500 ರೂಪಾಯಿ ಹಣ ತೆಗೆಯಲು ಹೋದ ಬ್ಯಾಂಕ್ ಮಹಿಳೆ ಅವಮಾನ ಮಾಡಿದಕ್ಕೆ ಅಜ್ಜಿ ಮಾಡಿದ ಕೆಲಸಕ್ಕೆ ಶಾಕ್ ಆದ ಬ್ಯಾಂಕ್ ಸಿಬ್ಬಂದಿ. ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ವೇಷಭೂಷಣ ನೋಡಿಕೊಂಡು ಯಾರನ್ನೂ ಕೂಡ ಅಳೆಯಬಾರದು ಎಂಬುದಾಗಿ ಹಿರಿಯರು ಹಲವಾರು ಬಾರಿ ಬುದ್ದಿಮಾತುಗಳು ಹೇಳಿರಬಹುದು. ಆದರೆ ಇಂದು ನಾವು ಹೇಳಹೊರಟಿರುವ ನೈಜ ಘಟನೆ ಕೇಳಿದರೆ ಕಂಡಿತವಾಗಿಯೂ ಇದು ನಿಮಗೆ ಅರ್ಥವಾಗಬಹುದು. ಒಮ್ಮೆ ಸಾವಿತ್ರಮ್ಮ ಎನ್ನುವ ವೃದ್ಧ ಮಹಿಳೆಯೊಬ್ಬರು ಬ್ಯಾಂಕಿಗೆ 500 ರೂಪಾಯಿ ಹಣ ತೆಗೆಯಲು ಹೋಗಿದ್ದರು. ಅವರು 500 ರೂಪಾಯಿ ಚೆಕ್ ಬರೆದು ಕ್ಯಾಶಿಯರ್ ಮಹಿಳೆಯ ಬಳಿ ನನಗೆ 500 ರೂಪಾಯಿ ತೆಗೆದು ಕೊಡಿ ಎಂಬುದಾಗಿ ಹೇಳುತ್ತಾರೆ.
ಆಗ ಆ ಕ್ಯಾಶಿಯರ್ ಮಹಿಳೆ ನಮ್ಮ ಬ್ಯಾಂಕಿನಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಹಣವನ್ನು ತೆಗೆಯುವುದಾದರೆ ಮಾತ್ರ ಚೆಕ್ ತೆಗೆದುಕೊಳ್ಳುತ್ತೇವೆ ಇಲ್ಲವಾದರೆ ಹೊರಗಡೆ ಇರುವ ಎಟಿಎಂ ನಲ್ಲಿ ಹಣವನ್ನು ತೆಗೆದುಕೊಳ್ಳಿ ಎಂಬುದಾಗಿ ಹೇಳುತ್ತಾರೆ. ಆಗ ಸಾವಿತ್ರಮ್ಮ ಎಟಿಎಂನಲ್ಲಿ ನನಗೆ ಹಣ ತೆಗೆಯಲು ಬರುವುದಿಲ್ಲ ಎಂಬುದಾಗಿ ಯಾಕೆ ನೀವು ನಮ್ಮ ಟೈಮ್ ವೇಸ್ಟ್ ಮಾಡುತ್ತೀರಾ ಎಂಬುದಾಗಿ ಸಾಲಿನಲ್ಲಿ ನಿಂತಿದ್ದ ಜನರ ಮುಂದೆ ಗದರುತ್ತಾರೆ. ಆಗ ಸಾವಿತ್ರಮ್ಮ ಅವಳಿಗೆ ಬುದ್ಧಿ ಕಲಿಸಬೇಕು ಎಂಬುದಾಗಿ ಚೆಕ್ ಮೇಲೆ ತಮ್ಮ ಅಕೌಂಟ್ ನಲ್ಲಿ ಇರುವ ಎಲ್ಲಾ ಹಣವನ್ನು ತೆಗೆದುಕೊಡಿ ಎಂಬುದಾಗಿ ಕ್ಯಾಶಿಯರ್ ಮಹಿಳೆ ಬಳಿ ಹೇಳುತ್ತಾರೆ. ಆಗ ಸಾವಿತ್ರಮ್ಮನವರ ಅಕೌಂಟ್ ನಲ್ಲಿ ಇರುವ ಹಣವನ್ನು ನೋಡಿ ಬ್ಯಾಂಕ್ ಕ್ಯಾಶಿಯರ್ ಮಹಿಳೆಗೆ ಆಶ್ಚರ್ಯವಾಗುತ್ತದೆ.
ಹೌದು ಸಾವಿತ್ರಮ್ಮನವರ ಅಕೌಂಟ್ ನಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಹಣ ಇರುತ್ತದೆ. ಆಗ ನನ್ನಿಂದ ತಪ್ಪಾಯ್ತು ನಿಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬುದಾಗಿ ಕ್ಯಾಶಿಯರ್ ಮಹಿಳೆ ಕ್ಷಮೆ ಕೇಳುತ್ತಾಳೆ. ಇಷ್ಟು ಮಾತ್ರವಲ್ಲದೆ ಇಷ್ಟೊಂದು ಹಣ ನಮ್ಮಲ್ಲಿ ಇಲ್ಲ ನೀವು ನಾಳೆ ಬಂದರೆ ನಿಮಗೆ ಹಣವನ್ನು ಹೊಂದಿಸುತ್ತೇವೆ ಎಂಬುದಾಗಿ ಹೇಳುತ್ತಾರೆ. ನನಗೆ ಎಷ್ಟು ಹಣ ಕೊಡಬಹುದು ಎಂಬುದನ್ನು ನೋಡಿ ಅಷ್ಟು ಕೊಡಿ ಎನ್ನುವುದಾಗಿ ಸಾವಿತ್ರಮ್ಮ ಹೇಳುತ್ತಾರೆ. ಆಗ ಬ್ಯಾಂಕಿನವರು 5 ಲಕ್ಷ ರೂಪಾಯಿ ಹಣವನ್ನು ನೀಡುತ್ತಾರೆ. ಆಗ ಸಾವಿತ್ರಮ್ಮ ತನಗೆ ಬೇಕಾಗಿರುವ 500 ರೂಪಾಯಿ ನೋಟನ್ನು ಪರ್ಸ್ ನಲ್ಲಿ ಇಟ್ಟುಕೊಂಡು ಉಳಿದದ್ದನ್ನು ನನ್ನ ಖಾತೆಗೆ ಜಮಾ ಮಾಡಿ ಎಂಬುದಾಗಿ ಹೇಳುತ್ತಾರೆ. ತನ್ನ ಎದುರು ಒಣಜಂಭ ವನ್ನು ತೋರಿಸಿದ ಮಹಿಳಾ ಕ್ಯಾಶಿಯರ್ ಗೆ ಸಾವಿತ್ರಮ್ಮ ಬುದ್ಧಿ ಕಲಿಸಿದ ರೀತಿ ನೋಡಿ ಎಲ್ಲರೂ ಆಶ್ಚರ್ಯಪಡುತ್ತಾರೆ. ನಿಯಮಗಳು ಇರಬಹುದು ಆದರೆ ಒಬ್ಬರಿಗೆ ಅಗತ್ಯ ಇದೆ ಎಂದರೆ ಅದು ತಪ್ಪಲ್ಲವಾದರೆ ಅದನ್ನು ಮೀರಿ ಸಹಾಯ ಮಾಡುವುದರಲ್ಲಿ ಏನೂ ತಪ್ಪಿಲ್ಲ ಎಂಬುದನ್ನು ಕಥೆಯ ಮೂಲಕ ತಿಳಿದುಕೊಳ್ಳಬಹುದು.
Comments are closed.