ಇಂಟರ್ನೆಟ್ ನಲ್ಲಿ ಡೌನ್ಲೋಡ್ ವೇಗವನ್ನು ಆಧರಿಸಿ ಎಲ್ಲಾ ನೆಟ್ವರ್ಕ್ ಗಳ ಸ್ಪೀಡ್ ಅನ್ನು ಬಿಡುಗಡೆ ಮಾಡಿದ ಟ್ರಾಯ್, ಮೊದಲನೇ ಸ್ಥಾನ ಪಡೆದ ಸಿಮ್ ಯಾವುದು ಗೊತ್ತೇ??
ಈಗಿನ ಕಾಲದಲ್ಲಿ ಎಲ್ಲರೂ ಹೆಚ್ಚಾಗಿ ಬಳಸುವುದು ಇಂಟರ್ನೆಟ್. ಇಂಟರ್ನೆಟ್ ಸ್ಪೀಡ್ ಆಗಿ ವರ್ಕ್ ಆಗಬೇಕು ಎಂದೇ ಎಲ್ಲರೂ ಬಯಸುತ್ತಾರೆ. ಭಾರತದಲ್ಲಿ ಇಂಟರ್ನೆಟ್ ಸೇವೆ ಇರುವ ಪ್ರಮುಖ ನೆಟ್ವರ್ಕ್ ಗಳು ವೊಡಾಫೋನ್ ಐಡಿಯಾ, ಭಾರತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಪ್ರಮುಖವಾದದ್ದಾಗಿದೆ. ಮಾರ್ಚ್ ತಿಂಗಳಿನಲ್ಲಿ ಅತಿಹೆಚ್ಚು ಡೌನ್ಲೋಡ್ ಸ್ಪೀಡ್ ಇರುವ ನೆಟ್ವರ್ಕ್ ಯಾವುದು ಎಂದು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ( ಟ್ರಾಯ್ ) ತಿಳಿಸಿದೆ. ಟ್ರಾಯ್ ನೀಡಿರುವ ಮಾಹಿತಿಯ ಪ್ರಕಾರ, ಮಾರ್ಚ್ ತಿಂಗಳಿನಲ್ಲಿ ಅತಿಹೆಚ್ಚು ಡೌನ್ಲೋಡ್ ಸ್ಪೀಡ್ ಹೊಂದಿರುವ ನೆಟ್ವರ್ಕ್ ರಿಲಯನ್ಸ್ ಜಿಯೋ ಆಗಿದೆ.
ಮಾರ್ಚ್ ತಿಂಗಳಿನಲ್ಲಿ ರಿಲಯನ್ಸ್ ಜಿಯೋ ಸಂಸ್ಥೆಯ 4ಜಿ ನೆಟ್ವರ್ಕ್ 21.21ಎಂಬಿಪಿಎಸ್ ಸ್ಪೀಡ್ ಹೊಂದಿದ್ದು, ಫೆಬ್ರವರಿ ತಿಂಗಳಿನಲ್ಲಿ 20.6 ಎಂಬಿಪಿಎಸ್ ಸ್ಪೀಡ್ ಇತ್ತು. ಈ ತಿಂಗಳು ಶೇ.2.5ರಷ್ಟು ನೆಟ್ವರ್ಕ್ ಸ್ಪೀಡ್ ನಲ್ಲಿ ಹೆಚ್ಚಳ ಕಂಡುಬಂದಿದೆ. ಈ ಮೂಲಕ ಹೆಚ್ಚು ನೆಟ್ವರ್ಕ್ ಸ್ಪೀಡ್ ಹೊಂದಿರುವ ನೆಟ್ವರ್ಕ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಜಿಯೋ. ಇನ್ನುಳಿದ ಹಾಗೆ ವೊಡಾಫೋನ್ 4ಜಿ ನೆಟ್ವರ್ಕ್ ನಲ್ಲಿ, 17.9 ಎಂಬಿಪಿಎಸ್ ಸ್ಪೀಡ್ ಹೊಂದಿದ್ದು, ಏರ್ಟೆಲ್ 4ಜಿ ನೆಟ್ವರ್ಕ್ ನಲ್ಲಿ 13.7.ಎಂಬಿಪಿಎಸ್ ಸ್ಪೀಡ್ ಇದೆ ಎಂದು ತಿಳಿದುಬಂದಿದೆ. ಈ ಎರಡದಲ್ಲಿ ಸ್ಪೀಡ್ ನಲ್ಲಿ ಇಳಿಕೆ ಕಂಡುಬಂದಿದೆ. ಹಾಗೂ ಬಿ.ಎಸ್.ಎನ್.ಎಲ್ ನೆಟ್ವರ್ಕ್ ನಲ್ಲಿ 6.1 ಎಂಬಿಪಿಎಸ್ ಡೌನ್ಲೋಡ್ ವೇಗ ಇದೆ ಎಂದ್ ಟ್ರಾಯ್ ವರದಿ ತಿಳಿಸಿದೆ.
ಡೌನ್ಲೋಡ್ ನ ವೇಗ ಇಂಟರ್ನೆಟ್ ಇಂದ ಮಾಹಿತಿಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ, ಹಾಗೂ ಅಪ್ಲೋಡ್ ವೇಗವು, ನಮ್ಮ ಸಂಪರ್ಕದಲ್ಲಿ ಇರುವವರಿಗೆ ಫೋಟೋ ಅಥವಾ ವಿಡಿಯೋಗಳನ್ನು ತಲುಪಿಸಲು ಸಹಾಯ ಮಾಡುತ್ತದೆ. ಎಲ್ಲಾ ನೆಟ್ವರ್ಕ್ ಗಳ ಅಪ್ಲೋಡ್ ವೇಗದ ಬಗ್ಗೆ ನೋಡುವುದಾದರೆ, ಮಾರ್ಚ್ ತಿಂಗಳಿನಲ್ಲಿ ವೊಡಾಫೋನ್ 4ಜಿ ನೆಟ್ವರ್ಕ್ ನ ಅಪ್ಲೋಡ್ ವೇಗ, 8.3ಎಂಬಿಪಿಎಸ್ ಸ್ಪೀಡ್ ಹೊಂದಿದ್ದು, ಮೊದಲ ಸ್ಥಾನದಲ್ಲಿದೆ ವೊಡಾಫೋನ್. ರಿಲಯನ್ಸ್ ಜಿಯೋ 7.3 ಎಂಬಿಪಿಸ್ ಅಪ್ಲೋಡ್ ವೇಗ ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಏರ್ಟೆಲ್ ನೆಟ್ವರ್ಕ್ 6.1ಎಂಬಿಪಿಎಸ್ ಅಪ್ಲೋಡ್ ನೆಟ್ವರ್ಕ್ ಹೊಂದಿದ್ದು, ಬಿ.ಎಸ್.ಎನ್.ಎಲ್ 5.1ಎಂಬಿಪಿಎಸ್ ಅಪ್ಲೋಡ್ ಸ್ಪೀಡ್ ಹೊಂದಿದೆ. ಮೈ ಸ್ಪೀಡ್ ಆಪ್ ನ ಸಹಾಯದಿಂದ ಟ್ರಾಯ್ ಈ ಮಾಹಿತಿಗಳನ್ನು ನೀಡಿದೆ.
Comments are closed.