ಸಾಮಾನ್ಯ ದೋಸೆ ತಿಂದು ಬೋರ್ ಆಯ್ತಾ?? ಬಹಳ ಸುಲಭವಾಗಿ ಆಲೂಗೆಡ್ಡೆ ದೋಸೆ ಮಾಡುವುದು ಹೇಗೆ ಗೊತ್ತೇ?? ಎಲ್ಲರೂ ಜಾಸ್ತಿನೇ ತಿಂತಾರೆ.
ನಮಸ್ಕಾರ ಸ್ನೇಹಿತರೇ ದೋಸೆಗಳಲ್ಲಿ ತರಾವರಿ ವಿಧಗಳು. ಅವುಗಳಲ್ಲಿ ಕೆಲವು ದಿನವೂ ಮಾಡೋವಂಥದ್ದು. ಈ ಸಂಡೆಗೆ ಇದೊಂದು ಸ್ಪೇಷಲ್ ದೋಸೆ ಆಲೂ ದೋಸೆ ಟ್ರೈ ಮಾಡಿ ನೋಡಿ. ಆಲೂ ಎಲ್ಲರಿಗೂ ಇಷ್ಟ. ಈ ದೋಸೆಯೂ ಎಲ್ಲರಿಗೂ ಇಷ್ಟವಾಗೋದು ಗ್ಯಾರಂಟಿ. ಆಲೂದೋಸೆ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು: 3 ಬೇಯಿಸಿದ ಆಲೂಗಡ್ಡೆ, 1½ ಕಪ್ ಅಕ್ಕಿ ಹಿಟ್ಟು, ¼ ಕಪ್ ರವಾ, 1 ಟೀಸ್ಪೂನ್ ಉಪ್ಪು, ನೀರು, 1 ಈರುಳ್ಳಿ (ಸಣ್ಣಗೆ ಕತ್ತರಿಸಿಕೊಳ್ಳಿ), ಕೊತ್ತಂಬರಿ ಸೊಪ್ಪು ಸ್ವಲ್ಪ, 2 ಮೆಣಸಿನಕಾಯಿ, ಕರಿ ಬೇವಿನ ಎಲೆಗಳು , ಜೀರಿಗೆ ಒಂದು ಚಮಚ, ಎಣ್ಣೆ.
ಮಾಡುವ ವಿಧಾನ: ಮೊದಲಿಗೆ, ಮಿಕ್ಸಿ ಜಾರ್ ನಲ್ಲಿ 3 ಬೇಯಿಸಿದ ಆಲೂಗಡ್ಡೆಯನ್ನು ಕತ್ತರಿಸಿ ಅದಕ್ಕೆ 1 ಕಪ್ ನೀರು ಸೇರಿಸಿ ಮೆದುವಾದ ಪೇಸ್ಟ್ ನಂತೆ ರುಬ್ಬಿಕೊಳ್ಳಿ. ಇದನ್ನು ದೊಡ್ಡ ಬೌಲ್ ಗೆ ವರ್ಗಾಯಿಸಿ. ಈಗ 1½ ಕಪ್ ಅಕ್ಕಿ ಹಿಟ್ಟು, ¼ ಕಪ್ ರವಾ ಮತ್ತು 1 ಟೀಸ್ಪೂನ್ ಇದಕ್ಕೆ ಉಪ್ಪು ಸೇರಿಸಿ. ನಂತರ 5 ಕಪ್ ನೀರು ಸೇರಿಸಿ. ವಿಸ್ಕರ್ ಅಥವಾ ಸೌಟ್ ನ ಸಹಾಯದಿಂದ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಉಂಡೆಗಳು ಇಲ್ಲದೆ ದೋಸೆ ಹಿಟ್ಟಿನ ಸ್ಥಿರತೆಗೆ ಮಾಡಿಕೊಳ್ಳಿ.
ನಂತರ 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹೆಚ್ಚಿದ 2 ಮೆಣಸಿನಕಾಯಿ, ಕತ್ತರಿಸಿದ ಕರಿ ಬೇವಿನ ಎಲೆಗಳು ಮತ್ತು 1 ಚಮಚ ಜೀರಿಗೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. 10 ನಿಮಿಷಗಳ ಬಳಿಕ, ಹಿಟ್ಟಿನ ಹದವನ್ನು ನೋಡಿ, ಅಗತ್ಯವಿದ್ದರೆ ನೀರು ಸೇರಿಸಿ. ಈಗ ಗ್ಯಾಸ್ ಸ್ಟೋವ್ ಮೇಲೆ ಪ್ಯಾನ್ ಇಟ್ಟು ಬಿಸಿಯಾದಾಗ ಹಿಟ್ಟನ್ನು ಹುಯ್ಯಿರಿ. ದೋಸೆಗೆ ಹುಯ್ದ ಬಳಿಕ ಎಣ್ಣೆಯನ್ನು ದೋಸೆಯ ಸುತ್ತಲೂ ಹರಡಿ. ದೋಸೆ ಗರಿಗರಿಯಾಗಿ ಬಂದ ಮೇಲೆ ತೆಗೆದು ಪ್ಲೇಟ್ ಗೆ ಹಾಕಿ ನಿಮಗಿಷ್ಟವಾದ ಚಟ್ನಿ ಜೊತೆ ಸವಿಯಿರಿ. ಈ ರೆಸಿಪಿಯನ್ನು ಈ ವಿಡಿಯೋದಲ್ಲಿಯೂ ನೋಡಬಹುದು.
Comments are closed.