ಹೆಚ್ಚು ಸಂಬಳದ ಉದ್ಯೋಗವನ್ನು ಹುಡುಕುತ್ತಿದ್ದೀರಾ. ಹಾಗಾದರೆ ರಾಜ್ಯ ವಿಮಾ ಕಂಪನಿ ಯಲ್ಲಿದೆ ಉದ್ಯೋಗವಕಾಶಗಳು. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನೀನು ಉತ್ತಮ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದು, ಬೆಂಗಳೂರು ಹಾಗೂ ತ್ರಿಶೂರ್ ನಲ್ಲಿ ಉದ್ಯೋಗ ಮಾಡಲು ಸಿದ್ಧರಿದ್ದರೆ ರಾಜ್ಯ ವಿಮಾ ಕಂಪನಿ ನಿಮಗೊಂದು ಸುವರ್ಣ ಅವಕಾಶವನ್ನು ಮಾಡಿಕೊಟ್ಟಿದೆ. ತನ್ನಲ್ಲಿ ಕಾಲೇ ಇರುವ ಹಲವು ಹುದ್ದೆಗಳನ್ನು ಭರ್ತಿಮಾಡಲು ಪ್ರಕ್ರಿಯೆ ಆರಂಭಿಸಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ.
ಹೌದು, ರಾಜ್ಯ ವಿಮಾ ನಿಗಮದಲ್ಲಿ ಸ್ಪೆಷಲಿಸ್ಟ್ ಗ್ರೇಡ್ -11 ಹುದ್ದೆಗಳು ಕಾಲ್ ಇದ್ದು ಇವುಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಈ ಸದವಕಾಶವನ್ನು ಬಳಸಿಕೊಳ್ಳಬಹುದು. ಒಟ್ಟು 24 ಸ್ಪೆಷಲ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಇನ್ನು ಕನಿಷ್ಠ ಐದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.
ಉದ್ಯೋಗಾಕಾಂಕ್ಷಿಗಳು ಆನ್ಲೈನ್ ಮತ್ತು ಆಫ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸುವುದು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಮಾರ್ಚ್ 7, 2022 ರಒಳಗೆ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸುವವರು ಮಾರ್ಚ್ 14, 2022 ರ ಒಳಗೆ ಅರ್ಜಿ ಸಲ್ಲಿಸಬೇಕು. Rs.500 ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಭರಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 78,800 ರೂಪಾಯಿ ವೇತನ ಸಿಗಲಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಈ ಕೆಳಗಿನ ವಿಳಾಸಕ್ಕೆ ಭರ್ತಿ ಮಾಡಿದ ಅರ್ಜಿ ಹಾಗೂ ಸ್ವವಿವರಗಳ ದಾಖಲೆಗಳನ್ನು ಕಳುಹಿಸಿಕೊಡಬೇಕು.
ವಿಳಾಸ: ಕೇರಳ: ಪ್ರಾದೇಶಿಕ ನಿರ್ದೇಶಕರು, ಇಎಸ್‌ಐ ಕಾರ್ಪೊರೇಷನ್, ಪಂಚದೀಪ್ ಭವನ, ಉತ್ತರ ಸ್ವರಾಜ್ ರೌಂಡ್, ತ್ರಿಶೂರ್-680020, ಕೇರಳ: ಇನ್ನು ಕರ್ನಾಟಕ: ಹೆಚ್ಚುವರಿ ಆಯುಕ್ತರು ಪ್ರಾದೇಶಿಕ ನಿರ್ದೇಶಕರು, ಇಎಸ್‌ಐ ಕಾರ್ಪೊರೇಷನ್, ಪಂಚದೀಪ್ ಭವನ, ನಂ.10, ಬಿನ್ನಿಫೀಲ್ಡ್ಸ್, ಬಿನ್ನಿಪೇಟ್, ಬೆಂಗಳೂರು-560023, ಕರ್ನಾಟಕ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಕ್ಕಾಗಿ http://esic.nic.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ.
Comments are closed.