ಎಣ್ಣೆ ಅಥವಾ ತುಪ್ಪ ಬಳಸದೇ ಹೆಸರು ಕಾಳಿನ ಕರ್ರಿ ಮಾಡುವುದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಎಣ್ಣೆ ಅಥವಾ ತುಪ್ಪ ಬಳಸದೆ ಹೆಸರು ಕಾಳಿನ ಕರಿ ಮಾಡುವ ವಿಧಾನ ನಿಮಗೆ ತಿಳಿಸಲಾಗಿದೆ. ಹೆಸರು ಕಾಳಿನ ಕರಿ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಹೆಸರುಕಾಳು(100 ಗ್ರಾಂ), 1 ಚಮಚ ಗರಂ ಮಸಾಲ, ಮುಕ್ಕಾಲು ಚಮಚ ಅರಿಶಿಣ ಪುಡಿ, ಸ್ವಲ್ಪ ತೆಂಗಿನಕಾಯಿತುರಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಈರುಳ್ಳಿ, 1 ಟೊಮ್ಯಾಟೊ, 2 -3 ಹಸಿಮೆಣಸಿನಕಾಯಿ.

ಹೆಸರು ಕಾಳಿನ ಕರಿ ಮಾಡುವ ವಿಧಾನ: ಮೊದಲಿಗೆ ತೆಗೆದುಕೊಂಡ ಹೆಸರುಕಾಳನ್ನು ಒಂದು ಬಟ್ಟಲಿಗೆ ಹಾಕಿಕೊಂಡು ನೀರಿನಿಂದ 2 – 3 ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ಮತ್ತೆ ಅದೇ ಬಟ್ಟಲಿಗೆ ಹೆಸರುಕಾಳು ಮುಳುಗುವಷ್ಟು ನೀರನ್ನು ಹಾಕಿ 5 ನಿಮಿಷಗಳ ಕಾಲ ನೆನೆಯಲು ಬಿಡಿ. 5 ನಿಮಿಷಗಳ ನಂತರ ಗ್ಯಾಸ್ ಮೇಲೆ ಕುಕ್ಕರನ್ನು ಇಟ್ಟು ಅದಕ್ಕೆ ನೆನೆಸಿದ ಹೆಸರುಬೇಳೆ ಜೊತೆ ನೀರು, ಸಣ್ಣಗೆ ಹಚ್ಚಿದ ಈರುಳ್ಳಿ,ಸಣ್ಣಗೆ ಹಚ್ಚಿದ ಟೊಮ್ಯಾಟೊ, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, ತುರಿದ ಶುಂಠಿ,ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ, ಗರಂ ಮಸಾಲ, ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ 7 – 8 ವಿಷಲ್ ಹಾಕಿಸಿಕೊಂಡು ತಣ್ಣಗಾಗಲು ಬಿಡಿ.