ಸಮಯವಿಲ್ಲದೆ ಇದ್ದಾಗ ದಿಡೀರ್ ಎಂದು 10 ನಿಮಿಷಗಳಲ್ಲಿ ಬೇಳೆ ಸಾರು ಮಾಡಿ, ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 10 ನಿಮಿಷಗಳಲ್ಲಿ ಬೇಳೆ ಸಾರು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಬೇಳೆ ಸಾರು ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ತೊಗರಿಬೇಳೆ, ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು,2 ಚಮಚ ಬೇಳೆ ಸಾಂಬಾರಿನ ಪುಡಿ,2 ಟೊಮ್ಯಾಟೋ,2 ಈರುಳ್ಳಿ, ಕಾಲು ಬಟ್ಟಲು ತೆಂಗಿನಕಾಯಿ ತುರಿ,1 ಕ್ಯಾಪ್ಸಿಕಂ,ರುಚಿಗೆ ತಕಷ್ಟು ಉಪ್ಪು,ಸ್ವಲ್ಪ ಎಣ್ಣೆ,ಸ್ವಲ್ಪ ಅರಿಶಿನ ಪುಡಿ,ಸ್ವಲ್ಪ ಸಾಸಿವೆ, ಸ್ವಲ್ಪ ಇಂಗು, ಸ್ವಲ್ಪ ಬೆಳ್ಳುಳ್ಳಿ, ಕರಿಬೇವು,2 ಒಣಮೆಣಸಿನಕಾಯಿ,ಸ್ವಲ್ಪ ಕೊತ್ತಂಬರಿ ಸೊಪ್ಪು.

ಬೇಳೆ ಸಾರು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಕುಕ್ಕರ್ ನಲ್ಲಿಟ್ಟು ಅದಕ್ಕೆ ನೀರನ್ನು ಹಾಕಿ ಕಾಯಲು ಬಿಡಿ. ನೀರು ಕಾದ ನಂತರ ತೊಗರಿಬೇಳೆ, ಹಚ್ಚಿದ ಟೊಮೇಟೊ, ಹಚ್ಚಿದ ಈರುಳ್ಳಿ, ಹಚ್ಚಿದ ಕ್ಯಾಪ್ಸಿಕಂ, ತೆಂಗಿನಕಾಯಿತುರಿ, ಸಾಂಬಾರ್ ಪುಡಿ, ಹುಣಸೆ ಹಣ್ಣಿನ ರಸ ,ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿ ಕೊಳ್ಳಿ. ಕುಕ್ಕರ್ ತಣ್ಣಗಾದ ನಂತರ ಬೇಯಿಸಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಮತ್ತೆ ಗ್ಯಾಸ್ ಮೇಲೆ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ.