ಅಡುಗೆ ಭಟ್ಟರು ಮಾಡುವ ಟೊಮೇಟೊ ಸಾರು ಮಾಡಿ ನೋಡಿ, ಮನೆಯಲ್ಲಿ ಬಾಯಿ ಚಪ್ಪರಿಸಿಕೊಂಡು ತಿಂತಾರೆ ಎಲ್ಲರೂ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಅಡುಗೆ ಭಟ್ಟರು ಮಾಡುವ ಟೊಮೇಟೊ ಸಾರು ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಟೊಮೇಟೊ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು: ಒಂದೂವರೆ ಚಮಚ ಧನಿಯಾ, 1 ಚಮಚ ಜೀರಿಗೆ, ಕಾಲು ಚಮಚ ಮೆಂತ್ಯ, 5 – 6 ಬ್ಯಾಡಿಗೆ ಮೆಣಸಿನಕಾಯಿ,2 ಚಮಚ ತೆಂಗಿನಕಾಯಿ ತುರಿ, 2 ಟೊಮೇಟೊ,2 ಚಮಚ ಬೆಲ್ಲ,ರುಚಿಗೆ ತಕಷ್ಟು ಉಪ್ಪು, 4 ಬಟ್ಟಲು ಬೇಳೆ ಕಟ್ಟು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 2 – 3 ಚಮಚ ತುಪ್ಪ, ಸಾಸಿವೆ, ಇಂಗು, 2 ಒಣಮೆಣಸಿನಕಾಯಿ.

ಟೊಮೇಟೊ ಸಾರು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಒಂದೂವರೆ ಚಮಚದಷ್ಟು ಧನಿಯವನ್ನು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚ ಜೀರಿಗೆ, ಕಾಲು ಚಮಚ ಮೆಂತ್ಯವನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ 5 – 6 ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಮತ್ತೆ ಫ್ರೈ ಮಾಡಿಕೊಂಡು ಒಂದು ಪ್ಲೇಟಿಗೆ ಹಾಕಿ ತಣ್ಣಗಾಗಲು ಬಿಡಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 – 3 ಚಮಚದಷ್ಟು ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಇದಕ್ಕೆ ಸಾಸಿವೆ, ಇಂಗು , 2 ಒಣಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಕುದಿಯುತ್ತಿರುವ ಸಾರಿಗೆ ಮಿಕ್ಸ್ ಮಾಡಿದರೆ ಅಡುಗೆ ಭಟ್ಟರು ಮಾಡುವ ಟೊಮೇಟೊ ಸಾರು ಸವಿಯಲು ಸಿದ್ದ.