Neer Dose Karnataka
Take a fresh look at your lifestyle.

ತನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ SBI ಬ್ಯಾಂಕ್, ಹೊಸ ಯೋಜನೆ ಆರಂಭಿಸಿ, ಎಷ್ಟೆಲ್ಲ ಲಾಭ ನೀಡಲು ಮುಂದಾಗಿದೆ ಗೊತ್ತೇ??

ಎಸ್.ಬಿ.ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಒಂದು ಒಳ್ಳೆಯ ಸುದ್ದಿಯನ್ನು ನೀಡಲಿದ್ದೇವೆ. ಎಸ್.ಬಿ.ಐ ದೇಶದ ಅತಿದೊಡ್ಡ ಸಾರ್ವಕಾಲಿಕ, ಇದರಲ್ಲಿ ಹಣ ಉಳಿಸುವ ಅನೇಕ ವಿಮೆ ಯೋಜನೆಗಳು ಇದೆ. ಸರ್ಕಾರದ ಯೋಜನೆಗಳು ಎಸ್.ಬಿ.ಐ ಬ್ಯಾಂಕ್ ನಲ್ಲಿ ಲಭ್ಯವಿದೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಹಾಗು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ  (PMJJBY). ಈ ಯೋಜನೆಗಳ ಮೂಲಕ ವಾರ್ಷಿಕವಾಗಿ ಕೇವಲ 342 ರೂಪಾಯಿ ಪಾವತಿಸಿ, 4 ಲಕ್ಷದ ವರೆಗೂ ನಿಮ್ಮ ಹಣಕ್ಕೆ ರಕ್ಷಣೆ ನೀಡಲಿದೆ ಎಸ್.ಬಿ.ಐ. ಈ ಯೋಜನೆಗಳ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ..

ಈ ಯೋಜನೆಗಳ ಬಗ್ಗೆ ಎಸ್.ಬಿ.ಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ, “ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವಿಮೆ ಮಾಡಿಸಿ, ಚಿಂತೆ ಮುಕ್ತ ಜೀವನ ನಡೆಸಿ..”ಎಂದು ಟ್ವೀಟ್ ಮಾಡಲಾಗಿದೆ. ಈಗಾಗಲೇ ಎಸ್.ಬಿ.ಐ ನಲ್ಲಿ ಸೇವಿಂಗ್ಸ್ ಅಕೌಂಟ್ ಹೊಂದಿರುವವರು, ಆಟೋ ಡೆಬಿಟ್ ಮೂಲಕ ವಾರ್ಷಿಕ ಪ್ರೀಮಿಯಂ ಕಟ್ಟಬಹುದು. ಎಸ್.ಬಿ.ಐ ನಲ್ಲಿ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಇದ್ದರೆ ಸಾಕು, ಇದಕ್ಕೆ ಅರ್ಹರಾಗುತ್ತೀರಿ. ಯೋಜನೆಗಳ ಬಗ್ಗೆ ಪೂರ್ತಿ ಮಾಹಿತಿಯನ್ನು ಈಗ ನೋಡೋಣ..

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) :-
ಈ ಯೋಜನೆಯಲ್ಲಿ ನೀವು ಮರಣ ಪ್ರಯೋಜನವನ್ನು ಪಡೆಯುತ್ತೀರಿ. ಈ ಯೋಜನೆಯ ಪ್ರಕಾರ, ಅಪಘಾತ ಅಥವಾ ಅಂಗಾಂಗ ವೈಫಲ್ಯಗಳಿಂದ ವಿಮಾದಾರರು ನಿಧನ ಹೊಂದಿದರೆ, ನಾಮಿನಿಗೆ 2 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಹಾಗೂ ಅಂಗವೈಕಲ್ಯ ಹೊಂದಿದರೆ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. 18 ರಿಂದ 70 ವರ್ಷದ ಒಳಗಿರುವ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೇವಲ 12 ರೂಪಾಯಿ ಆಗಿದೆ.

ಪ್ರಧಾನ ಮಂತ್ರಿ ಜೀವ ಜ್ಯೋತಿ ಬಿಮಾ ಯೋಜನೆ (PMJJBY) :- ಈ ಯೋಜನೆಯ ಅಡಿಯಲ್ಲಿ ವಿಮಾದಾರರು ಮರಣ ಹೊಂದಿದ ಬಳಿಕ, ನಾಮಿನಿಗೆ 2 ಲಕ್ಷ ರೂಪಾಯಿ ಹಣ ಪರಿಹಾರವಾಗಿ ಸಿಗುತ್ತದೆ. 18 ರಿಂದ 50 ವರ್ಷದ ಒಳಗಿರುವ ಯಾವ ವ್ಯಕ್ತಿಯಾದರೂ ಈ ಯೋಜನೆಯ ಪ್ರಯೋಜವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ 330 ರೂಪಾಯಿ ಆಗಿದೆ. ಈ ವಿಮಾ ರಕ್ಷಣಾ ಯೋಜನೆಯು ಜೂನ್ 1 ರಿಂದ ಮೇ 31ರ ವರೆಗೂ ಅಂದ್ರೆ 1 ವರ್ಷಕ್ಕೆ ಇರುತ್ತದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡುವುದರಿಂದ ಅಥವಾ ಪ್ರೀಮಿಯಂ ಕಟ್ ಆಗುವ ಸಮಯದಲ್ಲಿ ಸಾಕಷ್ಟು ಹಣ ನಿಮ್ಮ ಖಾತೆಯಲ್ಲಿ ಇಲ್ಲದೆ ಇರುವ ಕಾರಣದಿಂದ ಈ ವಿಮೆಯನ್ನು ರದ್ದು ಮಾಡಬಹುದು. ಇದು ಇನ್ಶುರೆನ್ಸ್ ನ ಟರ್ಮ್ ಪಾಲಿಸಿ ಆಗಿದೆ.

Comments are closed.