Neer Dose Karnataka
Take a fresh look at your lifestyle.

ಹತ್ತಲ್ಲ ಇಪ್ಪತ್ತಲ್ಲ ಬರೋಬ್ಬರಿ 35 ವರ್ಷಗಳ ಪ್ರೀತಿ, ಮದುವೆ ಆದ 65 ವರ್ಷ. ಇವರ ಲವ್ ಸ್ಟೋರಿ ಬೇರೆ ಲೆವೆಲ್. ಹೇಗಿದೆ ಗೊತ್ತೇ?

ನಿಜವಾದ ಪ್ರೀತಿಗೆ ಸಾವಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಇತ್ತೀಚೆಗಿನ ಒಂದು ಘಟನೆ ಸಾಕ್ಷಿಯ ಹಾಗಿದೆ. ಈ ಜೋಡಿಯ ಪ್ರೇಮಕಥೆಯನ್ನು ಸಿನಿಮಾಗಳಲ್ಲಿ ಬರುವ ಟ್ವಿಸ್ಟ್‌ ಗಳ ಹಾಗೆ ಕಾಣಬಹುದು. 35 ವರ್ಷಗಳ ಹಿಂದೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು, ಆದರೆ ಎಲ್ಲಾ ಕಥೆಗಳಂತೆ, ಹುಡುಗಿಯ ಪೋಷಕರು ಅವರ ಮದುವೆಗೆ ಒಪ್ಪಿಗೆ ನೀಡದೆ, ನೋ ಹೇಳಿದರು. ಇದಲ್ಲದೇ ಆ ಹುಡುಗಿಗೆ ಬೇರೊಬ್ಬನ ಜೊತೆ ಮದುವೆ ಸಹ ಆಯಿತು. ಆದರೆ ಪ್ರೀತಿಸಿದ ಹುಡುಗ ಆ ಹುಡುಗಿಯ ನೆನಪಲ್ಲೇ ಒಂಟಿಯಾಗಿಯೇ ಇದ್ದ. ಆದರೆ 65 ನೇ ವಯಸ್ಸಿನಲ್ಲಿ ಈ ಜೋಡಿ ಒಂದಾಗಿದೆ.

ಅವರ ಪ್ರೀತಿಗೆ ಸಾವಿಲ್ಲ ಎಂದು ಸಾಬೀತು ಮಾಡಿದ್ದಾರೆ. ಈ ಪ್ರೇಮಕಥೆ ನಡೆದಿರುವುದು ಕರ್ನಾಟಕ ರಾಜ್ಯದ ಹೆಬ್ಬಾಳ ಪ್ರದೇಶದಲ್ಲಿ. ಹೇಗೆ ಮತ್ತು ಎಲ್ಲಿ ನಡೆದಿದೆ ಎನ್ನುವುದರ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ.. ಚಿಕ್ಕಣ್ಣ ಎಂಬ ವ್ಯಕ್ತಿ ಅದೇ ಪ್ರದೇಶದ ಜಯಮ್ಮ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರ ಮದುವೆಗೆ ಜಯಮ್ಮ ಪೋಷಕರು ನಿರಾಕರಿಸಿದ್ದರು. ಜಯಮ್ಮನನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಹಾಗಾಗಿ ಚಿಕ್ಕಣ್ಣ ಬೇರೆ ಯುವತಿಯನ್ನು ಮದುವೆಯಾಗದೆ ಹಾಗೆಯೇ ಇದ್ದ.

ಆಕೆಯ ಮದುವೆಯಾದ ಬಳಿಕ, ಚಿಕ್ಕಣ್ಣ ಅವರು ಜಯಮ್ಮ ಅವರ ನೆನಪುಗಳಲ್ಲೇ ಹಲವು ವರ್ಷಗಳು ಕಳೆದರು. ಆದರೆ ಇತ್ತೀಚೆಗೆ ಜಯಮ್ಮ ಅವರ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಅದುಅಲ್ಲದೆ ಜಯಮ್ಮ ಅವರಿಗೆ ಮಕ್ಕಳಾಗಿಲ್ಲ. ಹಾಗಾಗಿ ಆಕೆ ಒಂಟಿ ಜೀವನ ನಡೆಸುತ್ತಿದ್ದರು. ಜಯಮ್ಮ ಸಹ ಚಿಕ್ಕಣ್ಣ ಅವರ ಜೊತೆಗಿನ ನೆನಪುಗಳಲ್ಲಿದ್ದರು. ಇಬ್ಬರ ನಡುವೆ ಮತ್ತೆ ಪ್ರೀತಿ ಚಿಗುರಿತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಸಂಬಂಧಿಕರಿಗೆ ತಿಳಿಸಿ ತಮ್ಮ ಊರಿಜ ಹತ್ತಿರದಲ್ಲಿಯೇ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. 35 ವರ್ಷಗಳ ಹಿಂದೆ ಪ್ರೀತಿಸಿದ ಈ ಜೋಡಿ ಈಗ ಮದುವೆಯಾಗಿ ಒಂದಾಗಿದ್ದಾರೆ

Comments are closed.