Cleaning Tips: ಒಡವೆ ಸೇರಿ, ಮನೆಯಲ್ಲಿರುವ ಈ ಎಲ್ಲಾ ವಸ್ತುಗಳನ್ನು ಸ್ವಚ್ಛ ಮಾಡಲು ಟೂತ್ ಪೇಸ್ಟ್ ಬಳಸಿ ನೋಡಿ, ಆಮೇಲೆ ನೀವೇ ಭೇಷ್ ಅಂತೀರಾ.
Cleaning Tips: ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದು ಹೆಚ್ಚಾಗಿ ಮಹಿಳೆಯರ ಕೆಲಸ ಆಗಿರುತ್ತದೆ. ಮನೆಯ ಎಲ್ಲಾ ವಸ್ತುಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು ಎಂದು ಕೆಲವೊಮ್ಮೆ ತಲೆಕೆಡಿಸಿಕೊಂಡು ಏನೇನೋ ಮಾಡುತ್ತಾರೆ. ಆದರೆ ಕೆಲವು ಸಾರಿ ಮನೆಯಲ್ಲಿರುವ ಸಣ್ಣಪುಟ್ಟ ವಸ್ತುಗಳನ್ನೇ ಬಳಸಿ ಮನೆಯ ಹಲವು ವಸ್ತುಗಳನ್ನು ಕ್ಲೀನ್ ಮಾಡಬಹುದು. ಆ ರೀತಿಯಾಗಿ ಟೂತ್ ಪೇಸ್ಟ್ ಬಳಸಿ ಯಾವೆಲ್ಲಾ ವಸ್ತುಗಳನ್ನು ಕ್ಲೀನ್ ಮಾಡಬಹುದು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..
* ಆಭರಣಗಳ ಹೊಳಪು ಹೆಚ್ಚಿಸಿ (Cleaning Tips) :- ನಿಮ್ಮ ಆಭರಣಗಳು ಹೊಳೆಯುವ ಹಾಗೆ ಮಾಡಲು, ಟೂತ್ ಪೇಸ್ಟ್ ಗೆ ಸ್ವಲ್ಪ ನೀರು ಹಾಕಿ ಬೆರೆಸಿ, ಆ ಲಿಕ್ವಿಡ್ ನಲ್ಲಿ ನಿಮ್ಮ ಚಿನ್ನದ ಆಭರಣಗಳನ್ನು ಸ್ವಲ್ಪ ಸಮಯ ನೆನೆಸಿ, ಬಳಿಕ ಬ್ರಶ್ ಅಥವಾ ಸ್ಕ್ರಬ್ ಇಂದ ಅವುಗಳನ್ನು ಕ್ಲೀನ್ ಮಾಡಿ. ಇದರಿಂದ ನಿಮ್ಮ ಆಭರಣಗಳು ಫಳ ಫಳ ಹೊಳೆಯುತ್ತದೆ.
*ಟ್ರಾಲಿ ಬ್ಯಾಗ್ ಕ್ಲೀನ್ ಮಾಡಲು Cleaning Tips :- ಒಂದು ವೇಳೆ ನಿಮ್ಮ ಟ್ರಾಲಿ ಬ್ಯಾಗ್ ನಲ್ಲಿ ಕಲೆ ಆಗಿದ್ದರೆ.. ಅರ್ಧ ಸ್ಪೂನ್ ಟೂತ್ ಪೇಸ್ಟ್ ಗೆ ಒಂದು ಸ್ಪೂನ್ ಅಡುಗೆ ಸೋಡಾ ಬೆರೆಸಿ, ಅದನ್ನು ಟ್ರಾಲಿಯಲ್ಲಿ ಕಲೆ ಆಗಿರುವಲ್ಲಿ ಹಚ್ಚಿ, ಸ್ವಲ್ಪ ಹೊತ್ತು ಬಿಟ್ಟು ಕ್ಲೀನ್ ಆಗಿರುವ ಬಟ್ಟೆಯಿಂದ ಅದನ್ನು ಒರೆಸಿ, ಕ್ಲೀನ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಬ್ಯಾಗ್ ಸ್ವಚ್ಛವಾಗಿ ಕಾಣುತ್ತದೆ.
*ಟೈಲ್ಸ್ ಕ್ಲೀನ್ ಮಾಡಿ Cleaning Tips :- ನಿಮ್ಮ ಮನೆಯ ಹಾಗೂ ಬಾತ್ ರೂಮ್ ನ ಟೈಲ್ಸ್ ಕ್ಲೀನ್ ಮಾಡಲು, ಉಗುರು ಬೆಚ್ಚಗಿನ ನೀರಿಗೆ ಬೆರೆಸಿ ನಂತರ ನಿಮ್ಮ ಟೈಲ್ಸ್ ಅನ್ನು ಸಾಫ್ಟ್ ಆದ ಸ್ಕ್ರಬ್ ಇಂದ ಒರೆಸಿ ಕ್ಲೀನ್ ಮಾಡಿ. ನಿಮ್ಮ ಮನೆಯ ಟೈಲ್ಸ್ ಹೊಳಪಿನಿಂದ ಕೂಡುತ್ತದೆ.
*ಗೋಡೆಗಳನ್ನು ಕ್ಲೀನ್ ಮಾಡಲು :- ಕೆಲವೊಮ್ಮೆ ಗೋಡೆಗಳಲ್ಲಿ ತೂತು ಆಗಿರುತ್ತದೆ, ಅದರಿಂದ ಗೋಡೆಗಳು ಕ್ಲೀನ್ ಆಗಿ ಕಾಣುವುದಿಲ್ಲ. ಟೂತ್ ಪೇಸ್ಟ್ ಬಳಸುವುದರಿಂದ ತೂತುಗಳನ್ನು ಮುಚ್ಚಬಹುದು. ಟೂತ್ ಪೇಸ್ಟ್ ಒಣಗಿದ ನಂತರ ತೂತುಗಳು ಪೂರ್ತಿಯಾಗಿ ಮುಚ್ಚಿಹೋಗುತ್ತದೆ. ಬಿಗ್ ನ್ಯೂಸ್: ತೆಲುಗಿನ ಖ್ಯಾತ ನಿರೂಪಕಿ ಅರೆಸ್ಟ್: ಅಷ್ಟಕ್ಕೂ ಏನಾಗಿದೆ ಗೊತ್ತೇ?? ಈಕೆ ಮಾಡುತ್ತಿರುವುದು ಕೇಳಿದರೆ, ಅಂಗೇ ಊಟ ಮಾಡೋದೇ ಬಿಡ್ತೀರಾ.
*ನಲ್ಲಿಗಳನ್ನು ಕ್ಲೀನ್ ಮಾಡಲು Cleaning Tips :- ನಿಮ್ಮ ಬಾತ್ ರೂಮ್ ನಲ್ಲಿ ನಲ್ಲಿಗಳು ಕ್ಲೀನ್ ಆಗಿಲ್ಲದೆ ಹೋದರೆ, ಅವುಗಳನ್ನು ಕ್ಲೀನ್ ಮಾಡಲು ಟೂತ್ ಪೇಸ್ಟ್ ಹಾಗೂ ವಿನೆಗರ್ ಬಳಸಿ ಕ್ಲೀನ್ ಮಾಡಬಹುದು. ಟೂತ್ ಪೇಸ್ಟ್ ಹಾಗೂ ವೈಟ್ ವಿನೆಗರ್ ಮಿಕ್ಸ್ ಮಾಡಿ, ಅದನ್ನು ನಲ್ಲಿಯ ಮೇಲೆ ಹಚ್ಚಿ. ನಂತರ ನಲ್ಲಿಯನ್ನು ಸ್ಕ್ರಬ್ ಮಾಡಿ, ನೀರಿನಿಂದ ತೊಳೆಯಿರಿ. ಬಿಳಿ ವಿನೆಗರ್ ಇಲ್ಲದೆ ಹೋದರೆ, ನಿಂಬೆರಸ ಕೂಡ ಬಳಸಬಹುದು.
*ಕನ್ನಡಿ ಕ್ಲೀನ್ ಮಾಡಲು :- ನಿಮ್ಮ ಮನೆಯಲ್ಲಿ ಕನ್ನಡಿಯ ಮೇಲೆ ಗುರುತುಗಳು ಇದ್ದರೆ, ಗಾಜನ್ನು ಕ್ಲೀನ್ ಮಾಡುವುದಕ್ಕೆ ಟೂತ್ ಪೇಸ್ಟ್ ಬಳಸಬಹುದು. ಒಂದು ಬಟ್ಟೆಗೆ ಟೂತ್ ಪೇಸ್ಟ್ ಹಾಕಿಕೊಂಡು, ಕನ್ನಡಿಯನ್ನು ಒರೆಸಿ ಕ್ಲೀನ್ ಮಾಡಿ, ಆಗ ನಿಮ್ಮ ಕನ್ನಡಿ ಹೊಳೆಯುತ್ತದೆ. ಪುಣ್ಯವತೀ ಧಾರಾವಾಹಿಯಲ್ಲಿ ರಾಜ್ಯವೇ ಮೆಚ್ಚುವಂತೆ ನಟಿಸುತ್ತಿರುವ ಪದ್ಮಿನಿ ಪಾತ್ರದಾರಿ ರವರು ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ?
Comments are closed.