ರಾತ್ರಿ ಉಳಿದ ಅನ್ನದಿಂದ ರುಚಿಕರವಾದ ತಿಂಡಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಲವಾರು ಸಂದರ್ಭದಲ್ಲಿ ನಾವು ಸರಿಯಾದ ಅಳತೆಯಲ್ಲಿ ಅನ್ನ ಮಾಡಿದರೂ ಕೂಡ ಹಲವಾರು ಸಂದರ್ಭಗಳಲ್ಲಿ ವಿವಿಧ ಕಾರಣಗಳಿಂದಾಗಿ ರಾತ್ರಿಯ ಅನ್ನ ಉಳಿದುಬಿಡುತ್ತದೆ ಈ ರಾತ್ರಿಯ ಅನ್ನವನ್ನು ಹೊರಗೆ ಹಾಕಲು ಮನಸ್ಸಿಲ್ಲದೆ ಮನೆಯವರಿಗೆ ತಿನ್ನು ಎನ್ನೋಣ ಎಂದರೆ ಅವರು ತಿನ್ನುವುದಿಲ್ಲ ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ರಾತ್ರಿ ಉಳಿದ ಅನ್ನದಿಂದ ಅದ್ಭುತವಾಗಿ ರುಚಿಕರವಾದ ತಿಂಡಿಯನ್ನು ಮಾಡಿದರೆ ಖಂಡಿತ ಅನ್ನ ವ್ಯರ್ಥವಾಗುವುದಿಲ್ಲ ಹಾಗೂ ಮನೆಯವರೆಲ್ಲರೂ ತಿನ್ನುತ್ತಾರೆ. ನಿಮ್ಮ ಅನುಕೂಲತೆಗಾಗಿ ಕೆಳಗಡೆ ಯೌಟ್ಯೂಬ್ ವಿಡಿಯೋ ಕೂಡ ಹಾಕಲಾಗಿದ್ದು ಹೇಗೆ ಮಾಡುವುದು ಎಂದು ಸಂಪೂರ್ಣ ನೋಡಿ ಟ್ರೈ ಮಾಡಿ ರುಚಿ ಹೇಗಿದೆಯೆಂದು ಕಮೆಂಟ್ ಬಾಕ್ಸಲ್ಲಿ ತಿಳಿಸಿ.


ರುಚಿಕರವಾದ ತಿಂಡಿ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರನ್ನು ತೆಗೆದುಕೊಂಡು ಅದಕ್ಕೆ ಉಳಿದ ಅನ್ನ, ಮೊಸರು, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದಕ್ಕೆ ಬೇಕಾಗುವಷ್ಟು ಉಪ್ಪು, ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ಕಾಲ ನೆನೆಯಲು ಬಿಡಿ. 10 ನಿಮಿಷಗಳ ನಂತರ ಸ್ವಲ್ಪ ನೀರನ್ನು ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಹೆಂಚನ್ನು ಇಟ್ಟು ಕಾಯಲು ಬಿಡಿ. ಹೆಂಚು ಕಾದನಂತರ ಅದರ ಮೇಲೆ ಪುಟ್ಟ ಪುಟ್ಟ ದೋಸೆಗಳನ್ನು ಹಾಕಿಕೊಳ್ಳಿ. ನಂತರ ಅದರ ಮೇಲೆ ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ 2 ಬದಿಯಲ್ಲಿ ಬೇಯಿಸಿಕೊಂಡರೇ ರುಚಿಕರವಾದ ತಿಂಡಿ ರೆಡಿಯಾಗುತ್ತದೆ.