ನೀವು ಮನೆಯಲ್ಲಿ ಖಾಲಿ ಕುಳಿತಾಗ ಕೆಲಸ ಮಾಡಿ ಫೇಸ್ ಬುಕ್ ನಿಂದ ಕೂಡ ಹಣ ಸಂಪಾದನೆ ಮಾಡಬಹುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇಂದು ಮೊಬೈಲ್ ಬಳಸದೇ ಇರುವ ಜನರೇ ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ, ಯಾವಾಗ ಎಷ್ಟು ಹೊತ್ತಿಗೆ ಎಲ್ಲಿ ನೋಡಿದರೂ ಕೈಯಲ್ಲಿ ಮೊಬೈಲ್ ಇರುತ್ತೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಂತೂ ಸಾಕಷ್ಟು ಜನ ಆಕ್ಟಿವ್ ಆಗಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ ಬುಕ್ ಕೂಡ ತುಂಬಾನೇ ಫೇಮಸ್ ಆಗಿದ್ದು ಹೆಚ್ಚು ಜನರನ್ನು ಆಕರ್ಷಿಸುತ್ತದೆ.
ಇನ್ನು ಫೇಸ್ ಬುಕ್ ನ್ನ ಪುಸ್ತಕದಂತೆ ನೋಡುವುದು ಮಾತ್ರವಲ್ಲ, ಅದರಿಂದ ಹಣವನ್ನೂ ಗಳಿಸಬಹುದು ಎನ್ನುವುದು ನಿಮಗೆ ಗೊತ್ತೇ? ಹೇಗೆ ಅಂತಿರಾ, ಬನ್ನಿ ಇಲ್ಲಿದೆ ಕೆಲವು ವಿಚಾರಗಳು. ಫೇಸ್‌ಬುಕ್ ಅಭಿಮಾನಿ ಪುಟದ ಕೆಲಸ ಮತ್ತು ಬಳಕೆಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ ಎಂದು ಪರಿಗಣಿಸಿ, ಅದರಿಂದ ನೀವು ಹೇಗೆ ಹಣ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಈ ಕೆಳಗಿನವುಗಳನ್ನು ಒಮ್ಮೆ ಓದಿಕೊಂಡು ನಿಮ್ಮ ಅನುಕೂಲ ಮತ್ತು ಪರಿಣತಿಗೆ ಅನುಗುಣವಾಗಿ ನೀವು ಆಯ್ಕೆ ಮಾಡಿಕೊಳ್ಳಬಹುದು.
ಫೇಸ್‌ಬುಕ್ ಲೈಕ್ ಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು. ಹೌದು, ಫೇಸ್ ಬುಕ್ ಅಭಿಮಾನಿ ಪುಟಗಳಿಗೆ ಗರಿಷ್ಟ ಲೈಕ್ಸ್ ಬರಬೇಕಾಗುತ್ತದೆ. ಹಾಗೆ ಬರಿಸುವುದಕ್ಕೆ ಅಷ್ಟೇ ಸಮಯವೂ ಬೇಕು. ಇಂಥ ಸಮಯದಲ್ಲಿ ಅವರು ಹಣ ಕೊಟ್ಟು ಲೈಕ್ ಗಳಿಸುತ್ತಾರೆ. ನೀವು ಆ ಪೇಜ್ ಗಳಿಗೆ ಲೈಕ್ಸ್ ತಂದುಕೊಡುವುದರ ಮೂಲಕ ಹಣ ಗಳಿಸಬಹುದು. ಪ್ರಾಯೋಜಿತ ಪೋಸ್ಟ್‌ಗಳನ್ನು ಪ್ರಕಟಿಸಿ ನಿಮ್ಮ ಸ್ನೇಹಿತರ ಗ್ರೂಪ್ ಗಳಲ್ಲಿ ಜಾಹೀರಾತುಗಳನ್ನು ಪೋಸ್ಟ್ ಮಾಡುವ ಮೂಲಕ ಹಣ ಗಳಿಸಬಹುದು.
ಇನ್ನು ‘ವರ್ಡ್‌ಪ್ರೆಸ್ ಟ್ಯುಟೋರಿಯಲ್ಸ್’ನಲ್ಲಿ ಅಭಿಮಾನಿ ಪುಟ ಹೊಂದಿದ್ದು, ಸಾಕಷ್ಟು ಫಾಲೋವರ್ಸ್ ಹೊಂದಿದ್ದರೆ, ವರ್ಡ್‌ಪ್ರೆಸ್ ಡೆವಲಪ್‌ಮೆಂಟ್’ ಸೇವೆಗಳನ್ನು ಮಾರಾಟ ಮಾಡುವ ಏಜೆನ್ಸಿಗಳು ನಿಮ್ಮ ಪುಟದಲ್ಲಿ ಅವರ ಜಾಹೀರಾತುಗಳನ್ನು ಪೋಸ್ಟ್ ಮಾಡಲು ನಿಮ್ಮನ್ನು ಕೇಳಬಹುದು ಇದರಿಂದಲೂ ಹಣ ಗಳಿಸಬಹುದು.
ಯಾವುದಾದರೂ ಸಂಸ್ಥೆಯ (ಅಮೇಜಾನ್, ಮೇಕ್ ಮೈ ಟ್ರೀಪ್ ಇತ್ಯಾದಿ) ಮಾರ್ಕೆಟಿಂಗ್ ಪ್ರೋಗ್ರಾಂಗಳಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಬಹುದು. ನಿಮ್ಮ ಪುಟಗಳಲ್ಲಿ ಉತ್ಪನ್ನ ಮತ್ತು ಸೇವೆಗಳ ಲಿಂಕ್ ಪೋಸ್ಟ್ ಮಾಡಿ ಮತ್ತು ಪ್ರತಿ ಮಾರಾಟಕ್ಕೂ ಕಮಿಷನ್ ಪಡೆಯಬಹುದು. ಇನ್ನು ನಿಮ್ಮ ಬುದ್ದಿವಂತಿಕೆ ಮಾರ್ಕೇಟಿಂಗ್ ಕಂಪನಿಗಳಿಗೆ ತಿಳಿದರೆ ಸಾಕು, ಮಾರುಕಟ್ಟೆಯಲ್ಲಿ ಉತ್ಪನ್ನಗಳು ಅಥವಾ ಸೇವೆಗಳ ಬ್ರ್ಯಾಂಡ್ ಬಹು ಬೇಗನೆ ನಿಮ್ಮಿಂದ ಜನಪ್ರಿಯವಾಗುವುದಕ್ಕೆ ಕಾಯುತ್ತಾರೆ. ಇದರಿಂದ ಹಣ ಸಿಗುತ್ತದೆ ಎಂಬುದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇನು ನಿಮ್ಮ ಭಿಮಾನಿ ಪುಟ ಅತೀಹೆಚ್ಚು ಲೈಕ್ಸ್, ಫಾಲೋವರ್ಸ್ ಹೊಂದಿದ್ದರೆ ಅದನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಹೀಗೆ ಇನ್ನೂ ಅನೇಕ ಮಾರ್ಗಗಳ ಮೂಲಕ ಫೇಸ್ ಬುಕ್ ನಿಮ್ಮ ರೆವೆನ್ಯೂ ಪ್ಲಾಟ್ ಫಾರ್ಮ್ ಕೂಡ ಆಗಬಹುದು.
Comments are closed.