ಆರ್ಸಿಬಿ ಇನ್ನು ಮುಂದೆ ಒಬ್ಬರಲ್ಲ ಇಬ್ಬರು ಎಬಿಡಿ. ಮುಂದಿನ ಸೀಸನ್ ನಲ್ಲಿ ಸಿಗಲಿದೆ ಸಿಹಿ ಸುದ್ದಿ. ಕೇಳಿ ಬರುತ್ತಿರುವ ಮಾಹಿತಿಯೇನು ಗೊತ್ತೇ?
ಅಭಿಮಾನಿಗಳ ಮೆಚ್ಚಿನ ಆರ್.ಸಿ ಬಿ ತಂಡ ಈ ವರ್ಷ ಕೂಡ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಪ್ಲೇ ಆಫ್ಸ್ ವರೆಗೂ ಆರ್.ಸಿ.ಬಿ ತಂಡ ತಲುಪಿದರು ಸಹ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದ ಆರ್.ಸಿ.ಬಿ ತಂಡ ಮಂದಿನ ವರ್ಷ ಕಪ್ ಗೆಲ್ಲಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆರ್.ಸಿ.ಬಿ ಕಪ್ ಗೆಲ್ಲದೆ ಹೋದರು ಅಭಿಮಾನಿಗಳ ಸಪೋರ್ಟ್ ಮತ್ತು ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಮುಂದಿನ ಸಲ ಕಪ್ ನಮ್ಮದೇ ಎನ್ನುತ್ತಾ ಅಭಿಮಾನಿಗಳು ಆರ್.ಸಿ.ಬಿ ತಂಡದ ಜೊತೆ ಸದಾ ಇದ್ದಾರೆ. ಈ ಆವೃತ್ತಿಯಲ್ಲಿ ಆರ್.ಸಿ.ಬಿ ತಂಡದಲ್ಲಿ ಒಬ್ಬ ವ್ಯಕ್ತಿ ಇಲ್ಲದೇ ಇದ್ದದ್ದು ಮಾತ್ರ ಅಭಿಮಾನಿಗಳಿಗೆ ಕೊರತೆಯ ಹಾಗೆ ಕಂಡಿತು..
ಅದು ಸೌತ್ ಆಫ್ರಿಕಾದ ಮಿಂಚಿನ ವೇಗದ ಬ್ಯಾಟ್ಸ್ಮನ್, ಮಿ.360 ಎಂದೇ ಹೆಸರು ಪಡೆದುಕೊಂಡಿರುವ ಎಬಿ ಡಿ ವಿಲಿಯರ್ಸ್ ಅವರು. ಎಬಿಡಿ ಅವರು ಈ ವರ್ಷ ಇಲ್ಲದೆ, ಆರ್.ಸಿ.ಬಿ ತಂಡದ ಜೋಶ್ ಕಡಿಮೆ ಆಗಿದೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಮುಂದಿನ ವರ್ಷ ಎಬಿಡಿ ಅವರು ಆರ್.ಸಿ.ಬಿ ತಂಡಕ್ಕೆ ಮರಳಿ ಬರುವುದು ಖಚಿತವಾಗಿದೆ, ಇದರ ಬಗ್ಗೆ ವಿರಾಟ್ ಕೋಹ್ಲಿ ಅವರು ಹಾಗೂ ಎಬಿಡಿ ಅವರು ಇಬ್ಬರು ಸಹ ಸ್ಪಷ್ಟನೆ ನೀಡಿದ್ದಾರೆ. ಆದರೆ ಈಗ ಹೊಸದೊಂದು ಸುದ್ದಿ ಸಿಕ್ಕಿದ್ದು, ಮುಂದಿನ ವರ್ಷ ಆರ್.ಸಿ.ಬಿ ತಂಡಕ್ಕೆ ಇಬ್ಬರು ಎಬಿಡಿಗಳು ಬರುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇದು ನಿಜ ಆದರೂ ಆಗಬಹುದು. ನಾವೆಲ್ಲರೂ ನೋಡಿರುವ ಹಾಗೆ ಸೌತ್ ಆಫ್ರಿಕಾದ ಮತ್ತೊಬ್ಬ ಆಟಗಾರ ಡೆವಾಲ್ಡ್ ಬ್ರೇವಿಸ್ ಅವರು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಈ ವರ್ಷ ಒಳ್ಳೆಯ ಪ್ರದರ್ಶನ ನೀಡಿದರು. ಡೆವಾಲ್ಡ್ ಬ್ರೇವಿಸ್ ಅವರು ಸೌತ್ ಆಫ್ರಿಕಾದ ಅಂಡರ್ 19 ಕ್ರಿಕೆಟ್ ಟೀಮ್ ನಲ್ಲಿದ್ದವರು, ಈ ವರ್ಷ ಮುಂಬೈ ತಂಡದಲ್ಲಿ ಆಡಿದ 7 ಪಂದ್ಯಗಳಲ್ಲಿ 163 ರನ್ ಗಳಿಸಿ, ಇವತ ಸ್ಟ್ರೈಕ್ ರೇಟ್ 143 ಇತ್ತು, ಇವರನ್ನು ಜ್ಯೂನಿಯರ್ ಎಬಿಡಿ ಎಂದೇ ಕರೆಯಲಾಗುತ್ತಿತ್ತು.
ಮುಂದಿನ ವರ್ಷ ಮುಂಬೈ ತಂಡವನ್ನು ಇನ್ನು ಸ್ಟ್ರಾಂಗ್ ಮಾಡುವ ಸಲುವಾಗಿ, ಡೆವಾಲ್ಡ್ ಬ್ರೇವಿಸ್ ಅವರನ್ನು ಮುಂಬೈ ತಂಡದಿಂದ ರಿಲೀಸ್ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಆ ರೀತಿ ಆದರೆ, ಆರ್.ಸಿ.ಬಿ ತಂಡ ಇವರನ್ನು ಕರೆತರುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಬ್ರೇವಿಸ್ ಅವರು ಉತ್ತಮವಾದ ಬ್ಯಾಟ್ಸ್ಮನ್ ಎಂದು ಈಗಾಗಲೇ ಪ್ರೂವ್ ಮಾಡಿದ್ದಾರೆ.. ಐಪಿಎಲ್ ಬಳಿಕ ಬ್ರೇವಿಸ್ ಅವರು ಸೌತ್ ಆಫ್ರಿಕಾಗೆ ಮರಲಿದ್ದು, ಎಬಿಡಿ ಅವರನ್ನು ಭೇಟಿ ಮಾಡಿ, ಮೊದಲ ಐಪಿಎಲ್ ಅನುಭವ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. ಜೊತೆಗೆ, ಆರ್.ಸಿ.ಬಿ ತಂಡಕ್ಕೆ ಬರುವ ಆಸೆಯನ್ನು ಸಹ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಬ್ರೇವಿಸ್ ಅವರು ಆರ್.ಸಿ.ಬಿ ತಂಡದ ಅಭಿಮಾಜಿ ಆಗಿದ್ದು, ಅವಕಾಶ ಸಿಕ್ಕರೆ, ಆರ್.ಸಿ.ಬಿ ತಂಡದ ಪರವಾಗಿ ಆಡಲು ಇಷ್ಟವಿದೆ ಎಂದಿದ್ದಾರೆ. ಎಬಿಡಿ ಅವರು ಸಹ ಬ್ರೇವಿಸ್ ಅವರಿಗೆ ಸಪೋರ್ಟ್ ಮಾಡಿದ್ದು, ಮುಂದಿನ ವರ್ಷ ನಾನು ಮಹತ್ವದ ಜವಾಬ್ದಾರಿಯಿಂದ ಆರ್.ಸಿ.ಬಿ ತಂಡಕ್ಕೆ ಮರಳುತ್ತಿದ್ದೇನೆ, ಅವಕಾಶ ಸಿಕ್ಕರೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ ಎಬಿಡಿ. ಎಲ್ಲವೂ ಇದೇ ರೀತಿ ನಡೆದರೆ, ಮುಂದಿನ ವರ್ಷ ಆರ್.ಸಿ.ಬಿ ತಂಡಕ್ಕೆ ಇಬ್ಬರು ಎಬಿಡಿ ಗಳು ಬರುವುದು ಪಕ್ಕ ಎನ್ನಲಾಗುತ್ತಿದೆ.
Comments are closed.