Neer Dose Karnataka
Take a fresh look at your lifestyle.

ಕೇವಲ 15 ನಿಮಿಷಗಳಲ್ಲಿ ಹೋಳಿಗೆ ಮಾಡುವ ಸೀಕ್ರೆಟ್ ವಿಧಾನದ ಬಗ್ಗೆ ಗೊತ್ತೇ?? ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕನಕವನ್ನು ಜಾಸ್ತಿ ಹೊತ್ತು ನೆನೆಸದೆ 10 – 15 ನಿಮಿಷಗಳಲ್ಲಿ ಹೋಳಿಗೆ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನಿಮ್ಮ ಅನುಕೂಲತೆಗಾಗಿ ವಿಡಿಯೋ ಕೂಡ ಹಾಕಲಾಗಿದ್ದು, ಒಮ್ಮೆ ನೋಡಿ ಟ್ರೈ ಮಾಡಿ ಹೇಳಿ. ಮೊದಲಿಗೆ ಹೋಳಿಗೆ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಕಡ್ಲೆಬೇಳೆ, 1 ಬಟ್ಟಲು ಬೆಲ್ಲ, ಅರ್ಧ ಬಟ್ಟಲು ತೆಂಗಿನಕಾಯಿ ತುರಿ, ಸ್ವಲ್ಪ ಏಲಕ್ಕಿ ಪುಡಿ, 1 ಬಟ್ಟಲು ಮೈದಾ ಹಿಟ್ಟು, ಕಾಲು ಬಟ್ಟಲು ಚಿರೋಟಿ ರವೆ, ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ, ಸ್ವಲ್ಪ ತುಪ್ಪ.

ಹೋಳಿಗೆ ಮಾಡುವ ವಿಧಾನ: ಒಂದು ದೊಡ್ಡ ಬಟ್ಟಲಿಗೆ ಮೈದಾಹಿಟ್ಟು, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಉಪ್ಪು, ಚಿರೋಟಿ ರವೆಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಕೊಳ್ಳುತ್ತಾ ಮೃದುವಾಗಿ ಹಿಟ್ಟನ್ನು ಕಲಸಿಕೊಳ್ಳಿ. ನಂತರ ಇದಕ್ಕೆ ಎಣ್ಣೆಯನ್ನು ಹಾಕಿಕೊಂಡು ಚೆನ್ನಾಗಿ ನಾದಿಕೊಳ್ಳಿ. ನಂತರ ಹಿಟ್ಟಿನ ಮೇಲೆ 2 – 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕನಕವನ್ನು ಹಾಗೆಯೇ ಬಿಡಿ.

ಮತ್ತೊಂದು ಕಡೆ 1 ಬಟ್ಟಲು ಕಡಲೆಬೇಳೆಯನ್ನು ನೀರಿನಿಂದ 2 – 3 ಬಾರಿ ಚೆನ್ನಾಗಿ ತೊಳೆದು ಒಂದು ಕುಕ್ಕರಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ 2 ಬಟ್ಟಲು ನೀರನ್ನು ಹಾಕಿ ಮುಚ್ಚಳವನ್ನು ಮುಚ್ಚಿ 3 – 4 ವಿಷಲ್ ಹಾಕಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ಬೇಯಿಸಿದ ಕಡಲೆಬೇಳೆ, ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ ಹಾಗೂ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಬೆಲ್ಲ ಕರಗುವವರೆಗೂ ಬೇಯಿಸಿಕೊಂಡು ತಣ್ಣಗಾಗಲು ಬಿಡಿ.

ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಹೂರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.ನಂತರ ಕನಕವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಕನಕವನ್ನು ಕೈ ನಲ್ಲಿ ಇಟ್ಟುಕೊಂಡು ವೃತ್ತಾಕಾರವಾಗಿ ಕೈಯಲ್ಲಿ ಒತ್ತಿಕೊಳ್ಳಿ. ನಂತರ ಅದರ ಮಧ್ಯಕ್ಕೆ ಹೂರಣವನ್ನಿಟ್ಟು ಕನಕದಿಂದ ಮುಚ್ಚಿಕೊಳ್ಳಿ. ನಂತರ ಉಂಡೆಯನ್ನು ಚಪಾತಿ ಮಣೆಯ ಮೇಲೆ ಅಥವಾ ಬಂಡೆಯ ಮೇಲೆ ಇಟ್ಟು ಕೈಯಿಂದ ವೃತ್ತಾಕಾರವಾಗಿ ಒತ್ತಿಕೊಳ್ಳಿ. ನಂತರ ಗ್ಯಾಸ್ ಮೇಲೆ ತವಾವನ್ನು ಇಟ್ಟು ತುಪ್ಪವನ್ನು ಸವರಿ ಕಾಯಲು ಬಿಡಿ. ತವಾ ಕಾದ ನಂತರ ಹೋಳಿಗೆಯನ್ನು ಹಾಕಿ ಎರಡು ಬದಿಯಲ್ಲಿ ತುಪ್ಪವನ್ನು ಸವರಿ ಬೇಯಿಸಿಕೊಂಡರೆ ದಿಡೀರ್ ಹೋಳಿಗೆ ಸವಿಯಲು ಸಿದ್ದ.

Comments are closed.