Jio Cinema Plans: ಫ್ರೀ ಇದ್ದ ಜಿಯೋ ಸಿನೆಮಾಗೆ ಚಂದಾದಾರಿಕೆ ಆರಂಭ: ಆದರೂ ಖುಷಿ ಸುದ್ದಿ ಕೊಟ್ಟ ಅಂಬಾನಿ: ಪ್ಯಾಕ್ ಬೆಲೆ ಎಷ್ಟು ಕಡಿಮೆ ಗೊತ್ತೇ? 2 ರುಪಾಯಿಗೆ ಕೂಡ ಏನೆಲ್ಲಾ ಸಿಗುತ್ತೆ ಗೊತ್ತೇ??
Jio Cinema Plans: ಜಿಯೋ ಸಿನಿಮಾ ಆನ್ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಅತ್ಯುತ್ತಮವಾದ ಸ್ಥಾನದಲ್ಲಿದೆ. ಅಂಬಾನಿ ಅವರ ನೇತೃತ್ವದ ಜಿಯೋ ಈಗ ಗ್ರಾಹಕರಿಗೆ ಸಾಕಷ್ಟು ಮನರಂಜನೆ ನೀಡುತ್ತಿದೆ. ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ ಸಿನಿಮಾ, ವೆಬ್ ಸೀರೀಸ್, ಟಿವಿ ಕಾರ್ಯಕ್ರಮಗಳು ಫಿಫಾ ವರ್ಲ್ಡ್ ಕಪ್ ಅನ್ನು ಜಿಯೋ ಸಿನಿಮಾದಲ್ಲಿ ಫ್ರೀಯಾಗಿ ಸ್ಟ್ರೀಮ್ ಆಗಿ ಓಟಿಟಿ ವರ್ಲ್ಡ್ ನಲ್ಲಿ ಸಹ ದಾಖಲೆ ಸೃಷ್ಟಿಸಿತ್ತು.

ಇತ್ತೀಚೆಗೆ ನಡೆದ ವುಮನ್ಸ್ ಪ್ರೀಮಿಯರ್ ಲೀಗ್ ಅನ್ನು ಸ್ಟ್ರೀಮ್ ಮಾಡಿದ ನಂತರ ಈಗ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಸಹ ಸ್ಟ್ರೀಮ್ ಮಾಡುತ್ತಿದ್ದಾರೆ. ಎಲ್ಲಾ ನೆಟ್ವರ್ಕ್ ನಲ್ಲಿ ಜಿಯೋ ಸಿನಿಮಾ ಇಂದ ಫ್ರೀಯಾಗಿ ಐಪಿಎಲ್ ಪಂದ್ಯಗಳು ಸ್ಟ್ರೀಮ್ ಆಗುತ್ತಿದೆ. ಅದರಲ್ಲೂ ಬೆಸ್ಟ್ ಕ್ವಾಲಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಕೋಟಿಗಟ್ಟಲೆ ಕ್ರಿಕೆಟ್ ಪ್ರಿಯರು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಐಪಿಎಲ್ ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ..
ಆದರೆ ಇನ್ನುಮುಂದೆ ಜಿಯೋ ಸಿನಿಮಾ ಅಪ್ಲಿಕೇಶನ್ ಫ್ರೀಯಾಗಿ ಸಿಗುವುದಿಲ್ಲ, ಶೀಘ್ರದಲ್ಲೇ ಜಿಯೋ ಸಿನಿಮಾಗೆ ಚಂದಾದಾರಿಕೆ ಬರಲಿದ್ದು, ಈ ತಕ್ಷಣಗೆ ಮಾಡದೆ, ಈ ವರ್ಷದ ಐಪಿಎಲ್ ಮುಗಿದ ನಂತರ ಚಾರ್ಜ್ ಮಾಡುವ ಸಾಧ್ಯತೆ ಇದೆ. ಜಿಯೋ ಇಂದ ಇನ್ನು ಅಧಿಕೃತವಾಗಿ ಪ್ಲಾನ್ ಗಳ ಮಾಹಿತಿ ಸಿಕ್ಕಿಲ್ಲ, ಆದರೆ ಕೆಲವು ವೆಬ್ಸೈಟ್ ಗಳಲ್ಲಿ ಜಿಯೋ ಸಿನಿಮಾ ಪ್ಲಾನ್ ಬೆಲೆ ಬಗ್ಗೆ ಗೊತ್ತಾಗಿದ್ದು, ಈ ಪ್ಲಾನ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಜಿಯೋ ಸಿನಿಮಾ ಪ್ಲಾನ್ ಮೂರು ವಿವಿಧ ಪ್ಲಾನ್ ಗಳಲ್ಲಿ ಸಿಗಲಿದೆ..
1.ಡೇಲಿ ರೆಗ್ಯುಲರ್ ಪ್ಲಾನ್ :- ಇದು 29 ರೂಪಾಯಿಯ ಪ್ಲಾನ್, ಆದರೆ ಈಗ ಕೇವಲ 2 ರೂಪಾಯಿಗೆ ಸಿಗಲಿದೆ. ಇದು ಒಂದು ದಿನದ ಪ್ಲಾನ್ ಆಗಿದ್ದು, 24 ಗಂಟೆಗಳ ಕಾಲ ಯಾವುದೇ ಡಿಸ್ಟರ್ಬೆನ್ಸ್ ಇಲ್ಲದೇ, 2 ಸ್ಕ್ರೀನ್ ಗಳಲ್ಲಿ ನೋಡಬಹುದು. 2.ದಿ ಗೋಲ್ಡ್ ಸ್ಟ್ಯಾಂಡರ್ಡ್ :- ಈ ಪ್ಲಾನ್ ನ ಬೆಲೆ 299 ರೂಪಾಯಿಗಳು, ಆದರೆ ಈಗ 99 ರೂಪಾಯಿಗೆ ಈ ಪ್ಲಾನ್ ಸಿಗಲಿದೆ. ಈ ಪ್ಲಾನ್ ನಲ್ಲಿ ಮೂರು ತಿಂಗಳುಗಳ ಕಾಲ ಎರಡು ಡಿವೈಸ್ ಗಳಲ್ಲಿ ಎಂಜಾಯ್ ಮಾಡಬಹುದು.
3.ಪ್ಲಾಟಿನಂ ಪವರ್ :- ಇದು 1199 ರೂಪಾಯಿಯ ಪ್ಲಾನ್ ಆಗಿದ್ದು, ಈಗ ಈ ಪ್ಲಾನ್ 599 ರೂಪಾಯಿಗೆ ಸಿಗುತ್ತದೆ. ಇದು ಇಡೀ ಒಂದು ವರ್ಷದ ಪ್ಲಾನ್ ಆಗಿದ್ದು, 4 ಡಿವೈಸ್ ಗಳಲ್ಲಿ ಬಳಸಬಹುದು. ಲೈವ್ ಶೋಗಳು ಈ ಪ್ಲಾನ್ ನಲ್ಲಿ ಆಡ್ ಫ್ರೀ ಆಗಿರಲಿದೆ.
Comments are closed.