100% ಹೋಟೆಲ್ ಶೈಲಿಯಲ್ಲಿ ಅವಲಕ್ಕಿ ಪುಳಿಯೋಗರೆ ಮತ್ತು ಚಟ್ನಿ ಮಾಡುವುದು ಹೇಗೆ ಗೊತ್ತೇ?? ಎಲ್ಲರೂ ಪ್ಲೇಟ್ ಕಾಲಿ ಮಾಡ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ಅವಲಕ್ಕಿ ಪುಳಿಯೋಗರೆ ಹಾಗೂ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯ ಪುಳಿಯೋಗರೆ ಮಾಡಲು ಬೇಕಾಗುವ ಪದಾರ್ಥಗಳು: 250 – 300 ಗ್ರಾಂ ಗಟ್ಟಿ ಅವಲಕ್ಕಿ, 50ml ಎಣ್ಣೆ, ಸ್ವಲ್ಪ ಸಾಸಿವೆ,ಸ್ವಲ್ಪ ಕಡ್ಲೇಬೀಜ,1 ಚಮಚ ಕಡ್ಲೆಬೇಳೆ, 1 ಚಮಚ ಉದ್ದಿನಬೇಳೆ,5 – 6 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಪುಳಿಯೋಗರೆ ಪುಡಿ, 2 ಚಮಚ ಒಣಕೊಬ್ಬರಿ ತುರಿ, 1 ಚಮಚ ಬಿಳಿ ಎಳ್ಳಿನ ಪುಡಿ(ಹುರಿದು ಮಾಡಿದ ಪುಡಿ).

ಹೋಟೆಲ್ ಶೈಲಿಯ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಹುರಿಗಡಲೆ, 1ಬಟ್ಟಲು ತೆಂಗಿನಕಾಯಿ ತುರಿ, 4 – 5 ಹಸಿ ಮೆಣಸಿನಕಾಯಿ, ಸ್ವಲ್ಪ ಪುದಿನ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಇಂಚು ಶುಂಠಿ, 1 ಗಡ್ಡೆ ಬೆಳ್ಳುಳ್ಳಿ, ಸ್ವಲ್ಪ ಸಕ್ಕರೆ, ಸ್ವಲ್ಪ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, ಸ್ವಲ್ಪ ಸಾಸಿವೆ, ಸ್ವಲ್ಪ ಕರಿಬೇವು, ಸ್ವಲ್ಪ ಕಡಲೆಬೇಳೆ.

ನಂತರ ಇದಕ್ಕೆ ಮುರಿದ ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಇದಕ್ಕೆ ಪುಳಿಯೋಗರೆ ಪುಡಿಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿತುರಿ, ಬಿಳಿ ಎಳ್ಳಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಕೊನೆಯದಾಗಿ ಅವಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಹೋಟೆಲ್ ಶೈಲಿಯ ಅವಲಕ್ಕಿ ಪುಳಿಯೋಗರೆ ಸವಿಯಲು ಸಿದ್ಧ.