ಸಿನಿಮಾ ರೀತಿಯ ಟ್ವಿಸ್ಟ್, ಮದುವೆಗೂ 1 ದಿನದ ಮುಂದೆ ಹುಡುಗಿ ಮಾಡಿದ್ದನ್ನು ಕಂಡು ಶಾಕ್ ಆದ ಹೆಣ್ಣಿನ ಮನೆಯವರು, ಸರಿ ಮಾಡಲು ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳಹೊರಟಿರುವ ಘಟನೆ ನಡೆದಿರುವುದು ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ. ಅಲ್ಲಿ ಒಬ್ಬ ಹುಡುಗಿ ತಾನು ಅಂದುಕೊಂಡಿದ್ದನ್ನು ಸಾಧಿಸಲು ತನ್ನ ಮನೆಯವರನ್ನು ಸಂಕಟಕ್ಕೆ ಸಿಕ್ಕಿ ಹಾಕಿಸಿದಳು. ಆಕೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಇದರಿಂದ ಪೇಚಿಗೆ ಸಿಕ್ಕಿಹಾಕಿಕೊಂಡ ಮನೆಯವರು ಕೂಡಲೇ ಒಬ್ಬ ಹುಡುಗನನ್ನು ನೋಡಿ ಮದುವೆ ಮಾಡಲು ನಿಗದಿ ಮಾಡುತ್ತಾರೆ. ಆದರೆ ಹುಡುಗಿ ಮಾಡಿರುವ ಕೆಲಸದಿಂದಾಗಿ ಇಡೀ ಮನೆಯವರು ಆಸ್ಪತ್ರೆ ಸೇರುವಂತಾಗಿದೆ.
ಆ ಹುಡುಗಿಯ ಮದುವೆ ಅನ್ನುವುದು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿತ್ತು. ಮದುವೆಗಾಗಿ ಎಲ್ಲಾ ತಯಾರಿಗಳು ಕೂಡ ಸಂಪೂರ್ಣವಾಗಿ ನಡೆದಿದ್ದವು. ಇನ್ನೇನು ಮದುವೆ ದಿನ ಬರುವುದಷ್ಟೇ ಬಾಕಿ. ಆದರೆ ಆ ಹುಡುಗಿ ಮಾಡಿದ ಕಾರ್ಯದಿಂದಾಗಿ ಮನೆಯವರು ಆಸ್ಪತ್ರೆ ಸೇರುವಂತಾಯಿತು. ಇದೇ ಸಂದರ್ಭದಲ್ಲಿ ನೋಡಿ ಆ ಹುಡುಗಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗುತ್ತಾಳೆ.
ಈ ಮದುವೆಯನ್ನು ನಿಲ್ಲಿಸಲು ಆ ಹುಡುಗಿ ಒಳ್ಳೆಯ ಖತರ್ನಾಕ್ ಪ್ಲಾನ್ ಅನ್ನೇ ಮಾಡಿದ್ದಳು. ಹೌದು ಮನೆಯವರು ಎಲ್ಲರೂ ಕೂಡ ಮದುವೆ ಕಾರ್ಯಗಳಲ್ಲಿ ವ್ಯಸ್ತರಾಗಿದ್ದರು. ಇಂತಹ ಒಳ್ಳೆಯ ಸಂದರ್ಭ ನೋಡಿ ಎಲ್ಲರಿಗೂ ಕೂಡ ಮತ್ತು ಬರುವಂತಹ ಚಹಾವನ್ನು ಕುಡಿಸುತ್ತಾಳೆ. ಇದರಿಂದಾಗಿ ಎಲ್ಲರೂ ಕೂಡ ಮೂರ್ಛೆ ತಪ್ಪುತ್ತಾರೆ.
ಇದೇ ಸಂದರ್ಭವನ್ನು ನೋಡಿಕೊಂಡು ಆ ಹುಡುಗಿ ಮನೆಯಲ್ಲಿರುವ ಹಣ ಹಾಗೂ ಆಭರಣಗಳನ್ನು ಎತ್ತಿಕೊಂಡು ತನ್ನ ಪ್ರಿಯಕರನೊಂದಿಗೆ ಓಡಿ ಹೋಗುತ್ತಾಳೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರೆಲ್ಲರೂ ಎದ್ದನಂತರ ನಡೆದಿದ್ದನ್ನು ನೋಡಿ ನಂಬಲೂ ಸಾಧ್ಯವಾಗದಂತೆ ಆಶ್ಚರ್ಯ ಪಟ್ಟುಕೊಳ್ಳುತ್ತಾರೆ. ಇನ್ನು ಕೆಲವರನ್ನು ಆಸ್ಪತ್ರೆಗೆ ಕೂಡ ದಾಖಲು ಮಾಡಲಾಗುತ್ತದೆ. ಕೂಡಲೇ ಮನೆಯವರು ಈ ಕುರಿತಂತೆ ಪೊಲೀಸರಿಗೆ ದೂರನ್ನು ದಾಖಲಿಸುತ್ತಾರೆ.
ಮಾಧ್ಯಮ ಮೂಲಗಳ ಪ್ರಕಾರ ಫಿರೋಜಾಬಾದ್ ನ ಕೌಶಲ್ಯ ನಗರದ ಪೂರ್ಣ ಳ ಮದುವೆಯೆನ್ನುವುದು ನರೇಶ್ ಕುಮಾರ್ ಎನ್ನುವವನ ಜೊತೆಗೆ ನಿಶ್ಚಯವಾಗಿತ್ತು. ಆದರೆ ಆ ಹುಡುಗಿ ಮನೆಯವರಿಗೆ ಚಹಾದಲ್ಲಿ ಮತ್ತು ಬರುವ ಔಷಧಿ ಯನ್ನು ನೀಡಿ 1.5 ಲಕ್ಷ ರೂಪಾಯಿ ಹಣವನ್ನು ಹಾಗೂ ಮೌಲ್ಯವುಳ್ಳ ಆಭರಣಗಳನ್ನು ಎತ್ತಿಕೊಂಡು ಓಡಿ ಹೋಗಿದ್ದಾಳೆ.
ಈ ಘಟನೆ ನಡೆದಿದ್ದು ಶುಕ್ರವಾರ. ಶನಿವಾರ ದಿಬ್ಬಣದೊಂದಿಗೆ ಬಂದಂತಹ ಅವರ ನಡೆದಿದ್ದನ್ನು ನೋಡಿ ಕಕ್ಕಾಬಿಕ್ಕಿಯಾಗುತ್ತಾನೆ. ನಂತರ ಹೆಣ್ಣಿನ ಮನೆಯವರು ಮದುವೆ ಹೆಣ್ಣಿನ ತಂಗಿಯನ್ನು ಗಂಡಿಗೆ ಕೊಟ್ಟು ಮದುವೆ ಮಾಡುವುದಾಗಿ ನಿಶ್ಚಯಿಸುತ್ತಾರೆ. ಈ ಕುರಿತಂತೆ ಗಂಡು ಹಾಗೂ ಹೆಣ್ಣಿನ ಮನೆಯವರ ನಡುವೆ ಹಲವಾರು ವಾದ-ವಿವಾದ ಜಗಳಗಳು ನಡೆದ ನಂತರ ಒಪ್ಪಿಗೆಗೆ ಬರುತ್ತಾರೆ. ಇಷ್ಟು ಮಾತ್ರವಲ್ಲದೆ ಮೋಸ ಮಾಡಿ ಹೋದಂತಹ ಪೂರ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೂಡ ದಾಖಲಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.