Neer Dose Karnataka
Take a fresh look at your lifestyle.

ಮದುವೆಯಾಗಿ 45 ದಿನಕ್ಕೆ ಹೆಂಡತಿಯನ್ನು ವಾಪಸ್ಸು ಕರೆದುಕೊಂಡು ಬರಲು ಅತ್ತೆ ಮನೆಗೆ ಹೋದ ಗಂಡ. ನಾದಿನಿಯ ಜೊತೆ ಏನು ಮಾಡಿದ್ದಾನೆ ಗೊತ್ತೇ??

447

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೀತಿಯ ಘಟನೆಗಳು ನಡೆಯುವುದನ್ನು ನೋಡಿದ್ದೇವೆ. ಸಾಮಾನ್ಯವಾಗಿ ಮನೆಗಳಲ್ಲಿ, ಭಾವ ಮತ್ತು ನಾದಿನಿಯದ್ದು ಬಹಳ ತಮಾಷೆಯ ಭರಿತ ಸಂಬಂಧ ಆಗಿರುತ್ತದೆ. ಇವರಿಬ್ಬರು ತಮಾಷೆ ಮಾಡಿಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಮಧ್ಯಪ್ರದೇಶದಲ್ಲಿ ವಿವೇಕ್ ಶುಕ್ಲಾ ಎಂಬಾತ, ನಾದಿನಿ ಅಂದರೆ ಹೆಂಡತಿಯ ತಂಗಿಯ ಜೊತೆಗೆ ಓಡಿ ಹೋಗಿ ಮದುವೆ ಆಗಿದ್ದಾನೆ. ಈ ವಿಚಾರ ನಿಜಕ್ಕೂ ಆ ಊರಿನ ಜನರಿಗೆ ಶಾಕ್ ನೀಡಿದೆ.

ಮಧ್ಯಪ್ರದೇಶ ರಾಜ್ಯದ, ಸಾಗರ ಜಿಲ್ಲೆಯ, ಬೆಹರೂಲ್ ಎಂಬ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ರಿಚೈ ಎನ್ನುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮದುವೆ ಆಗಿರುವ ಹುಡುಗಿಯ ಹೆಸರು ಶಿವಾನಿ ಶುಕ್ಲಾ, ಈಕೆ ವಿವೇಕ್ ಶುಕ್ಲಾ ಎನ್ನುವ ಹುಡುಗನ ಜೊತೆಗೆ, ಮೇ 8ರಂದು ಮದುವೆ ಆಗಿತ್ತು. ಈ ಮದುವೆ ಬಳಿಕ, ಆಕೆ ಗಂಡನ ಮನೆಗೆ ತೆರಳಿದ್ದಳು. ಒಮ್ಮೆ ಗಂಡನ ಮನೆಯಲ್ಲಿದ್ದು, ನಂತರ ತನ್ನ ತಾಯಿ ಮನೆಗೆ ಹೋಗಿದ್ದಳು. ಗಂಡ ಬಂದು ಆಕೆಯನ್ನು ಮತ್ತೆ ಕರೆದುಕೊಂಡು ಹೋಗಬೇಕಿತ್ತು. ಜುಲೈ 8ರಂದು ವಿವೇಕ್ ಶುಕ್ಲಾ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದನು. ಅದರ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದವನು, ಹೆಂಡತಿಯ ತಂಗಿಯ ಜೊತೆಗೆ ಓಡಿ ಹೋಗಿದ್ದಾನೆ.

ಇದರಿಂದ ಮನನೊಂದ ಶಿವಾನಿ ಶುಕ್ಲ, ಬೆಹರೂಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅವರಿಬ್ಬರನ್ನು ಹುಡುಕುತ್ತಿದ್ದಾರೆ. ಶಿವಾನಿ ಗೆ ಈಗ ತನಗೆ ಪತ್ನಿಯ ಹಕ್ಕು ಸಿಗಬೇಕು ಎನ್ನುವ ಹಠ ಬಂದಿದ್ದು, ಗಂಡ ಮತ್ತು ತಂಗಿಯ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಪಣ ತೊಟ್ಟಿದ್ದಾಳೆ, ತನಗೆ ನ್ಯಾಯ ಸಿಗಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ. ಗಂಡನ ಜೊತೆಗೆ ತಂಗಿ ಮದುವೆ ಆಗಿ ಇರುವುದು ಶಿವಾನಿಗೆ ಇಷ್ಟವಿಲ್ಲ. ಇದೀಗ ಶಿವಾನಿ ಏನೇ ಆದರೂ, ಸೇಡು ತೀರಿಸಿಕೊಳ್ಳುವುದನ್ನು ಬಿಡುವುದಿಲ್ಲ ಎಂದು ಹಠದಲ್ಲಿದ್ದಾಳೆ

Leave A Reply

Your email address will not be published.