ನೂರಲ್ಲ ಇನ್ನೂರಲ್ಲ ಇದರ ಮೈಲೇಜ್ ಎಷ್ಟು ಗೊತ್ತೇ?? ಇದರ ಬೆಲೆ ಹಾಗೂ ವಿಶೇಷತೆಯೇನು ಗೊತ್ತೇ?? ನಿಮಗೆ ಬೇಕಾದ ಹಾಗೆ ಮಾಡಿ ಕೊಡುತ್ತಾರೆ ಆದರೂ ಬೆಲೆ ಕಡಿಮೆ
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡುಬರುತ್ತಿದೆ. ಅದರಲ್ಲೂ ಕೂಡ ಪೆಟ್ರೋಲ್ ಬೆಲೆ ಎನ್ನುವುದು ಗಗನದತ್ತ ಮುಖ ಮಾಡಿ ಏರುತ್ತಿದೆ. ಇತ್ತ ನೋಡಿದರೆ ಹಲವಾರು ಸಂಸ್ಥೆಗಳು ಹೊಸಹೊಸ ಎಲೆಕ್ಟ್ರಾನಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ಇವುಗಳಲ್ಲಿ ನಾವು ಇಂದು ಮಾತನಾಡಲು ಹೋಗುತ್ತಿರುವುದು ಹೀರೋ ಸಂಸ್ಥೆಯ ಹೊಸ ಎಲೆಕ್ಟ್ರಾನಿಕ್ ಸ್ಕೂಟರ್ ಕುರಿತಂತೆ. ಹೀರೋ ಸಂಸ್ಥೆ ಇತ್ತೀಚಿಗಷ್ಟೇ ಮಾರುಕಟ್ಟೆಗೆ NYX Hx ಹೆಸರಿನ ಸ್ಕೂಟರನ್ನು ಬಿಡುಗಡೆ ಮಾಡಿದೆ.
ಇದನ್ನು ಕಮರ್ಷಿಯಲ್ ಉಪಯೋಗಕ್ಕಾಗಿ ಕೂಡ ಡಿಸೈನ್ ಮಾಡಲಾಗಿದೆ. ಇದರಲ್ಲಿ ಐಸ್ ಬಾಕ್ಸ್ ಹಾಗೂ ಸ್ಪ್ಲಿಟ್ ಸೀಟ್ ಗಳನ್ನು ಕೂಡ ಇರಿಸಲಾಗಿದೆ. ಇನ್ನು ಇದನ್ನು ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತ ಕಸ್ಟಮೈಸ್ ಮಾಡಬಹುದಾಗಿದೆ. ಇನ್ನು ಸ್ಕೂಟರ್ನಲ್ಲಿ 600 / 1300 ವ್ಯಾಟ್ ನ ಮೋಟರ್ ಅಳವಡಿಕೆಯಾಗಿದೆ. 51.2W/30Ah ಲಿತಿಯಂ ಅಯಾನ್ ಬ್ಯಾಟರಿ ಕೂಡ ಇದರಲ್ಲಿದೆ. ಇನ್ನು ಸ್ಕೂಟರ್ನಲ್ಲಿ ಬ್ಲೂಟೂತ್ ಸ್ಮಾರ್ಟ್ಫೋನ್ ಸಂಪರ್ಕ ಸೇರಿದಂತೆ ಹಲವಾರು ವೈಶಿಷ್ಟಗಳು ಕೂಡ ಅಡಕವಾಗಿವೆ. ಇನ್ನು ನೀವು ಪ್ರತಿಬಾರಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಕೇಳಿದಾಗ ಅದರ ಕುರಿತಂತೆ ಒಂದು ಕೊರತೆಯನ್ನು ಕೇಳಿಯೇ ಕೇಳಿರುತ್ತೀರಿ. ಒಂದು ಬಾರಿ ಚಾರ್ಜ್ ಮಾಡಿದರೆ ಕೇವಲ ಕೆಲವು ಕಿಲೋಮೀಟರುಗಳಷ್ಟು ಮಾತ್ರ ಓಡಿಸಲು ಸಾಧ್ಯವಾಗುತ್ತದೆ ಎಂಬುದಾಗಿ. ಆದರೆ ಈ ಸ್ಕೂಟರ್ ಮಾತ್ರ ಅವೆಲ್ಲದಕ್ಕೆ ಹೊರತಾಗಿದೆ.
ಈ ಸ್ಕೂಟರ್ ಗೆ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಬರೋಬ್ಬರಿ 210 ಕಿಲೋಮೀಟರ್ ಗಳಷ್ಟು ಓಡುತ್ತದೆ ಎಂಬುದಾಗಿ ಹೀರೋ ಸಂಸ್ಥೆ ಹೇಳಿದೆ. ಖಂಡಿತವಾಗಿಯೂ ಇದು ಎಲೆಕ್ಟ್ರಾನಿಕ್ ಸ್ಕೂಟರ್ ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಕಮರ್ಷಿಯಲ್ ಕ್ಷೇತ್ರದಲ್ಲಿ ದ್ವಿಚಕ್ರವಾಹನಗಳನ್ನು ಬಳಕೆ ಮಾಡುವವರಿಗೆ ಇದು ಖಂಡಿತವಾಗಿಯೂ ಉಪಯೋಗಕಾರಿಯಾಗಿದೆ. ಇನ್ನೂ ಸ್ಕೂಟರನ್ನು ಹೀರೋ ಸಂಸ್ಥೆಯ ಮೂರು ವಿಭಾಗದಲ್ಲಿ ವಿಂಗಡನೆ ಮಾಡಿದೆ. ಇದನ್ನು ನೀವು ಮಾರುಕಟ್ಟೆಯಲ್ಲಿ 63,900 ರಿಂದ 79,900 ರೂ ವರೆಗಿನ ದರದಲ್ಲಿ ಖರೀದಿಸಬಹುದಾಗಿದೆ. ಕಡಿಮೆ ಬಜೆಟ್ ನಲ್ಲಿ ಪರಿಸರ ಸ್ನೇಹಿ ಆಗಿರುವ ಎಲೆಕ್ಟ್ರಾನಿಕ್ ಸ್ಕೂಟರನ್ನು ನೀವು ಖರೀದಿಸುವುದಕ್ಕೆ ಯಾವ ಯೋಚನೆ ಕೂಡ ಮಾಡಬೇಕಾದ ಅಗತ್ಯವಿಲ್ಲ.
Comments are closed.