Neer Dose Karnataka
Take a fresh look at your lifestyle.

ಮದುವೆಯಾದ ಒಂದೇ ತಿಂಗಳಿಗೆ ತನ್ನ ಹೆಂಡತಿಯನ್ನು ಏನು ಮಾಡಿದ್ದಾನೆ ಗೊತ್ತಾ?? ಕೇಳಿದ ಇಡೀ ಊರೇ ಶಾಕ್. ಅದು ಕೇವಲ ಏನು ಮಾಡಲಿಕ್ಕೆ ಗೊತ್ತೇ??

1

ನಮಸ್ಕಾರ ಸ್ನೇಹಿತರೇ ಮದುವೆ ಅನ್ನೋದು ಎಷ್ಟು ಪವಿತ್ರವಾದ ಸಂಬಂಧ ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತು ಕೂಡ ಇದೆ. ಆದರೆ ಇಲ್ಲೊಬ್ಬ ಪತಿರಾಯ ಮಾಡಿರುವ ಕೆಲಸ ನೋಡಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯಚಕಿತರಾಗಿರುತ್ತೀರಿ. ಹೌದು ನೀವು ಈ ವಿಚಾರವನ್ನು ಕೇಳಲೇಬೇಕು. ಒರಿಸ್ಸಾದ 17 ವರ್ಷದ ವ್ಯಕ್ತಿಯೊಬ್ಬ ತನಗಿಂತಲೂ ಒಂಬತ್ತು ವರ್ಷ ದೊಡ್ಡವಳು ಆಗಿರುವ ಅಂದರೆ 26 ವರ್ಷದ ಹುಡುಗಿಯನ್ನು ಮದುವೆಯಾಗಿದ್ದ.

ಇನ್ನು ಇದು ಮದುವೆಯಾಗಿರುವುದು ಅವನ ಇಚ್ಛೆ ಅನುಸಾರವಾಗಿ ಅಲ್ಲ. ಬದಲಾಗಿ ಮನೆಯವರ ಒತ್ತಾಯದ ಮೇರೆಗೆ ಎಂದು ಪರೋಕ್ಷವಾಗಿ ಹೇಳಬಹುದು. ಇನ್ನು ಅವನಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಕೆಲಸ ಮಾಡಿ ತಿಳಿದಿರಲಿಲ್ಲ. ಚಿಕ್ಕವಯಸ್ಸಿನಿಂದಲೂ ಕೂಡ ಅವನ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದದ್ದು ಅವನ ತಂದೆ ಹಾಗೂ ತಾಯಿ. ಇನ್ನು ಈತ ರಾಜಸ್ಥಾನದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾನೆ ಹಾಗೂ ತನ್ನ ಹೆಂಡತಿಯನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಿರುತ್ತಾನೆ. ಆದರೆ ಈತ ಅಲ್ಲಿ ಮಾಡಿರುವ ವಿಚಾರ ನಿಮ್ಮನ್ನು ಹೈರಾಣು ಮಾಡುವುದು ಖಂಡಿತ. ಅದೇನೆಂದರೆ ತನ್ನ ಹೆಂಡತಿಯನ್ನು ರಾಜಸ್ಥಾನದ 55 ವರ್ಷದ ವ್ಯಕ್ತಿಗೆ ಮಾರಿರುತ್ತಾನೆ.

ಹೌದು ಈತ ತನ್ನ ಹೆಂಡತಿಯನ್ನು 1.8 ಲಕ್ಷಕ್ಕೆ 55 ವರ್ಷದ ವ್ಯಕ್ತಿಗೆ ಮಾರಿರುತ್ತಾನೆ. ಬಂದ ಹಣದಲ್ಲಿ ತನಗೆ ಇಷ್ಟ ಬಂದಂತೆ ತಿಂದು ನಂತರ ಸ್ಮಾರ್ಟ್ಫೋನ್ ಒಂದನ್ನು ಖರೀದಿಸುತ್ತಾನೆ. ಅದೇ ಹಣದಲ್ಲಿ ಊರಿಗೆ ಬಂದು ಹೆಂಡತಿ ನನ್ನನ್ನು ಬಿಟ್ಟು ಹೋದಳೆಂದು ಊರವರಿಗೆ ನಂಬಿಸಲು ಪ್ರಯತ್ನಿಸುತ್ತಾನೆ. ಆದರೆ ಅವರ ಹೆಂಡತಿಯ ಮನೆಯವರು ಇವರ ಮೇಲೆ ಅನುಮಾನ ಪಟ್ಟು ಪೊಲೀಸರಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ಇವನ ಮೊಬೈಲ್ ಫೋನ್ ನಲ್ಲಿರುವ ಕರೆಯ ಮಾಹಿತಿಗಳನ್ನು ಕಲೆಹಾಕಿ ನಿಜ ವಿಚಾರವನ್ನು ಕಂಡು ಹಿಡಿದಿದ್ದಾರೆ. ನಂತರ ಪೊಲೀಸರು ರಾಜಸ್ಥಾನಕ್ಕೆ ತೆರಳಿ 55 ವರ್ಷದ ವ್ಯಕ್ತಿಯ ಬಳಿ ಹೆಂಡತಿಯನ್ನು ಬಿಟ್ಟುಕೊಡಲು ಕೇಳಿದ್ದಾರೆ. ಅದಕ್ಕೆ ಆತ ಹಾಗೂ ಆತನ ಊರಿನವರು ನಾನು ಲಕ್ಷಗಟ್ಟಲೆ ಹಣವನ್ನು ಕೊಟ್ಟು ಆಕೆಯನ್ನು ಖರೀದಿಸಿದ್ದೇನೆ ಕೊಡುವುದಿಲ್ಲ ಎಂಬುದಾಗಿ ಹೇಳುತ್ತಾರೆ. ಅದಾದ ನಂತರವೂ ಕೂಡ ಪೊಲೀಸರು ಕೆಲವೊಂದು ಮಾತುಗಳಿಂದ ಆತನನ್ನು ಪುಸಲಾಯಿಸಿ ಆಕೆಯನ್ನು ಕರೆತರುತ್ತಾರೆ.

Leave A Reply

Your email address will not be published.