ಬಿಗ್ ಬಾಸ್ ಇಂದ ಹೊರ ಬಂದ ಒಂದೇ ವಾರಕ್ಕೆ ವರ್ತೂರ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ತನಿಷಾ. ನೆಟ್ಟಿಗರು ಶಾಕ್.
ನಮಸ್ಕಾರ ಸ್ನೇಹಿತರೆ ಈಗಾಗಲೇ ಕನ್ನಡ ಕಿರುಚರಿಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್ ಹತ್ತನೇ ಸೀಸನ್ ಕೊನೆಯ ಹಂತಕ್ಕೆ ಬಂದು ತಲುಪಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಕಾರ್ಯಕ್ರಮದ ಎಲ್ಲರ ಭರವಸೆಯ ಪ್ರತಿಸ್ಪರ್ಧಿಯಾಗಿದ್ದಂತಹ ತನಿಷ ಕುಪ್ಪಂಡ ಕಳೆದ ವಾರದ ಮಿಡ್ ವೀಕ್ ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಗೆಲ್ಲುವಂತ ಸ್ಪರ್ಧಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಂತಹ ಅವರು ಮನೆಯಿಂದ ಹೊರಗೆ ಬಂದಿದ್ದು ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವನ್ನು ತರಿಸಿತ್ತು.
ಬಿಗ್ ಬಾಸ್ ಮನೆಯಿಂದ ವಾರದ ಅರ್ಧದಲ್ಲೇ ಹೊರಬರುವ ಸಂದರ್ಭದಲ್ಲಿ ಕೂಡ ತನಿಷ ಕಣ್ಣೀರು ಹಾಕಿರುವುದನ್ನು ನಾವು ಕಾಣಬಹುದಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಡುವಾಗ ತನುಷ ತುಂಬಾನೇ ಬೇಸರದಲ್ಲಿ ಇದ್ದರೆ ಎಂಬುದನ್ನು ಕೂಡ ನಾವು ಕಂಡಿದ್ದೇವೆ ಹಾಗೂ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಮನಬಿಚ್ಚಿ ಮುಕ್ತವಾಗಿ ಮಾತನಾಡಿರುವುದನ್ನು ಕೂಡ ನಾವು ಕಂಡಿದ್ದೇವೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವುದರ ಬಗ್ಗೆ ಮಾತನಾಡುತ್ತಾ ತನಿಷ ರವರು ನಾನು ಇನ್ನಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುತ್ತೇನೆ ಫೈನಲ್ ತಲುಪುತ್ತೇನೆ ಎಂಬುದಾಗಿ ಭಾವಿಸಿದ್ದೆ ಆದರೆ ನನ್ನ ನಂಬಿಕೆ ಹೊರತಾಗಿ ನಾನು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದೇನೆ ತುಂಬಾನೇ ಬೇಸರವಾಯಿತು. ಆದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸ್ವಲ್ಪ ಸಮಯ ತೆಗೆದುಕೊಂಡು ಯೋಚಿಸಿದ ಮೇಲೆ ಜರ್ನಿಯನ್ನು ನಾನು ತುಂಬಾನೇ ಎಂಜಾಯ್ ಮಾಡಿದ್ದೇನೆ ಎನ್ನುವುದನ್ನು ಕಂಡುಕೊಂಡಿದ್ದೇನೆ ಎಂಬುದಾಗಿ ಹೇಳಿದ್ದಾರೆ.
ಮತ್ತೆ ಮನೆಯೊಳಗೆ ಹೋದ್ರೆ ನಿಮ್ಮ ರಿಯಾಕ್ಷನ್ ಯಾವ ರೀತಿ ಇರುತ್ತೆ ಅಂತ ಕೇಳಿದ ಪ್ರಶ್ನೆಗೆ ತನಿಷಾ ಅವರು, ವಿಚಾರ ಏನೇ ಇರಲಿ, ನೇರವಾಗಿ ಹೇಳಿ ಬಿಡುತ್ತೇನೆ ಯಾಕೆಂದರೆ ಮನೆಯಿಂದ ಹೊರ ಬಂದ ನಂತರ ನಾನು ಪಾಪ ಅಂತ ಅಂದುಕೊಳ್ಳುತ್ತಿದ್ದ ವ್ಯಕ್ತಿಗಳು ಕೊಟ್ಟಿದ್ದ ರಿಯಾಕ್ಷನ್ ನೋಡಿದ್ದೇನೆ ಅನ್ನೋದಾಗಿ ಹೇಳ್ತಾರೆ. ಇನ್ನು ಸ್ವಲ್ಪ ಡ್ರಾಮಾ ಕೂಡ ಮಾಡಬಹುದೇನೋ ಅನ್ನೋದಾಗಿ ಕೂಡ ವ್ಯಂಗ್ಯವಾಗಿ ತನಿಶಾ ಈ ಸಂದರ್ಭದಲ್ಲಿ ಹೇಳುತ್ತಾರೆ.
ಇನ್ನು ಬಿಗ್ ಬಾಸ್ ಮನೆಯ ಒಳಗೆ ಯಾರು ಇಷ್ಟ ಎನ್ನುವಂತಹ ಪ್ರಶ್ನೆಗೆ ಅವರು ವರ್ತೂರು ಸಂತೋಷ್ ರವರ ಉತ್ತರವನ್ನು ನೀಡುತ್ತಾರೆ. ಅವರ ಜೊತೆಗೆ ಮಾತನಾಡುವುದು ಬಿಗ್ ಬಾಸ್ ನ ಆರಂಭದಿಂದಲೂ ಕೂಡ ನನಗೆ ತುಂಬಾ ಇಷ್ಟ ಆಗಿತ್ತು ಅಂತ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜೆನ್ಯೂನ್ ಅಂತ ಅನಿಸಿರುವುದು ಕೇವಲ ವರ್ತೂರು ಸಂತೋಷ್ ಮಾತ್ರ ಅಂತಾನು ಕೂಡ ಈ ಸಂದರ್ಭದಲ್ಲಿ ಹೇಳಿದ್ದಾರೆ.
Comments are closed.