Neer Dose Karnataka
Take a fresh look at your lifestyle.

ಪ್ರಾಣ ಹೋದರೂ ಕೂಡ ಈ ಎರಡು ಪದಗಳನ್ನು ಮಹಿಳೆಯರಿಗೆ ಬಳಸಬೇಡಿ, ಪಾಪ ಸುತ್ತಿಕೊಳ್ಳುತ್ತದೆ. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳಿಗೆ ಗಂಡಿಗಿಂತ ಉನ್ನತವಾದ ಸ್ಥಾನ ಹಾಗೂ ಗೌರವಗಳನ್ನು ನೀಡುತ್ತಾರೆ. ಹೆಣ್ಣನ್ನು ಪ್ರಕೃತಿ ಮಾತೆಯಾಗಿ ದೇವಿಯಾಗಿ ಹೀಗೆ ಇದು ಹಲವಾರು ರೂಪಗಳಲ್ಲಿ ಪೂಜಿಸುತ್ತಾರೆ. ಹೆಣ್ಣು ಸಮಾಜದ ಕಣ್ಣು ಎಂಬ ಪರಿಭಾವನೆ ನಮ್ಮ ಹಿಂದೂ ಸಮಾಜದಲ್ಲಿದೆ. ಹಾಗಾಗಿ ನಾವು ನಮ್ಮ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನವನ್ನು ಇರುತ್ತದೆ. ಕುಟುಂಬದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಂತಹ ಪ್ರಕ್ರಿಯೆ ಎಂದು ಹೇಳಬಹುದು.

ಹೆಣ್ಣು ನಮ್ಮನ್ನು ಇರುವ ತಾಯಿಯಾಗಿ ಒಡಹುಟ್ಟಿದ ಅಕ್ಕ ತಂಗಿಯಾಗಿ ನಮ್ಮ ಕಷ್ಟಗಳನ್ನು ಅರಿತುಕೊಳ್ಳುವ ಮಡದಿಯಾಗಿ ಹೀಗೆ ಹಲವಾರು ರೂಪಗಳಲ್ಲಿ ನಮ್ಮನ್ನು ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿ ಹೆಣ್ಣನ್ನು ನಮ್ಮ ಸಮಾಜ ಯಾವತ್ತೂ ಪವಿತ್ರ ರೂಪದಲ್ಲಿ ಕಾಣುತ್ತದೆ. ಇಂದು ನಾವು ಎರಡು ವಿಷಯದ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಎರಡು ವಿಷಯ ಎಂದರೆ ವಿಷಯ ಒಂದೇ ಆದರೆ ಅದಲ್ಲಿರುವ ಅಂಶಗಳು ೨.

ಹೌದು ನೀವು ಮಹಿಳೆಯರಿಗೆ ಅವಮಾನ ಮಾಡುವುದು ತಪ್ಪು ಅದರಲ್ಲೂ ಆ ಸಮಯದಲ್ಲಿ ಎರಡು ಪದಗಳನ್ನು ಬಳಸಲೇಬೇಡಿ. ಎರಡು ಪದಗಳು ಯಾವುವು ಅದರಿಂದ ಏನಾಗುತ್ತದೆ ಎಂಬುದನ್ನು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಮೊದಲನೇದಾಗಿ ಬಂಜೆ ಎಂದು ಯಾವ ಮಹಿಳೆಯನ್ನು ಸಂಬೋಧಿಸಬೇಡಿ. ಮಕ್ಕಳಾಗದೇ ಇರೋದು ಅವರ ತಪ್ಪು ಆಗಿರುವುದಿಲ್ಲ. ಹೆಣ್ಣಾದ ಮಾತ್ರಕ್ಕೆ ಮಕ್ಕಳನ್ನು ಹೆರಲೇ ಬೇಕೆಂಬ ಯಾವ ನಿಯಮ ವಾಗಲಿ ಶರತ್ತಾಗಲಿ ಇರುವುದಿಲ್ಲ.

ಹಾಗಾಗಿ ಅವರು ಮಕ್ಕಳನ್ನು ಹೆರದಿದ್ದ ಮಾತ್ರಕ್ಕೆ ಅವರನ್ನು ಬಂಜೆಯೆಂದು ಹೀಯಾಳಿಸುವುದು ಖಂಡಿತ ತಪ್ಪು. ಇದು ಅವರು ಮನಸ್ಸಿಗೆ ದುಃಖ ತೆಗೆದುಕೊಂಡು ಶಾಪ ಹಾಕಲಿ ಹಾಕದೆ ಇರಲಿ ಆ ಮಾತಿನ ಶಿಕ್ಷೆ ನಿಮಗೆ ತಟ್ಟುತ್ತೆ. ಯಾಕೆಂದರೆ ಅಂತಹ ಮಾತು ಮಹಿಳೆಗೆ ಮನಸ್ಸಿಗೆ ತುಂಬಾ ದುಃಖವನ್ನುಂಟು ಮಾಡುತ್ತದೆ. ಮಹಿಳೆಯ ಮನಸ್ಸಿಗೆ ದುಃಖವನ್ನು ಉಂಟು ಮಾಡುವುದು ಎಲ್ಲದಕ್ಕಿಂತ ದೊಡ್ಡ ಪಾಪ ಎಂದು ಹೇಳಬಹುದು. ಹಾಗಾಗಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಬಂಜೆ ಬಂಜೆಯೆಂದು ಹೀಯಾಳಿಸಿ ಅವರ ಮನಸ್ಸಿಗೆ ದುಃಖವನ್ನುಂಟು ಮಾಡುವುದು ಮಹಾಪಾಪವೆಂದು ಹೇಳಬಹುದು ಹಾಗೆ ಇದಕ್ಕೆ ಕರ್ಮ ನಿಮಗೆ ಶಿಕ್ಷೆಯನ್ನು ಖಂಡಿತ ನೀಡುತ್ತದೆ.

ಇನ್ನು ಎರಡನೆಯದಾಗಿ ಯಾವುದೇ ಮಹಿಳೆಯನ್ನು ವೇಶ್ಯೆ ಎಂದು ಕರೆಯಲು ಹೋಗಬೇಡಿ. ಮಹಿಳೆ ತನ್ನ ಪರಿಸ್ಥಿತಿಯ ಅನಾನುಕೂಲತೆಯಿಂದ ಆಗಿ ಆ ಕೆಲಸವನ್ನು ಮಾಡುತ್ತಾರೆ ಹೊರತು ಅವಳು ಮನಸ್ಸು ಇಚ್ಚೆಯಿಂದ ಮಾಡಲು ಸಾಧ್ಯವಿಲ್ಲ. ಹಾಗೆ ಆರ್ಥಿಕ ಪರಿಸ್ಥಿತಿ ಅವರನ್ನು ಈ ಕೆಲಸ ಮಾಡಲು ಪ್ರೇರೇಪಿಸಿ ಇರಬಹುದು. ಹಾಗಾಗಿ ಅವರನ್ನು ಅಂತಹ ಕೆಟ್ಟ ಪದಗಳಿಂದ ಸಂಬೋಧಿಸುವುದು ಅವರಲ್ಲಿ ದುಃಖವನ್ನು ಉಂಟು ಮಾಡಿ ಅದರ ಶಾಪ ನಿಮಗೆ ತಟ್ಟುವಂತೆ ಆಗಬಹುದು. ಹಾಗಾಗಿ ಈ ಶಬ್ದದಿಂದಲೂ ಕೂಡ ಮಹಿಳೆಯರನ್ನು ಸಂಬೋಧಿಸಬೇಡಿ.

ನೋಡಿದ್ರಲ್ಲ ಸ್ನೇಹಿತರೆ ಬಂಜೆ ಹಾಗು ವೇಶ್ಯೆ ಎಂಬ ಎರಡು ಪದಗಳನ್ನು ಎಂದಿಗೂ ಮಹಿಳೆಯರನ್ನು ಅವಮಾನಿಸುವ ಸಂದರ್ಭದಲ್ಲಿ ಉಪಯೋಗಿಸಬೇಡಿ. ಇದರಿಂದ ನಿಮಗೆ ಯಾವ ಶಾಪ ತಟ್ಟಬಹುದು ಎಂಬ ನಂಬಿಕೆ ಕೂಡ ಇದೆ. ಯಾರಿಗೂ ದುಃಖ ನೀಡುವುದು ಉಚಿತವಾದ ಕಾರ್ಯವಲ್ಲ ಆದರೆ ಮಹಿಳೆಯರಿಗಂತೂ ದುಃಖವನ್ನು ನೀಡಲೇಬಾರದು. ಯಾಕೆಂದರೆ ಹೆಣ್ಣು ಮನಸ್ಸು ಎಂದಿಗೂ ಪರಿಶುದ್ಧ ವಂತೆ ಆಕೆ ದುಃಖದಿಂದ ಇನ್ನೊಂದು ನಿಮಗೆ ಶಾಪ ನೀಡಿದರೆ ಅದು ಖಂಡಿತವಾಗಿ ತಟ್ಟುತ್ತದೆ ಎಂಬುದು ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಂತಹ ಸತ್ಯ. ಸ್ನೇಹಿತರೇ ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.