Recipe: ಇಡೀ ಉಡುಪಿಯಲ್ಲಿ ಪ್ರಸಿದ್ದವಾಗಿರುವ ಮಜ್ಜಿಗೆ ದೋಸೆ ಮಾಡಿದರೆ, 10 ದೋಸೆ ತಿಂತಾರೆ. ಹೇಗೆ ಮಾಡುವುದು ಗೊತ್ತೇ?

Recipe: ನಮ್ಮ ಕರ್ನಾಟಕದಲ್ಲಿ ಪ್ರತಿ ಜಿಲ್ಲೆಯಲ್ಲೂ, ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡುತ್ತಾರೆ. ಒಂದೊಂದು ಊರಿನಲ್ಲೂ ಒಂದೊಂದು ವಿಶೇಷತೆ ಇದೆ. ಹಾಗೆಯೇ ಉಡುಪಿ ಕಡೆ ಹಲವು ರೀತಿಯ ವಿಶೇಷವಾದ ಅಡುಗೆಗಳು ಬರುತ್ತದೆ. ಅವುಗಳಲ್ಲಿ ಎಲ್ಲರೂ ಇಷ್ಟಪಡುವ ರೆಸಿಪಿಗಳಲ್ಲಿ ಒಂದು ಮಜ್ಜಿಗೆ ದೋಸೆ. ಈ ರೆಸಿಪಿಯನ್ನು ಹೇಗೆ ಮಾಡುವುದು, ಇದಕ್ಕೆ ಬೇಕಾಗುವ ಸಾಮಗ್ರಿಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಒಂದು ಚಿಕ್ಕ ಬಕೆಟ್ ನಲ್ಲಿ ಅಕ್ಕಿ ತೆಗೆದುಕೊಳ್ಳಿ, ಅದನ್ನು ಒಂದು ಪಾತ್ರೆಗೆ ಹಾಕಿ, ಎರಡರಿಂದ ಮೂರರಷ್ಟು ನೀರು, ಅಕ್ಕಿಯನ್ನು ಎರಡರಿಂದ ಮೂರು ಸಾರಿ ಚೆನ್ನಾಗಿ ತೊಳೆಯಿರಿ..ನಂತರ ಅರ್ಧ ಟೀ ಸ್ಪೂನ್ ಮೆಂತ್ಯೆ ತೆಗೆದುಕೊಂಡು, ಚೆನ್ನಾಗಿ ತೊಳೆದುಕೊಳ್ಳಿ. ಅಕ್ಕಿ ತೆಗೆದುಕೊಂಡ ಬಕೆಟ್ ನಲ್ಲೇ, ಅರ್ಧ ಬಕೆಟ್ ತೆಳ್ಳಗಿನ ಅವಲಕ್ಕಿ ತೆಗೆದುಕೊಂಡು ಅದನ್ನು ತೊಳೆದು ಇಟ್ಟುಕೊಳ್ಳಿ. ಈಗ ತೊಳೆದ ಅಕ್ಕಿಗೆ, ಅವಲಕ್ಕಿ ಮತ್ತು ಮೆಂತ್ಯೆ ಹಾಕಿ, ಅದು ಮುಳುಗುವಷ್ಟು ಮಜ್ಜಿಗೆ ಹಾಕಿ. ಅದಕ್ಕಿಂತ ಸ್ವಲ್ಪ ಮೇಲೆ ಅರ್ಧ ಇಂಚಿನಷ್ಟು ಬರುವಷ್ಟು ಮಜ್ಜಿಗೆ ಹಾಕಿ. ಹುಳಿ ಮಜ್ಜಿಗೆಯನ್ನು ಬಳಸಬೇಡಿ. ಸ್ವಲ್ಪ ಕೈಯಾಡಿಸಿದ ನಂತರ, ಅದನ್ನು ಮುಚ್ಚಿ 8 ಗಂಟೆಗಳ ಕಾಲ ನೆನೆಸಿ ಇಡಿ. ಇದನ್ನು ಓದಿ..Kannada News: ಯಾವ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಾರದ ಶ್ರುತಿ, ಎರಡೆರಡು ಬಾರಿ ಗಿಚ್ಚಿ ಗಿಲಿ ಗಿಲಿ ಗೆ ಬರಲು ಸಂಭಾವನೆ ಕಾರಣನಾ?? ಒಂದು ಎಪಿಸೋಡಿಗೆ ದಾಖಲೆ ಹಣ. ಎಷ್ಟು ಗೊತ್ತೇ??

ನೆನೆಸಿದ ನಂತರ, ಮಿಕ್ಸಿಯಲ್ಲಿ ಎರಡು ಸಾರಿ ಚೆನ್ನಾಗಿ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಿ, ಈ ಬ್ಯಾಟರ್ ತುಂಬಾ ಮೃದುವಾಗಿ ಬರುತ್ತದೆ. ರುಬ್ಬಿದ ಬಳಿಕ ಒಂದು ರಾತ್ರಿ ಫರ್ಮೆಂಟೇಶನ್ ಆಗಬೇಕು. ಬೆಳಗ್ಗೆ ನೋಡಿದಾಗ, ಇದರ ಹದ ಸರಿಯಾಗಿರುತ್ತದೆ, ಈಗ ಬ್ಯಾಟರ್ ಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ನಂತರ ಚೆನ್ನಾಗಿ ಕೈಯಾಡಿಸಿ, ಇದಕ್ಕೆ ಸೋಡ, ENO ಇದ್ಯಾವುದನ್ನು ಬಳಸುವ ಹಾಗಿಲ್ಲ. ಈಗ ಸ್ಟವ್ ಆನ್ ಮಾಡಿ, ದೋಸೆ ತವಾ ಇಟ್ಟು, ಸ್ವಲ್ಪ ತುಪ್ಪ ಅಥವಾ ಸವರಿ, ದೋಸೆ ಹಿಟ್ಟನ್ನು ತೆಗೆದುಕೊಂಡು, ಅದನ್ನು ತವಾ ಮಧ್ಯಕ್ಕೆ ಹಾಕಿ, ಚಿಕ್ಕದಾಗಿ ಹರಡಿ ದೋಸೆ ಹಾಕಿ, ಈಗ ಮುಚ್ಚಳ ಮುಚ್ಚಿ ಅರ್ಧ ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ತೆಗೆಯಿರಿ..

ಈಗ ದೋಸೆಯ ಮೇಲೆ ಸ್ವಲ್ಪ ತುಪ್ಪ ಹಾಕಿ, ಮೇಲಿನ ಭಾಗದಲ್ಲಿ ಸ್ವಲ್ಪ ಕಲರ್ ಚೇಂಜ್ ಆಗುತ್ತಿದ್ದ ಹಾಗೆ, ದೋಸೆಯನ್ನು ತಿರುವಿ ಹಾಕಿ, ಹಿಂದಿನ ಭಾಗದಲ್ಲಿ ಕೂಡ ಚೆನ್ನಾಗಿ ಬೆಳೆದಿರುತ್ತದೆ. ಎರಡು ಕಡೆ ಗೋಲ್ಡನ್ ಬ್ರೌನ್ ಕಲರ್ ಬರುವ ಹಾಗೆ ಬೇಯಿಸಿ. ಈ ದೋಸೆ ಮೇಲೆ ಕ್ರಿಸ್ಪಿ ಹಾಗೂ ಒಳಗೆ ಮೃದುವಾಗಿರುತ್ತದೆ. ಮಜ್ಜಿಗೆಯಲ್ಲಿ ನೆನೆಸಿರುವುದರಿಂದ ಈ ದೋಸೆ ಸ್ವಲ್ಪ ಹುಳಿ ಇರುತ್ತದೆ, ಹುಳಿ ಇಷ್ಟ ಪಡುವವರಿಗೆ ಈ ದೋಸೆ ತುಂಬಾ ಇಷ್ಟವಾಗುತ್ತದೆ. ಈ ದೋಸೆಗೆ ತೆಂಗಿನಕಾಯಿ ಚಟ್ನಿ, ಟೊಮ್ಯಾಟೋ ಚಟ್ನಿ, ಖಾರ ಚಟ್ನಿ ಎಲ್ಲವೂ ಚೆನ್ನಾಗಿರುತ್ತದೆ. ಇದನ್ನು ಓದಿ.. Health Tips: ಯಪ್ಪಾ ನೀವು ಯಾವಾಗಲು ಲಟಕ್ ಲಟಕ್ ಅಂತ ನಟ್ಟಿಗೆ ತೆಗೆಯುತ್ತೀರಾ? ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತೇ??