ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ನಿನ್ನೆ ಪರಿಚಯಿಸಿದ 1 ರೂ. ಪ್ಲಾನ್ನಲ್ಲಿ ಇಂದು ದೊಡ್ಡ ಬದಲಾವಣೆ. ಇದರಿಂದ ನಿಮಗೇನು ಲಾಭ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತದ ಬಹುತೇಕ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕೂಡ ತಮ್ಮ ಸೇವೆಯನ್ನು ಹೆಚ್ಚಿಸಿದ್ದವು. ಜಿಯೋ ಏರ್ಟೆಲ್ ವೊಡಾಫೋನ್ ಹೀಗೆ ಎಲ್ಲಾ ಸಂಸ್ಥೆಗಳು ಕೂಡ ಬೆಲೆಯನ್ನು ಹೆಚ್ಚಿಸಿ ಗ್ರಾಹಕರಿಗೆ ತಲೆಬಿಸಿಯನ್ನು ತಂದಿದ್ದವು. ಇನ್ನು ನಿಮಗೆಲ್ಲ ತಿಳಿದಿರುವಂತೆ ಜಿಯೋ ಸಂಸ್ಥೆ ಕಡಿಮೆ ದರದಲ್ಲಿ ಉತ್ತಮ ಸೇವೆಗಳನ್ನು ನೀಡುವಂತಹ ಸಂಸ್ಥೆಯಾಗಿದ್ದು ಈ ಕಾರಣಕ್ಕಾಗಿ ಅದು ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿತ್ತು.
ಆದರೆ ಈಗ ಜಿಯೋ ಸಂಸ್ಥೆ ಕೂಡ ತನ್ನ ಸೇವೆಗಳ ದರವನ್ನು ಹೆಚ್ಚು ಮಾಡಿದ್ದು ಗ್ರಾಹಕರಿಗೆ ತಲೆಬಿಸಿ ವಿಚಾರವಾಗಿತ್ತು. ಈ ಕಾರಣಕ್ಕಾಗಿಯೇ ಜಿಯೋ ಸಂಸ್ಥೆ ಸೇವೆ ಅತ್ಯಂತ ಅಗ್ಗದ ಸೇವೆಯ ದರವನ್ನು ಪರಿಚಯಿಸಿತ್ತು. ಒಂದು ರೂಪಾಯಿ ಸೇವೆಯ ದರದ ಪ್ರಕಾರ ದಿನೇಶ್ 100mb ಡೇಟಾ ಹಾಗೂ 30 ದಿನಗಳವರೆಗೆ ವ್ಯಾಲಿಡಿಟಿ ನೀಡಲಿದೆ ಎಂಬುದಾಗಿ ಘೋಷಿಸಿತ್ತು. ಆದರೆ ಈಗ ಈ ಸೇವೆಯನ್ನು ಬದಲಾವಣೆ ಮಾಡಿ ಮತ್ತೊಮ್ಮೆ ಗ್ರಾಹಕರಿಗೆ ಶಾಕ್ ನೀಡಿದೆ. ಹಾಗಾದರೆ ಬದಲಾವಣೆ ಮಾಡಿರುವ ಸೇವೆಯ ದಡದಲ್ಲಿರುವ ಸೇವೆಗಳೇನು ಎಂಬುದರ ಕುರಿತಂತೆ ನಾವು ನಿಮಗೆ ಹೇಳಲು ಹೊರಟಿದ್ದೇವೆ.
ಹೌದು ಗೆಳೆಯರೇ ಜಿಯೋ ಸಂಸ್ಥೆ ಇದೆ ಕೂಡಲೇ ಒಂದು ರೂಪಾಯಿ ಸೇವೆಯನ್ನು ಬದಲಾಯಿಸಿದ್ದು, ಈಗ ಇದಕ್ಕೆ 1ರೂಪಾಯಿಗೆ ಕೇವಲ ಒಂದೇ ದಿನದ ವ್ಯಾಲಿಡಿಟಿ ಅನ್ನು ನೀಡಿದ್ದು ಕೇವಲ 10mb ಡೇಟಾವನ್ನು ನೀಡುತ್ತಿದೆ. ಮತ್ತು ಯಾವುದೇ ಟಾಕ್ ಟೈಮ್ ಅಥವಾ ಮೆಸೇಜ್ ಸೇವೆಗಳು ಇದರಲ್ಲಿ ಉಪಲಬ್ದ ವಿರುವುದಿಲ್ಲ ಎಂಬುದಾಗಿ ಕೂಡ ಹೇಳಿದೆ. ಇದು ಈಗ ಮತ್ತೊಮ್ಮೆ ಕಡಿಮೆ ಸಂಬಳವನ್ನು ಪಡೆಯುತ್ತಿರುವ ಕೆಳವರ್ಗದ ಗ್ರಾಹಕರಿಗೆ ತಲೆನೋವು ತಂದಿದೆ. ಇದಾದನಂತರ 119 ರೂಪಾಯಿ ಪ್ಲಾನ್ ಕೂಡ ಪರಿಚಯಿಸಿದೆ. ಇದರಲ್ಲಿ ದಿನಕ್ಕೆ 1.5 ಜಿಬಿ ಡೇಟಾ ಕೂಡ ಸಿಗಲಿದೆ. 14 ದಿನಗಳ ಅನ್ಲಿಮಿಟೆಡ್ ಟಾಕ್ ಟೈಮ್ ವ್ಯಾಲಿಡಿಟಿ ಜೊತೆಗೆ 300 ಮೆಸೇಜ್ ಗಳನ್ನು ಕೂಡ ಮಾಡಬಹುದಾಗಿದೆ. ಇವುಗಳ ಕುರಿತಂತೆ ತಪ್ಪದೆ ತಿಳಿದುಕೊಳ್ಳಿ ಹಾಗೂ ಮುಂದಿನ ದಿನಗಳಲ್ಲಿ ನಿಮಗೂ ಕೂಡ ಇದು ಉಪಯೋಗಕ್ಕೆ ಬರಬಹುದಾಗಿದೆ.
Comments are closed.