Neer Dose Karnataka
Take a fresh look at your lifestyle.

ಮಗು ಆಗಿ ಮದುವೆಯಾಗುವ ಮುನ್ನ ಹಾರ್ದಿಕ್ ಪಾಂಡ್ಯ ಪ್ರೀತಿ ಮಾಡಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??

13

ನಮಸ್ಕಾರ ಸ್ನೇಹಿತರೇ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಲ್-ರೌಂಡರ್ ಪ್ರದರ್ಶನ ನೀಡಿ ಐಪಿಎಲ್ ನಲ್ಲಿ ತನ್ನ ಪ್ರತಿಭೆಯ ವಿಶ್ವರೂಪ ಅನಾವರಣ ಮಾಡಿದ ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿರೋದು ನಿಮಗೆ ಗೊತ್ತಿದೆ. ಭಾರತ ಕ್ರಿಕೆಟ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ರವರ ಸ್ಥಾನ ಪ್ರಮುಖವಾಗಿ ಕಾಣುತ್ತದೆ. ಏನು ಹಾರ್ದಿಕ್ ಪಾಂಡ್ಯ ರವರ ವೈವಾಹಿಕ ಜೀವನಕ್ಕೆ ಬರುವುದಾದರೆ ಇತ್ತೀಚಿಗಷ್ಟೇ ನತಾಶಾ ಸ್ಟಾಂಕೋವಿಕ್ ರವರನ್ನು ಮದುವೆಯಾಗಿ ಈಗಾಗಲೇ ಒಂದು ಮಗುವನ್ನು ಕೂಡ ಪಡೆದಿದ್ದಾರೆ. ಆದರೆ ನಿಮಗೆ ಗೊತ್ತಾ ಸ್ನೇಹಿತರೆ ಮದುವೆಯಾಗುವುದಕ್ಕಿಂತ ಮುನ್ನ ಹಾರ್ದಿಕ್ ಪಾಂಡ್ಯ ರವರಿಗೆ ಕೆಲ ಹುಡುಗಿಯರೊಂದಿಗೆ ಪ್ರೇಮ ಸಂಬಂಧವಿತ್ತು ಎಂಬುದು. ಬನ್ನಿ ಹುಡುಗಿಯರು ಯಾರೆಂಬುದು ನಿಮಗೆ ವಿವರವಾಗಿ ಹೇಳುತ್ತೇವೆ.

ಲಿಸಾ ಶರ್ಮ ಈಕೆ ಕೋಲ್ಕತ್ತ ಮೂಲದ ಮಾಡೆಲ್ ಆಗಿದ್ದು, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಆಗೀಗ ಸುತ್ತಾಡಿ ಸಾಕಷ್ಟು ಸುದ್ದಿಯಾಗಿದ್ದರು. 2017 ರಲ್ಲಿ ಲಿಸಾ ಶರ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಾಂಡವರೊಂದಿಗೆ ಇದ್ದ ಫೋಟೋವನ್ನು ಪೋಸ್ಟ್ ಮಾಡಿ ಆ ದಿನಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ಸುದ್ದಿ ಹರಡುವಂತೆ ಮಾಡಿದ್ದರು. ನಂತರದ ಕೆಲದಿನಗಳಲ್ಲಿ ನಮ್ಮಿಬ್ಬರ ನಡುವೆ ಅಂತಹದ್ದೇನು ಇಲ್ಲ ಎಂಬುದಾಗಿ ಹೇಳಿ ಅವರಿಬ್ಬರೂ ಒಟ್ಟಿಗೆ ಇದ್ದಂತಹ ಫೋಟೋವನ್ನು ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ನಿಂದ ಡಿಲೀಟ್ ಮಾಡಿದ್ದಾರೆ.

ಪರಿಣಿತಿ ಚೋಪ್ರಾ ಪ್ರಿಯಾಂಕ ಚೋಪ್ರಾ ರವರ ಸಹೋದರಿ ಯಾಗಿರುವ ಬಾಲಿವುಡ್ ನ ಖ್ಯಾತ ನಟಿ ಪರಿಣಿತಿ ಚೋಪ್ರಾ ರವರ ಹೆಸರು ಕೂಡ ಹಾರ್ದಿಕ್ ಪಾಂಡ್ಯ ರವರೊಂದಿಗೆ ತಳುಕು ಹಾಕಿಕೊಂಡಿತ್ತು. ಒಮ್ಮೆ ಪರಿಣಿತಿ ಚೋಪ್ರಾ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೈಸಿಕಲ್ ಫೋಟೋವನ್ನು ಪೋಸ್ಟ್ ಮಾಡಿ ಇದರ ಜೊತೆ ರೈಡಿಂಗ್ ಮಾಡುವವರನ್ನು ಹುಡುಕುತ್ತಿದ್ದೇನೆಂಬ ಎಂಬ ಕ್ಯಾಪ್ಷನ್ ಅನ್ನು ಹಾಕಿದ್ದರು. ಅದಕ್ಕೆ ಕ್ರಿಕೆಟ್ ಹಾರ್ದಿಕ್ ಪಾಂಡ್ಯ ರವರು ರಿಪ್ಲೈ ಮಾಡುವ ಮೂಲಕ ಸಾಕಷ್ಟು ಗುಸುಗುಸುಗಳಿಗೆ ಎಡೆಮಾಡಿಕೊಟ್ಟರು.

ಊರ್ವಶಿ ರೌಟೇಲಾ ನಿಮಗೆಲ್ಲ ಗೊತ್ತಿರುವಂತೆ ಊರ್ವಶಿ ರೌಟೇಲಾ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲೊಬ್ಬರು. ಇನ್ನು ಇವಳು ಕನ್ನಡ ಚಿತ್ರರಂಗದಲ್ಲಿ ಕೂಡ ಐರಾವತ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಇವರು ಒಮ್ಮೆ ಪಾಂಡ್ಯ ಸಹೋದರರು ನಡೆಸಿದ್ದ ಪಾರ್ಟಿಗೆ ಹಾಜರಾಗಿದ್ದರು. ಇದರ ಕುರಿತಂತೆ ಯುಟ್ಯೂಬ್ ಚಾನಲ್ ಗಳು ಹಾಗೂ ಮಾಧ್ಯಮಗಳು ಸಾಕಷ್ಟು ಸುದ್ದಿಯನ್ನು ಹರಡಿದ್ದವು ಊರ್ವಶಿ ಹಾರ್ದಿಕ್ ಪಾಂಡ್ಯ ರವರ ಮಧ್ಯ ಪ್ರೇಮ ಸಂಬಂಧ ಇದೆ ಎಂಬುದನ್ನು. ನಂತರ ಸ್ವತಹ ಊರ್ವಶಿ ರೌಟೇಲಾ ರವರ ಮಾಧ್ಯಮ ಹಾಗೂ ಯುಟ್ಯೂಬ್ ಚಾನೆಲ್ ಗಳಲ್ಲಿ ನಮ್ಮ ನಡುವೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಹೇಳಿದ್ದರು.

ಎಲ್ಲಿ ಅವ್ರಮ್ ಇವರು ಕೂಡ ಬಾಲಿವುಡ್ನ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದರು. ಹಾರ್ದಿಕ್ ಪಾಂಡ್ಯ ಹಾಗೂ ಇವರು ಸಾಕಷ್ಟು ವರ್ಷಗಳ ಕಾಲ ಡೇಟಿಂಗ್ ನಡೆಸಿದರು. ಇಷ್ಟು ಮಾತ್ರವಲ್ಲದೆ ಹಾರ್ದಿಕ್ ಪಾಂಡ್ಯ ಅವರ ಸಹೋದರ ಕುಮಾರ್ ಅವರ ಎಂಗೇಜ್ಮೆಂಟ್ ಗೆ ಕೂಡ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡು ಮತ್ತಷ್ಟು ಕುತೂಹಲ ಮೂಡಿಸಿದರು. ಅಲ್ಲದೆ ಶಿಖರ್ ಧವನ್ ರವರ ಪತ್ನಿ ಆಯೇಷಾ ಧವನ್ ಏರ್ಪಾಡು ಮಾಡಿದ್ದ ಪಾರ್ಟಿಗೆ ಕೂಡ ಇವರಿಬ್ಬರು ಜೊತೆಯಾಗಿ ಹೋಗಿದ್ದರು. ಇಷ್ಟು ಮಾತ್ರವಲ್ಲದೆ ಇವರು ಹಲವಾರು ವರ್ಷಗಳ ಕಾಲ ಜೊತೆಯಾಗಿದ್ದು ಕೆಲ ಪಬ್ಲಿಕ್ ಪ್ಲೇಸ್ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಇಶ ಗುಪ್ತ ಎಲ್ಲಿ ಅವ್ರಮ್ ರವರೊಂದಿಗೆ ಬೇರೆಯಾದ ನಂತರ ಹಾರ್ದಿಕ್ ಪಾಂಡ್ಯ ಇಶಾ ಗುಪ್ತಾ ಅವರನ್ನು ಭೇಟಿ ಮಾಡಲು ಪ್ರಾರಂಭಿಸಿದರು ಎಂಬುದು ಸುದ್ದಿ. ಇಶಾ ಗುಪ್ತಾ ಕೂಡ ಬಾಲಿವುಡ್ನ ಖ್ಯಾತ ನಟಿಯರಲ್ಲಿ ಒಬ್ಬರು. ಈ ಕುರಿತಂತೆ ಕಾಫಿ ವಿತ್ ಕರಣ್ ಶೋನಲ್ಲಿ ಕೆಎಲ್ ರಾಹುಲ್ ಅವರು ಹಾರ್ದಿಕ್ ಪಾಂಡ್ಯ ರವರ ಪ್ರೇಮ ಸಂಬಂಧಗಳ ಕುರಿತು ಹೇಳುವಾಗ ಪರೋಕ್ಷವಾಗಿ ವಿಧ ಬಗ್ಗೆ ಹೇಳಿದ್ದು ಇಂದಿಗೂ ಸಹ ನಿಮಗೆ ನೆನಪಿರಬಹುದು.

ನೋಡಿದ್ರಲ್ಲ ಸ್ನೇಹಿತರೆ ಹಾರ್ದಿಕ್ ಪಾಂಡ್ಯ ರವರ ಬ್ಯಾಟಿಂಗ್ ಹಾಗೂ ಬೌಲಿಂಗ್ ಪರ್ಫಾರ್ಮೆನ್ಸ್ ನಂತೆ ಅವರ ಡೇಟಿಂಗ್ ಹಾಗೂ ಪ್ರೇಮ ಸಂಬಂಧದ ಪರ್ಫಾರ್ಮೆನ್ಸ್ ಕೂಡ ಸಾಕಷ್ಟು ಗಮನೀಯವಾಗಿದೆ. ನೋಡಿದ್ರಲ್ಲ ಸ್ನೇಹಿತರೆ ಪಾಂಡ್ಯ ರವರ ಅವರು ಗರ್ಲ್ಫ್ರೆಂಡ್ಸ್ ಕುರಿತಂತೆ ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.