Neer Dose Karnataka
Take a fresh look at your lifestyle.

Kannada News: ದೇವದಾಸಿ ಆಗಿದ್ದವಳನ್ನು ಪ್ರೀತಿ ಮಾಡಿ ಮದುವೆಯಾದ, ಆದರೆ ಮದುವೆ ನಂತರ ಏನು ಮಾಡಿದ್ದಾನೆ ಗೊತ್ತೇ? ಪಾಪ ಆಕೆಯ ಪರಿಸ್ಥಿತಿ ಏನಾಗಿದೆ ಗೊತ್ತೆ?

180

Kannada News: ಕೆಲವೊಮ್ಮೆ ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು ನಮಗೆ ಶಾಕ್ ಕೊಡುತ್ತದೆ. ಸಂಸಾರದಲ್ಲಿ ಅನುಮಾನ ಎನ್ನುವುದು ಬಂದರೆ, ಅದು ಹೋಗುವುದು ಬಹಳ ಕಷ್ಟ. ಅದೇ ಅನುಮಾನ ಮುಂದುವರೆದರೆ ಸಂಸಾರವನ್ನೇ ಹಾಳು ಮಾಡುತ್ತದೆ. ಹೀಗೆ ಅನುಮಾನದಿಂದ, ಒಂದು ಸಂಸಾರದಲ್ಲಿ ಎಂಥಹ ಗತಿ ಬಂದಿದೆ ಎಂದು ತಿಳಿದರೆ ನೀವು ಮರುಗುತ್ತೀರಿ. ಬೆಳಗಾವಿ ಜಿಲ್ಲೆಯ, ರಾಮಾಪುರ ತಾಲೂಕಿನ, ಸಾಲಾಪುರ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಜಾನವ್ವ ಎನ್ನುವ ಮಹಿಳೆ ದೇವದಾಸಿ ಆಗಿದ್ದಳು, ಈಕೆಯನ್ನು 28 ವರ್ಷದ ಹಿಂದೆ, ಬಸನಗೌಡ ಎನ್ನುವ ವ್ಯಕ್ತಿ ಹೆಂಡತಿಯಾಗಿ ಸ್ವೀಕರಿಸಿದ್ದ.

ಇವರಿಬ್ಬರು ಮದುವೆ ಆಗಿರಲಿಲ್ಲ, ಒಂದೇ ಮನೆಯಲ್ಲಿ ಗಂಡ ಹೆಂಡಿತಿಯ ಥರ ಜೀವನ ನಡೆಸುತ್ತಿದ್ದರು. ಬಸನಗೌಡ ಈಕೆಯ ಮೇಲಿನ ಪ್ರೀತಿಯಿಂದ ತನ್ನ ಹೆಂಡತಿಯನ್ನು ಬಿಟ್ಟು, ಜಾನವ್ವ ಇದ್ದ ಊರಿನಲ್ಲೇ ಅವಳನ್ನು ನೋಡಿಕೊಂಡಿದ್ದ, ಇವರಿಗೆ ಮೂವರು ಮಕ್ಕಳು, ಎಲ್ಲರೂ ಚೆನ್ನಾಗಿ ಓದಿ ಬೆಳೆದು ದೊಡ್ಡವರಾಗಿದ್ದರು. ಬಸನಗೌಡನಿಗೆ ಜಾನವ್ವಳ ಮೇಲೆ ಅನುಮಾನ ಶುರುವಾಗಿತ್ತು, ಜೊತೆಗೆ ಅವನಿಗೆ ಕುಡಿತದ ಚಟ ಕೂಡ ಇತ್ತು, ಆಗಾಗ ಕುಡಿದು ಬಂದು ಹೆಂಡತಿ ಜೊತೆಗೆ ಜಗಳ ಆಡುತ್ತಿದ್ದ, ಇದು ದಿನೇ ದಿನೇ ಹೆಚ್ಚಾಗುತ್ತಲೇ ಹೋಯಿತು. ಇದನ್ನು ಓದಿ..Kannada News: ನಿಜಕ್ಕೂ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವರಿಗೆ ಏನಾಗಿತ್ತು ಗೊತ್ತೇ?? ಇಹಲೋಕ ತ್ಯಜಿಸಲು ಕಾರಣವೇನು ಗೊತ್ತೇ?? ಅಧಿಕಾರಿ ಹೇಳಿದ್ದೇನು ಗೊತ್ತೇ??

ಮೊನ್ನೆ ಮಾರ್ಚ್ 21ರಂದು ಇದೇ ರೀತಿ ಕಂಠಪೂರ್ತಿ ಕುಡಿದು, ಮನೆಗೆ ಬಂದು ಜಾನವ್ವಳ ಜೊತೆಗೆ ಚೆನ್ನಾಗಿ ಜಗಳ ಆಡಿದ್ದಾನೆ, ಜಗಳ ಮಿತಿ ಮೀರಿ, ಆಕೆಗೆ ಮನೆಯಲ್ಲಿದ್ದ ಗುದ್ದಲಿಯಿಂದ ಹೊಡೆದಿದ್ದಾನೆ, ಆಕೆಯ ಸ್ಥಿತಿ ಗಂಭೀರವಾಗಿ, ಜಾನವ್ವ ವಿಧಿವಶಳಾಗಿದ್ದು, ಸ್ವಲ್ಪ ಹೊತ್ತಿನ ನಂತರ ತನ್ನ ಹೆಂಡತಿಯನ್ನೇ ಹೀಗೆ ಮಾಡಿದೆ ಎಂದು ಪಾಪಪ್ರಜ್ಞೆ ಕಾಡುವುದಕ್ಕೆ ಶುರು ಮಾಡಿ, ಅವನು ಕೂಡ ಮನೆಯಲ್ಲಿದ್ದ ಮಾತ್ರೆಗಳನ್ನೆಲ್ಲ ನುಂಗಿ, ಹೊರಗಡೆ ಕೂತು ಪ್ರಾಣ ಬಿಟ್ಟಿದ್ದಾನೆ. ಬೆಳ್ಳಂಬೆಳಿಗ್ಗೆ ಈ ರೀತಿ ಇಬ್ಬರು ವಿಧಿವಶರಾಗಿರುವುದನ್ನು ನೋಡಿ, ಊರಿನ ಜನರು ಶಾಕ್ ಆಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಮೊದಲು ಆಕೆಯನ್ನು ಮುಗಿಸಿ ನಂತರ ತಾನು ಹೀಗೆ ಮಾಡಿಕೊಂಡಿದ್ದಾನೆ ಬಸನಗೌಡ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಇದನ್ನು ಓದಿ..Kannada Story: ತನ್ನ ಮಗಳ ಬಾತ್ರೂಮ್ ನಲ್ಲಿಯೇ ಕ್ಯಾಮೆರಾ ಇಟ್ಟ ತಂದೆ: ಕೊನೆಗೆ ಆ ಕ್ಯಾಮೆರಾ ದಲ್ಲಿ ಸೆರೆಯಾದದ್ದು ಏನು ಗೊತ್ತೇ? ಶಾಕ್ ಆಗಿ ಶೇಕ್ ಆಗುವ ಘಟನೆ.

Leave A Reply

Your email address will not be published.