ಇತರ ಕಂಪನಿಗಳಿಗೆ ಶಾಕ್ ನೀಡಿದ ಏರ್ಟೆಲ್, ಕಡಿಮೆ ಬೆಲೆಗೆ ಪ್ಲಾನ್ ಗಳ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿರುವ ಏರ್ಟೆಲ್. ಎಷ್ಟೆಲ್ಲಾ ಲಾಭ ಇದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ದೇಶದ ಹೆಸರಾಂತ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಏರ್ಟೆಲ್ ಈಗಾಗಲೇ 2999 ರೂ.ಗಳ ಯೋಜನೆಯನ್ನು ಪರಿಚಯಿಸಿತ್ತು. ಇದೀಗ ಈ ಯೋಜನೆಯನ್ನು ನವೀಕರಿಸಿ, ಇದರಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲಿದೆ. ಇದು ಬಳಕೆದಾರರಿಗೆ ಸಾಕಷ್ಟು ಉಪಯುಕ್ತ ಯೋಜನೆಯಾಗಲಿದೆ. ನವೀಕರಿಸಿದ್ದು, ಈ ಯೋಜನೆಯೊಂದಿಗೆ ಉಚಿತವಾಗಿ ಪ್ರಮುಖ ಓವರ್-ದಿ-ಟಾಪ್ (OTT) ಪ್ರಯೋಜನವನ್ನು ನೀಡಲು ಮುಂದಾಗಿದೆ. ಒಟಿಟಿ ಚಂದಾದಾರಿಕೆಯನ್ನು (ಒವರ್ ದಿ ಟಾಪ್) ಈಗ ಎಲ್ಲಾ ಟೆಲಿಕಾಂ ಕಂಪನಿಗಳೂ ತಮ್ಮ ಬಳಕೆದಾರರಿಗೆ ನೀಡುತ್ತವೆ.
ಅದಕ್ಕಾಗಿಯೇ ಬೇರೆ ಬೇರೆ ರೀತಿಯ ರೀಚಾರ್ಜ್ ಪ್ಲ್ಯಾನ್ ಗಳನ್ನು ಕೂಡ ಪರಿಚಯಿಸುತ್ತಿವೆ. 3359 ರೂ.ಗಳಿಗೆ ನೀಡುತ್ತಿದ್ದ ಲಾಭಗಳೆಲ್ಲವೂ ಈಗ 2999 ರೂ.ಗಳ ಯೋಜನೆಯಲ್ಲೂ ಕೂಡಲು ಮುಂದಾಗಿದೆ ಏರ್ಟೆಲ್. ಏರ್‌ಟೆಲ್ ನ 2999 ರೂ ಯೋಜನೆತ್ಯ್ ವಾರ್ಷಿಕ ಯೋಜನೆಯಾಗಿದ್ದು, ವರ್ಷದ 365 ದಿನಗಳು ಅನಿಯಮಿತ ಧ್ವನಿ ಕರೆ, 100 ಎಸ್ ಎಂ ಎಸ್ ಮತ್ತು ದಿನಕ್ಕೆ 2ಜಿಬಿ ಡೇಟಾವನ್ನು ನೀಡುತ್ತಿದೆ. ಜೊತೆಗೆ ಉಚಿತ ಡಿಸ್ನಿ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನೂ ನೀಡುತ್ತಿರುವುದು ವಿಶೇಷ.
ಇದು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನವಾಗಿದ್ದು, ಅಮೆಜಾನ್ ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿಯ ಒಂದು ತಿಂಗಳ ಉಚಿತ ಟ್ರಯಲ್ ವರ್ಷನ್, ವಿಂಕ್ ಮ್ಯೂಸಿಕ್, ಶಾ ಅಕಾಡೆಮಿ, ರೂ 100 ರ ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಒದಲಾದ ಪ್ರಯೋಜನಗಳನ್ನು ಒಳಗೊಂಡಿದೆ. ಏರ್‌ಟೆಲ್‌ನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡರಲ್ಲೂ ನಮಗೆ ಈ ಯೋಜನೆ ಬದಲವಣೆಯ ಬಗ್ಗೆ ಮಾಹಿತಿ ಸಿಗುತ್ತದೆ. ಎರ್ಟೆಲ್ ನ 3359 ರೂ. ಯೋಜನೆಯ ಲಾಭಗಳು ಈಗ 2999 ರೂ. ಯೋಜನೆಗಳ ಲಾಭ ಎರಡೂ ಒಂದೇ ರಿತಿಯಲ್ಲಿವೆ. ಅಂದಮೇಲೆ ಬಳಕೆದಾರರು ಹೆಚ್ಚಿನ ಹಣಕೊಟ್ಟು ಯಾಕೆ 3359ರೂ. ನ ಯೋಜನೆಯನ್ನು ಆಯ್ದುಕೊಳ್ಳುತ್ತಾರೆ ಎಂಬ ಪ್ರಶ್ನೆ ಏಳುವುದು ಸಹಜ. ಹಾಗಾಗಿ ಏರ್‌ಟೆಲ್ ತನ್ನ 3359 ರೂ. ಯೋಜನೆಯಲ್ಲಿ ಬದಲಾವಣೆ ತರಬೇಕು ಅಥವಾ 2999 ರೂ. ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯ ನಿಲ್ಲಿಸಬೇಕು. ಬಳಕೆದಾರರ ಈ ಗೊಂದಲಕ್ಕೆ ಎರ್ಟೆಲ್ ಸ್ಪಷ್ಟನೆ ನೀಡಬೇಕಿದೆ.
Comments are closed.