದು ಶೇಖರಿಸಿ ಇಡಬಹುದು. ಹಾಗಾಗಿ ಹುಳಿ ಅಗತ್ಯ ಇರುವಲ್ಲಿ ಈ ಪುಡಿಯನ್ನು ಬಳಸಬಹುದು. ಹುಣಸೆಹಣ್ಣು ಇನ್ನೊಂದು ಉತ್ತಮ ಆಯ್ಕೆ. ಹುಣಸೆಹಣ್ಣನ್ನು ಸ್ವಲ್ಪ ಹೊತ್ತು ನೆನೆಸಿಟ್ಟು ಅದರ ರಸವನ್ನು ಸಾಂಬಾರ್ ಗಳಿಗೆ ಸೇರಿಸಬಹುದು. ನೆಲ್ಲಿಕಾಯಿಯನ್ನು ಕೂಡ ಟೊಮ್ಯಾಟೋ ಬದಲಾಗಿ ಬಳಸಬಹುದು. ಬೇರೆ ಪದಾರ್ಥಗಳಿಗೆ ಸೇರಿಸುವ ಮೊದಲು ಸಕ್ಕರೆ ನೀರಿನಲ್ಲಿ ನೆಲ್ಲಿಕಾಯಿ ನೆನೆಸಿಟ್ಟು ಸೇರಿಸಬಹುದು. ಇನ್ನು ನೆಲ್ಲಿಕಾಯಿ ಪುಡಿ ಕೂಡ ಲಭ್ಯವಿದೆ.

ಇನ್ನು ಮೊಸರನ್ನು ಕೂಡ ಹುಳಿ ಪದಾರ್ಥವಾಗಿ ಸೇರಿಸಬಹುದು. ೨ ದಿನ ಹಳೆಯ ಮೊಸರು ಹೆಚ್ಚು ಹುಳಿಯನ್ನು ನೀಡುತ್ತದೆ. ಇನ್ನು ಮಲೆನಾದಿನಲ್ಲಿ ಸಿಗುವ ವಾಟೆ ಹುಳಿ ಕೂಡ ಟೊಮ್ಯಾಟೊಗೆ ಉತ್ತಮ ಪರ್ಯಾಯವಾಗಿದೆ. ಹಾಗಾಗಿ ಮಲೆನಾಡಿನ ಪದಾರ್ಥಗಳು ಸಿಗುವ ಅಂಗಡಿಗಳಲ್ಲಿ ವಾಟೆ ಹುಳಿ ಕೂಡ ಲಭ್ಯವಿರುತ್ತದೆ. ಈ ಮೇಲಿನ ಪದಾರ್ಥಗಳೆಲ್ಲವೂ ಟೊಮ್ಯಾಟೊ ಬದಲಿಗೆ ಬಳಸಬಹುದಾದಂಥ ವಸ್ತುಗಳು. ಜೊತೆಗೆ ಈ ಎಲ್ಲಾ ವಸ್ತುಗಳೂ ಆರೋಗ್ಯಕರವೂ ಕೂಡ ಹೌದು.