Neer Dose Karnataka
Take a fresh look at your lifestyle.

ಐಷಾರಾಮಿ ಪೋರ್ಷೆ ಕಾರು ಖರೀದಿಸುವ ಆಲೋಚನೆ ಇದೆಯೇ? ಅತಿ ಕಡಿಮೆ ಬೆಲೆಗೆ ದುಬಾರಿ ಕಾರು ನೀಡಲು ಮುಂದಾದ ಕಂಪನಿ. ಬೆಲೆ ಎಷ್ಟು ಗೊತ್ತೇ?

ಕಾರ್ ಕೊಂಡುಕೊಳ್ಳಬೇಕು ಎನ್ನುವ ಕ್ರೇಜ್ ಇರುವ ಎಲ್ಲರಿಗೂ ಒಂದು ದಿನ ಪೋರ್ಶೆ ಕಾರ್ ಖರೀದಿ ಮಾಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಅದು ಬಹಳ ದುಬಾರಿ ಬೆಲೆಯ ಕಾರ್ ಆಗಿದ್ದು, ಅದರ ಬೆಲೆ ನೋಡಿಯೇ ಜನರು ತಮ್ಮ ಆಸೆ ನನಸಾಗಲು ಸಾಧ್ಯವಿಲ್ಲ ಎಂದು ಹಾಗೆಯೇ ಸುಮ್ಮನಾಗಿಬಿಡುತ್ತಾರೆ. ಇನ್ನು ಕೆಲವರು, ಸಾಲ ಮಾಡಿಯಾದರು ಸರಿ, ಲೋನ್ ಪಡೆದಾದರು ಪೋರ್ಶೆ ಕಾರ್ ಖರೀದಿ ಮಾಡುವ ಜನರು ಸಹ ಇದ್ದಾರೆ. ಆದರೆ ಈಗ ಪೋರ್ಶೆ ಕಂಪನಿ, ಕಾರ್ ಕೊಳ್ಳಲು ಬಯಸುತ್ತಿರುವ ಗ್ರಾಹಕರಿಗೆ ಒಂದು ಒಳ್ಳೆಯ ಅಫರ್ ನೀಡುತ್ತಿದೆ.

ಪೋರ್ಶೆ ಕಂಪನಿ ಇನ್ನುಮುಂದೆ ಬಳಸಿರುವ ಕಾರ್ ಗಳನ್ನು ಮಾರಾಟ ಮಾಡಲಿದ್ದು, ಇದರಿಂದಾಗಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಪೋರ್ಶೆ ಕಾರ್ ಗಳು ಸಿಗಲಿದೆ. ಪೋರ್ಶೆ ಕಂಪನಿಯು ಪೂರ್ವ ಸ್ವಾಮ್ಯದ ಕಾರ್ ಪ್ರೋಗ್ರಾಮ್ ಶುರುಮಾಡುತ್ತಿರುವುದರಿಂದ, ಪೋರ್ಶೆ ಅನುಮೋದಿತ, ಪೋರ್ಶೆ ಕಂಪನಿ ಕಾರ್ ಖರೀದಿ ಮಾಡಲು ಇಷ್ಟಪಡುತ್ತಿರುವ ಜನರ ಕನಸನ್ನು ನನಸು ಮಾಡುತ್ತಿದೆ. ಈ ಅನುಮೋದಿತ ಕಾರ್ಯಕ್ರಮದಲ್ಲಿ ಪೂರ್ವ ಸ್ವಾಮ್ಯದ ಕಾರ್ ಗಳನ್ನು ಮಾರಾಟಕ್ಕೆ ನೀಡುತ್ತಿರುವ ಮೊದಲ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಆಗಿದೆ ಪೋರ್ಶೆ ಸಂಸ್ಥೆ, ಜೊತೆಗೆ ಈ ಕಾರ್ ಗಳಿಗೆ ಸುಮಾರು 12 ತಿಂಗಳುಗಳ ಗ್ಯಾರಂಟಿಯನ್ನು ಸಹ ಪೋರ್ಶೆ ಸಂಸ್ಥೆ ನೀಡುತ್ತಿದೆ.

ಈ ಗ್ಯಾರಂಟಿ ಕಾರ್ ನ ವಯಸ್ಸು ಎಷ್ಟಿದೆ ಅದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪೋರ್ಶೆ ಸಂಸ್ಥೆ ತಿಳಿಸಿದೆ. ಇದರ ಜೊತೆಗೆ, ಕಾರ್ ನ 111 ಪಾಯಿಂಟ್ ಪರೀಕ್ಷೆಯ ನಂತರ ಒಂದು ಇಡೀ ದಿನದ ವರೆಗೂ, ರಸ್ತೆಬದಿ ಸಹಾಯ ನೀಡಲಿದೆ. 12 ತಿಂಗಳುಗಳ ವಾರಂಟಿ ಇರುವ ವಸ್ತುಗಳು, ಟೈಯರ್ ಗಳು, ಬ್ರೇಕ್ ಪ್ಯಾಡ್, ಹಾಗೂ ವಿಂಡ್ ಸ್ಕ್ರೀನ್ ವೈಪರ್ ಮತ್ತು ಉಡುಗೆ ವಸ್ತುಗಳನ್ನು ಬಿಟ್ಟು, ದುರಸ್ತಿ ಹಾಗೂ ನಿರ್ವಹಣೆ ವೆಚ್ಚ ಆಗಿರಲಿದೆ. ಇದರಲ್ಲಿ ಪೋರ್ಶೆ ಸಂಸ್ಥೆಯು ಗರಿಷ್ಠ 6 ವರ್ಷ ಹಳೆಯದಾಗಿರುವ ಮತ್ತು 2 ಲಕ್ಷ ಕಿಲೋಮೀಟರ್ ಗಿಂತ ಕಡಿಮೆ ಓಡಿರುವ ಕಾರ್ ಗಳನ್ನು ಮಾತ್ರ ಮಾರಾಟ ಮಾಡಲಿದೆ. ಪೋರ್ಶೆ ಸಂಸ್ಥೆ ಈಗಾಗಲೇ ಈ ಯೋಜನೆಯ ಅಡಿಯಲ್ಲಿ, 911 GT3 ಕಾರ್ ಅನ್ನು ಮೊದಲ ಕಾರ್ ಆಗಿ ವಿತರಿಸಿದೆ. ಈ ರೀತಿ ಬಳಸಿದ ಕಾರ್ ಖರೀದಿ ಮಾಡುವುದು ಬಹಳ ಸುಲಭ ಆಗಿದೆ, ಪೋರ್ಶೆ ಕಾರ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ತಮಗೆ ಇಷ್ಟವಾದ ಬಳಸಿದ ಕಾರ್ ಅನ್ನು ಖರೀದಿ ಮಾಡಬಹುದು. ಹಾಗೂ ಭಾರತದ ಯಾವುದೇ ಡೀಲರ್ಶಿಪ್ ಗಳಿಂದ ಈ ಕಾರ್ ಗಳನ್ನು ಪಡೆಯಬಹುದು.

Comments are closed.