ಭಾರತದ ಟಾಪ್ ಬೌಲರ್, ಜಸ್ಪ್ರೀತ್ ಬುಮ್ರಾ ಅವರಿಗಿಂತ ಅವರ ಹೆಂಡತಿ ಸಂಜನಾ ಎಷ್ಟು ವರ್ಷ ದೊಡ್ಡವರು ಗೊತ್ತೆ? ವಯಸ್ಸಿನ ಅಂತರ ಎಷ್ಟು ಗೊತ್ತೇ?
ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟಿಗರು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳು ಮದುವೆಯಾಗುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಇತ್ತೀಚಿಗೆ ಸಾಲುಸಾಲಾಗಿ ಸೆಲೆಬ್ರೆಟಿಗಳ ಮದುವೆ ನಡೆಯುತ್ತಿರುವುದೇ ಈ ಮಾತಿಗೆ ಕಾರಣ ಎಂದು ಹೇಳಬಹುದಾಗಿದೆ. ಈಗ ನಾವು ಮಾತನಾಡಲು ಹೊರಟಿರುವುದು ಭಾರತೀಯ ಕ್ರಿಕೆಟ್ ತಂಡದ ನಂಬರ್ ವನ್ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ರವರ ಕುರಿತಂತೆ.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಾ ಪ್ರವರ್ಧಮಾನಕ್ಕೆ ಬಂದಂತಹ ತಮ್ಮ ಪ್ರತಿಭೆ ಹಾಗೂ ಬೌಲಿಂಗ್ ಶೈಲಿಯ ವಿಶೇಷತೆಯಿಂದ ಆಗಿ ನೇರವಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುತ್ತಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮೇಲೆ ಎಲ್ಲರ ಭರವಸೆಯಂತೆ ಜಸ್ಪ್ರೀತ್ ಬುಮ್ರಾ ರವರು ತಂಡದ ಅತ್ಯಂತ ಪ್ರಭಾವಿ ಬೌಲರ್ ಆಗಿ ತಮ್ಮನ್ನು ತಾವು ಸಾಬೀತುಪಡಿಸಿ ಕೊಳ್ಳುತ್ತಾರೆ. ಇನ್ನು ಯಶಸ್ವಿ ಬೌಲರ್ ಆದನಂತರ ಜಸ್ಪ್ರೀತ್ ಬುಮ್ರಾ ರವರ ಹೆಸರಿನ ಜೊತೆಗೆ ಹಲವಾರು ಚಿತ್ರರಂಗದ ನಟಿಯರ ಹೆಸರುಗಳು ತಳುಕು ಹಾಕಿಕೊಂಡಿತ್ತು. ಆದರೆ ತಾವು ಸಂಜನಾ ಗಣೇಶ್ ರವರನ್ನು ಮದುವೆ ಆಗುವವರೆಗೂ ಕೂಡ ಎಲ್ಲಿಯೂ ತಾವು ಯಾರನ್ನು ಮದುವೆಯಾಗುತ್ತೇನೆ ಎಂಬುದನ್ನು ಜಸ್ಪ್ರೀತ್ ಬುಮ್ರಾ ರವರು ಹೇಳಿಕೊಂಡಿರಲಿಲ್ಲ.
ಮಾಧ್ಯಮಗಳಿಗೂ ಕೂಡ ಜಸ್ಪ್ರೀತ್ ಬುಮ್ರಾ ರವರು ನಿರೂಪಕಿ ಆಗಿರುವ ಸಂಜನ ಗಣೇಶ್ ರವರನ್ನು ಮದುವೆ ಆದಮೇಲೆ ತಿಳಿದಿದ್ದು. ಇನ್ನು ಸಂಜನ ಗಣೇಶ ರವರು ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ಗೆ ತಲುಪಿದ ಸಾಧನೆಯನ್ನು ಮಾಡಿದ್ದಾರೆ. ಫೆಮಿನಾ ಮಿಸ್ ಗಾರ್ಜಿಯಸ್ ಸ್ಪರ್ಧೆಯನ್ನು ಗೆದ್ದಿರುವ ಸಾಧನೆಯನ್ನು ಕೂಡ ಮಾಡಿದ್ದಾರೆ. ಮೂಲತಹ ಇವರು ಮಹಾರಾಷ್ಟ್ರದ ಪುಣೆಯವರಾಗಿದ್ದಾರೆ. ಈಗ ನಾವು ಮಾತನಾಡಲು ಹೊರಟಿರುವುದು ಸಂಜನಾ ಗಣೇಶ್ ರವರ ವಯಸ್ಸು ಎಷ್ಟು ಎನ್ನುವುದರ ಕುರಿತಂತೆ. ನಿಮಗೆ ಆಶ್ಚರ್ಯವಾಗಬಹುದು ಗೆಳೆಯರೇ ಬುಮ್ರಾ ಅವರಿಗಿಂತ ಸಂಜನಾ ಗಣೇಶ್ ರವರ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರು. 1991 ರಲ್ಲಿ ಜನಿಸಿರುವ ಸಂಜನಾ ಗಣೇಶ್ ರವರಿಗೆ 29 ವರ್ಷ ವಯಸ್ಸು. ಜಸ್ಪ್ರೀತ್ ಬುಮ್ರಾ ಹುಡುಗರು 1993 ರಲ್ಲಿ ಜನಿಸಿದ್ದು ಇವರಿಗೆ 27 ವರ್ಷವಾಗಿದೆ. ವಯಸ್ಸಿನ ಯಾವುದೇ ಅಡ್ಡಿಗಳು ಇಲ್ಲದೆ ಇಬ್ಬರು ಕೂಡ ಸುಖವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ.
Comments are closed.