Neer Dose Karnataka
Take a fresh look at your lifestyle.

Kannada News: ಸ್ವಾಮೀಜಿಗಳಿಗೆ ಎಲ್ಲವೂ ತಿಳಿದಿತ್ತೇ, 9 ವರ್ಷಗಳ ಹಿಂದೆಯೇ ಬರೆದಿದ್ದ ವಿಲ್ ಓದಿದರೆ, ಒಂದು ಕ್ಷಣ ಅಳು ಬರುತ್ತದೆ.

Kannada News: ನಡೆದಾಡುವ ದೇವರು ಎಂದು ಖ್ಯಾತಿ ಪಡೆದಿದ್ದ ಪ್ರವಾಚನಾಕಾರರು ಜ್ಞಾನಯೋಗಾಶ್ರಮದ ಪೂಜ್ಯ ಗುರುಗಳಾದ ಸಿದ್ದೇಶ್ವರ ಶ್ರೀಗಳು ನಿನ್ನೆ ಸಂಜೆ ಲಿಂಗೈಕ್ಯರಾಗಿದ್ದಾರೆ. ಶ್ರೀಗಳಿಗೆ 82 ವರ್ಷವಾಗಿತ್ತು, ಕಳೆದ ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ನಿನ್ನೆ ಸಂಜೆ ಪ್ರಾಣ ಬಿಟ್ಟಿದ್ದಾರೆ. ಆದರೆ 2014ರಲ್ಲೇ ಲಿಂಗೈಕ್ವೈರಾಗುವ ಮೊದಲೇ ಶ್ರೀಗಳು ವಿಲ್ ಬರೆಸಿ ಇಟ್ಟಿದ್ದರು, ಅದನ್ನು ನೋಡಿದರೆ, ಹೀಗೆಲ್ಲಾ ನಡೆಯುತ್ತದೆ ಎಂದು ಶ್ರೀಗಳಿಗೆ ಮೊದಲೇ ಗೊತ್ತಿತ್ತಾ ಎಂದು ಎಲ್ಲರಿಗೂ ಆಶ್ಚರ್ಯ ಆಗುವುದು ಖಂಡಿತ. ಶ್ರೀಗಳ ವಿಲ್ ನಲ್ಲಿ ಏನೆಲ್ಲಾ ಇದೆ ಎಂದು ತಿಲಿಸುತ್ತೇವೆ ನೋಡಿ..

ಶ್ರೀಗಳು ತಮಗಾಗಿ ಯಾವುದೇ ಸ್ಮಾರಕ ಮಾಡಬಾರದು ಎಂದು ವಿಲ್ ನಲ್ಲಿ ಬರೆದಿದ್ದಾರೆ. “ಬದುಕು ಅನುಭವಗಳ ಪ್ರವಾಹ. ಸಿರಿವಂತಿಕೆಯು ವಿಶ್ವ- ಚಿಂತನೆ ಹಾಗೂ ಸತ್ಯ ಶೋಧನೆಗಳಿಂದ ಅದರ ಸೌಂದರ್ಯವು ರಾಗ ದ್ವೇಷ ರಹಿತವಾದ ಹಾಗೂ ಅಸೀಮಿತವಾದ ಸದ್ಭಾವ ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ನನ್ನದು ವೇಗವಿಲ್ಲದ, ಸಾಮಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವನು ಗುರುದೇವರು. ಹದಗೊಳಿಸಿದವರು ನಾಡಿನ ಪೂಜ್ಯರು. ಹಿತೈಷಿಗಳು, ಸಾಧಕರು ನಾನು ಎಲ್ಲರಿಗೂ ಎಲ್ಲದ್ದಕ್ಕೂ ಉಪಕೃತ. ಇದನ್ನು ಓದಿ.. Kannada News: ದೇಶವೇ ಮೆಚ್ಚಿರುವ ಜೋಡಿ, ಅಲ್ಲೂ ಅರ್ಜುನ್ ರವರು ತಮ್ಮ ಪತ್ನಿ ಸ್ನೇಹ ರವರು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೇ? ಇಷ್ಟೆಲ್ಲ ಬೇಕಾ??

ಬದುಕು ಮುಗಿಯುತ್ತದೆ. ದೀಪ ಆರಿದಂತೆ. ತೆರೆ ಅಡಗಿದಂತೆ, ಮೇಘ ಕರಗಿದಂತೆ. ಉಳಿಯುವುದು ಬರಿ ಬಯಲು, ಮಹಾಮೌನ, ಶೂನ್ಯ ಸತ್ಯ. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬದುಕಿದ್ದೇನೆ. ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನ ಕೃತಜ್ಞತೆಯಿಂದ ಸ್ಮರಿಸಬೇಕು. ಅದಕ್ಕಾಗಿಯೇ ಈ ಅಂತಿಮ ಅಭಿವಾದನ ಪತ್ರ…” ಎಂದು ಶ್ರೀಗಳು ವಿಲ್ ನಲ್ಲಿ ಉಲ್ಲೇಖಿಸಿದ್ದಾರೆ. ಇಂದು ಸಂಜೆವರೆಗು ಸೈನಿಕ ಶಾಲೆಯಲ್ಲಿ ಭಕ್ತರಿಗೆ ಶ್ರೀಗಳ ದರ್ಶನ ಪಡೆಯುವ ಅವಕಾಶ ಕೊಡಲಾಗುತ್ತಿದ್ದು, ಇಂದು ಮಧ್ಯಾಹ್ನ 3 ರಿಂದ 4ಗಂಟೆ ವರೆಗು, ಸಕಲ ಸರ್ಕಾರಿ ಗೌರವ ನೀಡಲಾಗುತ್ತದೆ, 5 ಗಂಟೆಯಿಂದ ಶ್ರೀಗಳ ಅಂತಿಮ ವಿಧಿ ವಿಧಾನ ಕಾರ್ಯಗಳು ನಡೆಯಲಿದೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಆಸ್ಪತ್ರೆ ಸೇರಿದ್ದ ಸಮಂತಾ ಆರೋಗ್ಯದ ಕುರಿತು ತಿಂಗಳ ನಂತರ ತಿಳಿಯಿತು ಅಪ್ಡೇಟ್: ದೇವ ಲೋಕದ ಅಪ್ಸರೆ, ಹೇಗಿದ್ದಾರೆ ಅಂತೇ ಗೊತ್ತೇ??

Comments are closed.