Neer Dose Karnataka
Take a fresh look at your lifestyle.

50 ಲಕ್ಷ ಹಣ, 1 ಕೆಜಿ ಬಂಗಾರ, ಕಾರು ಮತ್ತು ಮನೆ ಕೊಟ್ಟು ಮದುವೆ ಮಾಡಿದರೇ, ಗಂಡ ಹೋಗಬೇಕಿದ್ದ ರೂಮಿನಲ್ಲಿ ಹಾವು ಇದ್ದದ್ದು ಯಾಕೆ ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಕೇರಳದಲ್ಲಿ ಮದುವೆಯಾದ ನಂತರ ಸುಖ ಸಂಸಾರ ಮಾಡುವವರ ಸಂಖ್ಯೆ ಕಡಿಮೆಯಾಗಿ ಬಿಟ್ಟಿದೆ. ಹಣ ಹಾಗೂ ಆಸ್ತಿಯ ದಾಹಕ್ಕಾಗಿ ಜೀವನ ತೆಗೆಯಲು ಕೂಡ ಯಾರು ಹಘಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬನ್ನಿ ಇದೇ ಮಾದರಿಯ ಒಂದು ಪ್ರಕರಣವನ್ನು ನಾವು ಇಂದು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ ಕೊನೆವರೆಗೂ ತಪ್ಪದೇ ಓದಿ.

ಹೌದು ಸ್ನೇಹಿತರೆ ಎಲ್ಲಾ ಪ್ರಕರಣದಂತೆ ಇದು ಕೂಡ ನಡೆದಿದ್ದು ಕೇರಳದ ಕೊಲ್ಲಂನಲ್ಲಿ. ವಿಜಯನ್ ಎಂಬ ವ್ಯಾಪಾರಿಗೆ ಒಬ್ಬ ಹೆಣ್ಣು ಹಾಗೂ ಇನ್ನೊಬ್ಬ ಗಂಡುಮಗ ಇರುತ್ತಾರೆ. ಇಂದು ನಾವು ಹೇಳುತ್ತಿರುವುದು ವಿಜಯನ್ ಅವರ ಮಗಳಾದ ಉತ್ತರ ರವರ ಕುರಿತಂತೆ. ಸಾಕಷ್ಟು ಸ್ಥಿತಿವಂತರಾಗಿದ್ದ ವಿಜಯನ್ ರವರು ತಮ್ಮ ಮಗಳಾದ ಉತ್ತರ ಳನ್ನು ಒಳ್ಳೆಯ ಮನೆತನಕ್ಕೆ ಕೊಟ್ಟು ಮದುವೆ ಮಾಡಬೇಕೆಂಬ ಕನಸಿನಲ್ಲಿದ್ದರು. ಇದಕ್ಕಾಗಿ ಯಾರದೋ ಸಲಹೆ ಮೇರೆಗೆ ಸೂರಜ್ ಎಂಬ ಹುಡುಗನ ಬಗ್ಗೆ ತಿಳಿಯುತ್ತದೆ. ಸೂರಜ್ ಮಧ್ಯಮ ವರ್ಗ ಕುಟುಂಬದ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಪಡೆದಂತಹ ಹುಡುಗ.

ಆತನ ಬಗ್ಗೆ ಎಲ್ಲರೂ ಒಳ್ಳೆಯ ಮಾತನಾಡುತ್ತಿದ್ದರು ಹೀಗಾಗಿ ತಮ್ಮ ಮಗಳನ್ನು ಅವನಿಗೆ ಕೊಟ್ಟು ಮದುವೆ ಮಾಡುವುದು ಸೂಕ್ತ ಎಂದು ತಿಳಿದರು ವಿಜಯನ್. ವಿಜಯನ್ ಅವರು ತಮ್ಮ ಮಗಳು ಉತ್ತರಳನ್ನು ಸೂರಜ್ ಅವರಿಗೆ ಅದ್ದೂರಿಯಾಗಿ ಮದುವೆ ಮಾಡಿಕೊಡುತ್ತಾರೆ. ಮಾತ್ರವಲ್ಲದೆ ಮಗಳ ಸಲುವಾಗಿ ಸೂರಜ್ ರವರಿಗೆ ಕೆಜಿಗೂ ಅಧಿಕ ಚಿನ್ನವನ್ನು 50 ಲಕ್ಷಕ್ಕೂ ಅಧಿಕ ಹಣವನ್ನು ಒಂದು ಫ್ಲ್ಯಾಟನ್ನು ಹಾಗೂ ಹನಿಮೂನ್ ಗಾಗಿ ವಿದೇಶಕ್ಕೆ ಹೋಗಲು ಖರ್ಚಿಗಾಗಿ 20 ಲಕ್ಷ ಹಣವನ್ನು ನೀಡಿ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ ನಿಮಗೆ ಏನು ಬೇಕಿದ್ದರೂ ನನ್ನನ್ನು ಕೇಳಿ ನನ್ನ ಮಗನಂತೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಇದಾದನಂತರ ಸೂರಜ್ ಅವರು ಆರು ತಿಂಗಳುಗಳ ಕಾಲ ಚೆನ್ನಾಗಿ ನೋಡಿಕೊಂಡಿದ್ದರು.

ನಂತರ ತನ್ನ ಹೆಂಡತಿಯಾದ ಉತ್ತರವನ್ನು ಹಣಕ್ಕಾಗಿ ಪೀಡಿಸತೊಡಗಿದರು. ಮಾವ ಕೊಟ್ಟಿದ್ದ 70 ಲಕ್ಷ ದಲ್ಲಿ ತಮ್ಮತಂಗಿಯರ ಮದುವೆ ಹಾಗೂ ಮೋಜಿಗಾಗಿ ಖರ್ಚು ಮಾಡುತ್ತಾನೆ. ನಂತರ ಮತ್ತೆ ತನ್ನ ಪತ್ನಿ ಉತ್ತರ ಬಳಿ 10 ಲಕ್ಷ ಹಣವನ್ನು ತಂದೆಯಿಂದ ತೆಗೆದುಕೊಳ್ಳುತ್ತಾನೆ. ಮಾತ್ರವಲ್ಲದೆ ಉತ್ತರ ಹೆಸರಿನಲ್ಲಿದ್ದ ಫ್ಲ್ಯಾಟನ್ನು ತನ್ನ ಹೆಸರಿಗೆ ವರ್ಗಾಯಿಸಿ ಕೊಳ್ಳುತ್ತಾರೆ. ಆದರೂ ಕೂಡ ಸೂರಜ್ ಗೆ ಹಾಗೂ ಅವರ ಮನೆಯವರಿಗೆ ಹಣದ ದಾಹ ಕಡಿಮೆಯಾಗುವುದಿಲ್ಲ. ಇದಕ್ಕಾಗಿ ಸೂರಜ್ ಗೆ ಇನ್ನೊಂದು ಮದುವೆ ಮಾಡಲು ತೀರ್ಮಾನಿಸುತ್ತಾರೆ ಆದರೆ ಅದಕ್ಕೆ ಅಡ್ಡ ಆಗಿದ್ದವಳು ಉತ್ತರ. ಹೀಗಾಗಿ ಸೂರಜ್ ಉತ್ತರಳನ್ನು ಮುಗಿಸಲು ಉಪಾಯ ಹೂಡಲು ಪ್ರಾರಂಭಿಸುತ್ತಾನೆ.

ಇದಕ್ಕಾಗಿ ಆತ ಮೊದಲು ಯೋಚಿಸಿದ್ದೇ ಹಾವನ್ನು ಕಚ್ಚಿಸಲು. ಹೌದು ಸ್ನೇಹಿತರೆ ಸೂರಜ್ ಇದ್ದ ಪ್ರದೇಶದಲ್ಲಿ ಹಾವುಗಳ ಸಂಖ್ಯೆ ಮಿತಿ ಮೀರಿತ್ತು. ಇದಕ್ಕಾಗಿ ಆತ ಹಾಡಿದ ಸುರೇಶ್ ಅನು ಪರಿಚಯಿಸಿಕೊಂಡು ಒಂದು ಹಾವನ್ನು rs.10000 ಕ್ಕೆ ಖರೀದಿಸುತ್ತಾರೆ. ಹಾವನ್ನು ಖರೀದಿಸಿದ ನಂತರ ಉತ್ತರ ಮಲಗಿದ್ದ ಕೋಣೆಗೆ ಹಾವನ್ನು ಬಿಟ್ಟು ಕಚ್ಚಿಸುತ್ತಾನೆ. ಹಾವು ಕಚ್ಚಿದ ಕ್ಷಣವೇ ಉತ್ತರ ಎದ್ದು ರಂಪಾಟ ಮಾಡುತ್ತಾಳೆ ವಿಧಿಯಿಲ್ಲದೆ ಸೂರಜ್ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಆಗ ಆಕೆಯ ಅಪ್ಪ ತಮ್ಮ ಮಗಳನ್ನು ಉಳಿಸಿದ್ದಕ್ಕಾಗಿ ಅವರಿಗೆ ಕೃತಜ್ಞತೆಯನ್ನು ಹೇಳುತ್ತಾನೆ. ಆದರೆ ತನ್ನ ಮೊದಲ ಪ್ಲಾನ್ ಫೇಲಾಗಿದ್ದಕ್ಕಾಗಿ ವ್ಯಥೆ ಪಡುತ್ತಾನೆ.

ನಂತರ ಮತ್ತೊಮ್ಮೆ ಹಿಂದಿಗಿಂತ ವಿಷಪೂರಿತ ಹಾವನ್ನು ಕೆಲವು ತಿಂಗಳುಗಳ ನಂತರ ಉತ್ತರ ಮಲಗಿದ್ದ ಕೋಣೆಗೆ ತಂದುಬಿಡುತ್ತಾರೆ ಹಾಗೂ ಹೊರಗಿನಿಂದ ಬಾಗಿಲು ಹಾಕಿಕೊಂಡು ಹೋಗುತ್ತಾನೆ. ಹಾವು ಈಗ ಉತ್ತರ ಗೆ ಎರಡೆರಡು ಬಾರಿ ಕಚ್ಚಿದಾಗ ಉರಿಯಿಂದ ಕೂಗಾಡುತ್ತಾರೆ ಆದರೆ ಹೊರಗೆ ಬಾಗಿಲು ಹಾಕಿದ ಕಾರಣ ಯಾರು ಕೂಡ ಆಕೆ ಸಹಾಯಕ್ಕೆ ಬರುವುದಿಲ್ಲ. ಕೂಗಾಡಿ ಕಿರುಚಾಡಿ ಒದ್ದಾಡಿ ಉತ್ತರ ಪ್ರಾಣ ಬಿಡುತ್ತಾಳೆ. ಆಕೆಯ ದೇಹವನ್ನು ನೋಡಲು ಬಂದ ಉತ್ತರಳ ಹೆತ್ತವರು ಕಂಗಾಲಾಗುತ್ತಾರೆ. ಮೊದಲಿಗೆ ಸೂರಜ್ ಕೂಡ ಮೊಸಳೆ ಕಣ್ಣೀರು ಹಾಕಿ ಅವರು ನಂಬುವಂತೆ ಮಾಡಿದ್ದರು ಕೂಡ ನಂತರ ಈ ಹಿಂದೆ ನಡೆದಿದ್ದ ಪ್ರಕರಣ ನೋಡಿ ವಿಜಯನ್ ರವರಿಗೆ ಅನುಮಾನ ಬಂದು ಪ್ರಕರಣ ದಾಖಲಿಸಿದ್ದಾರೆ. ಸೂರಜ್ ಹಾಗೂ ಅವರ ಮನೆಯವರನ್ನು ವಿಚಾರಿಸಿದ ಪೊಲೀಸರು ಸತ್ಯವನ್ನು ಹೊರ ಬೀಳಿಸಿದ್ದಾರೆ. ಈಗ ಸೂರಜ್ ಆಗುವ ಆತನ ಮನೆಯವರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.

Leave A Reply

Your email address will not be published.