ಪ್ರತಿಯೊಬ್ಬರಿಗೂ ತಿಳಿದಿರಲೇ ಬೇಕಾದ ಅಡುಗೆ ಮನೆಯ ಟಿಪ್ಸ್. ಎಷ್ಟೆಲ್ಲ ಲಾಭ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಅಡುಗೆಮನೆಯಲ್ಲಿ ಬಳಸಬಹುದಾದ ಸರಳ ಟಿಪ್ಸ್ ಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮೊದಲನೆಯದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಅಡುಗೆಗೆ ತೆಂಗಿನ ಕಾಯಿಯನ್ನು ತುರಿದು ಬಳಸುತ್ತಾರೆ ಅಥವಾ ಸಣ್ಣದಾಗಿ ಹಚ್ಚಿ ಬಳಸುತ್ತಾರೆ. ತೆಂಗಿನ ಚಿಪ್ಪಿನಿಂದ ಕಾಯಿಯನ್ನು ಬೇರ್ಪಡಿಸಲು ನೀವು ತೆಂಗಿನ ಚಿಪ್ಪನ್ನು 2 – 3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಗ್ಯಾಸ್ ಮೇಲೆ ಇಟ್ಟುಕೊಂಡರೆ ಕಾಯಿ ತೆಂಗಿನ ಚಿಪ್ಪಿನಿಂದ ಸುಲಭವಾಗಿ ಬೇರ್ಪಡುತ್ತದೆ.

ಇನ್ನು ಎರಡನೆಯದು ನೆಲದ ಮೇಲೆ ಎಣ್ಣೆ ಚೆಲ್ಲಿದರೆ ಅದನ್ನು ಸ್ವಚ್ಛಗೊಳಿಸಲು ಮನೆಯಲ್ಲಿರುವ ಯಾವುದಾದರೂ ಹಿಟ್ಟನ್ನು ಎಣ್ಣೆ ಚೆಲ್ಲಿದ ಜಾಗಕ್ಕೆ ಹಾಕಿ 5 ನಿಮಿಷಗಳ ನಂತರ ಒಂದು ಬಟ್ಟೆ ಅಥವಾ ಪೇಪರ್ ಸಹಾಯದಿಂದ ಒರೆಸಿಕೊಳ್ಳಿ. ಹುಣಸೆಹಣ್ಣಿಗೆ ಸ್ವಲ್ಪ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ ಡಬ್ಬದಲ್ಲಿ ಇಡುವುದರಿಂದ ಹುಣಸೆಹಣ್ಣು ಬೇಗ ಹಾಳಾಗುವುದಿಲ್ಲ. ಬೇಳೆ ಇಡುವ ಬಾಕ್ಸ್ ಗಳಲ್ಲಿ ಪಲಾವ್ ಎಲೆಯನ್ನು ಇಟ್ಟು ಮುಚ್ಚುವುದರಿಂದ ಬೇಳೆಗೆ ಹುಳಗಳು ಬೀಳುವುದಿಲ್ಲ.

ಅಡುಗೆಗೆ ಬಳಸಿದ ನಂತರ ಉಳಿದ ತೆಂಗಿನಕಾಯಿಗೆ ಚಿಟಿಕೆ ಉಪ್ಪನ್ನು ಸವರಿ ಬಟ್ಟೆ ಬ್ಯಾಗಿನಲ್ಲಿ ಇಟ್ಟು ಫ್ರಿಜ್ಜಿನಲ್ಲಿ ಇಡುವುದರಿಂದ ತೆಂಗಿನಕಾಯಿ ಹಾಳಾಗುವುದಿಲ್ಲ. ಫ್ರಿಡ್ಜ್ ನಲ್ಲಿ ಹೂವನ್ನು ಇಡುವಾಗ ಬಾಕ್ಸ್ ನ ತಳಭಾಗಕ್ಕೆ ನ್ಯೂಸ್ ಪೇಪರ್ ನನ್ನು ಹಾಕಿ. ಅದರ ಮೇಲೆ ಹೂವನ್ನು ಹಾಕಿ. ಮತ್ತೆ ಪೇಪರ್ ನಿಂದ ಮುಚ್ಚಿ ಡಬ್ಬವನ್ನು ಮುಚ್ಚಿಟ್ಟರೆ ಎಷ್ಟು ದಿನವಾದರೂ ಹೂವು ಹಾಳಾಗುವುದಿಲ್ಲ. ಅಡುಗೆ ಮನೆಯಲ್ಲಿ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿದ ನಂತರ ವಸ್ತುವಿನ ವಾಸನೆ ಹಾಗೆಯೇ ಇರುತ್ತದೆ. ಇದನ್ನು ಹೋಗಲಾಡಿಸಲು ಒಂದು ಚಮಚದಷ್ಟು ಸಾಸಿವೆಯನ್ನು ಹಾಕಿ ಚೆನ್ನಾಗಿ ಅಲ್ಲಾಡಿಸಿದರೆ ವಾಸನೆ ಹೋಗುತ್ತದೆ.

ಯಾವುದೇ ಪುಡಿಯನ್ನು ಡಬ್ಬದಲ್ಲಿ ಇಡುವಾಗ ಸ್ವಲ್ಪ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ ಇಡುವುದರಿಂದ ಗಂಟುಗಳು ಉಂಟಾಗುವುದಿಲ್ಲ. ಉಳಿದಿರುವ ದೋಸೆ ಹಿಟ್ಟನ್ನು ನೀರಿನ ಮಧ್ಯೆ ಇಡುವುದರಿಂದ ದೋಸೆ ಹಿಟ್ಟು ಹುಳಿ ಬರುವುದಿಲ್ಲ. ಉಳಿದಿರುವ ಚಟ್ನಿಯನ್ನು ಒಂದು ಬಟ್ಟಲಿಗೆ ಹಾಕಿ ತಣ್ಣಗಿನ ನೀರಿನ ಮಧ್ಯೆ ಇರುವುದರಿಂದ ಚಟ್ನಿ ಸಂಜೆಯವರೆಗೂ ಹಾಳಾಗುವುದಿಲ್ಲ.