Neer Dose Karnataka
Take a fresh look at your lifestyle.

ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಟ್ಯಾಕ್ಸಿ ಡ್ರೈವರ್. ಅಸಲಿಗೆ ಆ ಹುಡುಗಿಗೆ ಈತ ಏನು ಮಾಡಿದ್ದ ಗೊತ್ತೇ?? ಇಷ್ಟೊಂದು ಸುದ್ದಿಯಾಗಲು ಕಾರಣವೇನು??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಯಾವ ಮನುಷ್ಯನಲ್ಲಿ ಕೂಡ ಮಾನವೀಯತೆ ಇದ್ದಂತೆ ಕಾಣುತ್ತಿಲ್ಲ. ಇಡೀ ದುನಿಯ ತನ್ನ ಸ್ವಾರ್ಥಕ್ಕಾಗಿ ಜೀವನವನ್ನು ನಡೆಸುತ್ತಿದೆ ಯಾವೊಬ್ಬ ಕಷ್ಟದಲ್ಲಿರುವವರಿಗೆ ಕೂಡ ಸಹಾಯವನ್ನು ಮಾಡುತ್ತಿಲ್ಲ ಎನ್ನುವುದನ್ನು ನೀವು ಸಮಾಜದಲ್ಲಿ ನೋಡಬಹುದಾಗಿದೆ. ಸಮಾಜದಲ್ಲಿ ಒಬ್ಬ ವ್ಯಕ್ತಿಯ ಬಟ್ಟೆ ಚೆನ್ನಾಗಿದ್ದಾರೆ ಆತ ಶ್ರೀಮಂತ ಎಂದು ನಾರ್ಮಲ್ ಬಟ್ಟೆಯನ್ನು ಹಾಕಿಕೊಂಡಿದ್ದಾರೆ ಆತನನ್ನು ಬಡವನೆಂದು ಲೆಕ್ಕಾಚಾರ ಹಾಕುತ್ತಾರೆ. ಉದಾಹರಣೆಗೆ ಆಟೋ-ಟ್ಯಾಕ್ಸಿ ಓಡಿಸುವವರನ್ನು ನೋಡಿ ಅವರನ್ನು ಕೂಡ ನೋಡಿ ಕೆಲವರು ಅವರನ್ನು ಕೆಟ್ಟವರು ಎಂಬುದಾಗಿ ಭಾವಿಸುತ್ತಾರೆ. ಆದರೆ ಹಲವಾರು ಬಾರಿ ಅವರೇ ಸಹಾಯಕ್ಕೆ ಬಂದಿರುವ ಉದಾಹರಣೆ ಕೂಡ ಇದೆ.

ಹೌದು ನಾವು ನಿಜವಾಗಿ ನಡೆದಿರುವಂತಹ ಒಂದು ಘಟನೆಯನ್ನು ನಿಮ್ಮ ಎದುರು ಹೇಳಲು ಹೊರಟಿದ್ದೇವೆ. ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ನಾವು ಹೇಳಲು ಹೊರಟಿರುವ ವಿಷಯದಲ್ಲಿ ಪ್ರಮುಖ ಕೇಂದ್ರ ಬಿಂದು ಆಗಿರುವುದು ಇದೇ ಟ್ಯಾಕ್ಸಿ ಡ್ರೈವರ್. ಟ್ಯಾಕ್ಸಿ ಡ್ರೈವರ್ ಹೆಸರು ರಾಜ್ ವೀರ್ ಎನ್ನುವುದಾಗಿ. ಈತ ದೆಹಲಿಯಲ್ಲಿ ತನ್ನ ಕೆಲಸಕ್ಕಾಗಿ ಹೋಗುತ್ತಿರಬೇಕಾದರೆ ಮಾರ್ಗಮಧ್ಯದಲ್ಲಿ ಒಬ್ಬ ಹುಡುಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅಲ್ಲಿ ನೆರೆದಿದ್ದಂತಹ ಜನರು ಯಾರೂ ಕೂಡ ಅವಳಿಗೆ ಸಹಾಯ ಮಾಡುವುದಾಗಲಿ ಅಥವಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ಕೂಡ ಮಾಡಲಿಲ್ಲ. ನಂತರ ಆತನೇ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸುತ್ತಾನೆ.

ಚಿಕಿತ್ಸೆಗೆ ಇನ್ನಷ್ಟು ದುಡ್ಡು ಬೇಕಾದಾಗ ತನ್ನ ಗಾಡಿಯನ್ನು ಮಾರಿ ಬಿಡುತ್ತಾನೆ. ನಂತರ ಅವಳ ಚಿಕಿತ್ಸೆ ಪೂರ್ಣಗೊಂಡನಂತರ ಟ್ಯಾಕ್ಸಿ ಡ್ರೈವರ್ ಆಗಿರುವ ರಾಜ್ ವೀರ್ ಅವಳನ್ನು ಸುರಕ್ಷಿತವಾಗಿ ಮನೆಗೆ ಕರೆತಂದು ಬಿಡುತ್ತಾನೆ. ನಂತರ ತನ್ನ ಕೆಲಸ ನೋಡಿಕೊಂಡು ಹೊರಟು ಹೋಗುತ್ತಾನೆ. ಒಂದರ್ಥದಲ್ಲಿ ಹೇಳುವುದಾದರೆ ಟ್ಯಾಕ್ಸಿ ಡ್ರೈವರ್ ನಿಂದಾಗಿ ಆಕೆಗೆ ಪುನರ್ಜನ್ಮ ಸಿಕ್ಕಂತಾಗಿದೆ. ಸಿಕ್ಕ ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎನ್ನುವ ಛಲವನ್ನು ಹೊತ್ತ ಆಕೆ ಚೆನ್ನಾಗಿ ಓದಿ ಒಳ್ಳೆಯ ಸಂಭಾವನೆ ಇರುವಂತಹ ಕೆಲಸವನ್ನು ಕೂಡ ಪಡೆಯುತ್ತಾಳೆ. ನಂತರ ತನ್ನನ್ನು ಉಳಿಸಿ ದಂತಹ ಟ್ಯಾಕ್ಸಿ ಡ್ರೈವರ್ ಗಾಗಿ ಹುಡುಕಾಟ ನಡೆಸುತ್ತಾಳೆ.

ಸಾಕಷ್ಟು ಹುಡುಕಾಟದ ನಂತರ ಅವಳಿಗೆ ಟ್ಯಾಕ್ಸಿ ಡ್ರೈವರ್ ಸಿಗುತ್ತಾನೆ. ನೀವು ನನ್ನ ಪ್ರಾಣ ಉಳಿಸಿದ್ದೀರಿ ಇಂದು ನಾನು ಚೆನ್ನಾಗಿ ಓದಿ ಉತ್ತಮ ಕೆಲಸದಲ್ಲಿದ್ದು ಒಳ್ಳೆಯ ಜೀವನವನ್ನು ನಡೆಸುತ್ತಿದ್ದೇನೆ ಇದಕ್ಕೆಲ್ಲ ನೀವು ಅಂದು ನನ್ನನ್ನು ಪ್ರಾಣ ಉಳಿಸಿದ ಕಾರಣ ನಿಮಗೆ ಕೃತಜ್ಞತೆಗಳು ಎಂದು ಹೇಳಿ ಹಣವನ್ನು ನೀಡುತ್ತಾಳೆ. ಇದರಲ್ಲಿ ಎರಡು ವಿಚಾರವನ್ನು ನಾವು ಮೆಚ್ಚಿ ಕೊಳ್ಳಬಹುದಾಗಿದೆ. ಮೊದಲನೇದಾಗಿ ಯಾರೋ ತನಗೆ ಸಂಬಂಧ ಇಲ್ಲದವರನ್ನು ಕೂಡ ಗಾಡಿ ಅಡವಿಟ್ಟು ಕಾಪಾಡಿಕೊಳ್ಳುವ ಅಷ್ಟರಮಟ್ಟಿಗೆ ಸಹಾಯ ಮಾಡಿರುವ ಟ್ಯಾಕ್ಸಿ ಡ್ರೈವರ್ ಗುಣವನ್ನು ನಾವು ಮೆಚ್ಚಲೇಬೇಕು.

ಇದಾದ ನಂತರ ಸಹಾಯಮಾಡಿ ಅದೆಷ್ಟೋ ವರ್ಷಗಳ ನಂತರವೂ ಕೂಡ ನೆನಪಿಟ್ಟುಕೊಂಡು ಮತ್ತೆ ಕೃತಜ್ಞತೆಯನ್ನು ಸಲ್ಲಿಸಿರುವ ಆ ಹೆಣ್ಣುಮಗಳ ಕೃತಜ್ಞತಾಭಾವಕ್ಕೂ ಕೂಡ ನಮ್ಮ ಮೆಚ್ಚುಗೆ ಸಲ್ಲಬೇಕು. ಈ ಸಮಾಜದಲ್ಲಿ ಸಹಾಯ ಮಾಡುವುದರ ಕುರಿತಂತೆ ಭಾಷಣಗಳನ್ನು ಬಿಗಿಯುತ್ತಾರೆ ಆದರೆ ಸಹಾಯ ಮಾಡುವವರು ಯಾರು ಕೂಡ ಇರುವುದಿಲ್ಲ. ಎಲ್ಲರೂ ತಮ್ಮ ಲಾಭಕ್ಕಾಗಿ ಸ್ವಾರ್ಥಕ್ಕಾಗಿ ಜೀವಿಸುತ್ತಿರುತ್ತಾರೆ. ನಿಮ್ಮ ಕೈಲಾದಷ್ಟು ಪರರಿಗೆ ಸಹಾಯ ಬೇಕಿದ್ದವರು ಸಹಾಯವನ್ನು ಮಾಡುವುದನ್ನು ಕಲಿಯಿರಿ.

ಖಂಡಿತವಾಗಿ ಈ ಪ್ರಪಂಚ ಎನ್ನುವುದು ಎಲ್ಲರೂ ಬದುಕಲು ಸುಗಮ ವಾದಂತಹ ಪರಿಸರವನ್ನು ನಿರ್ಮಾಣ ಮಾಡಿದಂತಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಆ ಹುಡುಗಿ ಮುಂದುವರೆದು ನೀನು ನನ್ನ ಪ್ರಾಣ ಉಳಿಸಿದ್ದೀಯ ಮದುವೆ ಆಗೋಣ ಎನ್ನುವುದಾಗಿ ಹೇಳುತ್ತಾಳೆ. ಅದಕ್ಕೆ ಟ್ಯಾಕ್ಸಿ ಚಾಲಕ ನೀವು ಇಷ್ಟೊಂದು ಶ್ರೀಮಂತರು ನನ್ನನ್ನು ಹೇಗೆ ಮದುವೆ ಆಗಲು ಸಾಧ್ಯ ಎಂಬುದಾಗಿ ಹೇಳುತ್ತಾನೆ. ಆಗ ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಲ್ಲದಕ್ಕಿಂತ ಹೆಚ್ಚಾಗಿ ಈ ನನ್ನ ಜೀವನಕ್ಕೆ ನೀವೇ ಕಾರಣ ನೀವು ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂಬುದಾಗಿ ಹೇಳಿ ಮದುವೆಯಾಗುವುದಾಗಿ ಭರವಸೆ ನೀಡಿದ್ದಾಳೆ.

Comments are closed.