Vivo X90: ಹೊಸದಾಗಿ ಬಿಡುಗಡೆಯಾಗುತ್ತಿರುವ Vivo X90, Vivo X90 Pro, ಹೇಗಿರಲಿದೆ ಗೊತ್ತೇ?? ಬೆಲೆ ಹಾಗೂ ವೈಶಿಷ್ಟತೆ ಬಗ್ಗೆ ನಿಮಗೆ ಗೊತ್ತೇ??
Vivo X90: ವಿವೋ ಸಂಸ್ಥೆ ಈಗ Vivo X90 ಹಾಗೂ Vivo X90Pro ಹೆಸರಿನ ಎರಡು ಹೊಸ ಮೊಬೈಲ್ ಫೋಜ್ ಗಳನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ ಚೈನಾದಲ್ಲಿ ಲಭ್ಯವಿರುವ ಈ ಫೋನ್ ಇಂದು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಈ ಮಾಡೆಲ್ ನಲ್ಲಿ ಮೂರನೇ ವೆರೈಟಿ Vivo X90 Pro+ ಎನ್ನುವ ವೇರಿಯಂಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿಲ್ಲ. ಇನ್ನುಳಿದ ಎರಡು ಫೋನ್ ಗಳು ಹೇಗಿದೆ ಎಂದು ತಿಳಿಸುತ್ತೇವೆ ನೋಡಿ..
ವಿವೋ ಎಕ್ಸ್90 ಮೊಬೈಲ್ ಎರಡು ವೇರಿಯಂಟ್ ಗಳಲ್ಲಿ ಸಿಗಲಿದೆ, ಒಂದು 8ಜಿಬಿ 128ಜಿಬಿ ಇದರ ಬೆಲೆ ₹59,999, ಮತ್ತೊಂದು 12ಜಿಬಿ 256ಜಿಬಿ ಇದರ ಬೆಲೆ ₹63,999. ಇನ್ನು ವಿವೋ ಎಕ್ಸ್90 ಪ್ರೊ ಒಂದೇ ವೇರಿಯಂಟ್ ನಲ್ಲಿ ಬರಲಿದ್ದು, ಅದು 12ಜಿಬಿ 256ಜಿಬಿ ಇದರ ಬೆಲೆ ₹84,999 ಆಗಿದೆ. ಸೇಲ್ಸ್ ಶುರುವಿನಲ್ಲಿ ಆಫರ್ ಗಳನ್ನು ಕೊಡುವ ಸಾಧ್ಯತೆಗಳಿವೆ. ವಿವೋ ಎಕ್ಸ್90 ಮೊಬೈಲ್ ನಲ್ಲಿ 6.78 ಇಂಚ್, AMOLED ಡಿಸ್ಪ್ಲೇ ಹಾಗೂ 124Hz ರಿಫ್ರಶ್ ರೇಟ್ ಇದೆ..ಇದರಿಂದ ವಿಡಿಯೋಗಳು smooth ಆಗಿ ಸ್ಕ್ರಾಲ್ ಆಗುತ್ತದೆ.
ಈ ಡಿಸ್ಪ್ಲೇಯಲ್ಲಿ HDR10+ ಟೆಕ್ನಾಲಜಿ ಇದೆ, ಬಣ್ಣಗಳು ಬಹಳ ಚೆನ್ನಾಗಿ ಕಾಣಿಸುತ್ತದೆ.. ಇನ್ನೊಂದೆಡೆ ಎಕ್ಸ್90 ಪ್ರೊ 2K ರೆಸೊಲ್ಯೂಷನ್ ಇರಲಿದ್ದು, 20:9 ಸ್ಕ್ರೀನ್ ರೇಶ್ಯು ಇರುತ್ತದೆ. ಹಾಗೆಯೇ ಇದರಲ್ಲಿ 452 PPI, 2160Hz PWM, HRD10+ ಹಾಗೂ 300 Hz touch sampling rate ಇದ್ದು, ವೀಕ್ಷಣೆಯ ಅನುಭವ ಬಹಳ ಚೆನ್ನಾಗಿರುತ್ತದೆ. ಈ ಎರಡು ಫೋನ್ ಗಳಲ್ಲೂ ಡೈಮೆನ್ಸಿಟಿ 9200 ಚಿಪ್ಸೆಟ್, Immortalis-G715 ಜೊತೆಗೆ pair ಆಗಿದೆ. X90 ಸೀರೀಸ್ ನಲ್ಲಿ 12ಜಿಬಿ LPDDR5 RAM ಹಾಗೂ 512 ಜಿಬಿ UFS 4.0 ಸ್ಟೋರೇಜ್ ಸಿಗುತ್ತದೆ.
ಈ ಎರಡು ಫೋನ್ ಗಳಲ್ಲೂ ಹಿಂದುಗಡೆ ಟ್ರಿಪಲ್ ಕ್ಯಾಮೆರಾ ಇರಲಿದೆ, 50MP IMX866 primary sensor ಹಾಗೂ LED ಫ್ಲ್ಯಾಶ್, 12MP portrait sensor, 12MP Ultra wide Sensor, ಹಾಗೆ 32MP ಸ್ನ್ಯಾಪರ್ ಫ್ರಂಟ್ ಕ್ಯಾಮೆರಾ ಇದೆ. ಹಾಗೆಯೇ ಈ ಫೋನ್ ಗಳಲ್ಲಿ 50MP ಪೋರ್ಟ್ರೇಟ್ ಸೆನ್ಸರ್, 2X ಆಪ್ಟಿಕಲ್ ಜೂಮ್ ಜೊತೆಗಿದೆ. 50MP IMX866 ಪ್ರೈಮರಿ ಸೆನ್ಸರ್ ಇದೆ. OIS, EIS ಹಾಗೂ LED ಫ್ಲ್ಯಾಶ್ ಇದೆ. ಇಷ್ಟು ಒಳ್ಳೆಯ ಫೋನ್ ಅನ್ನು ಬಿಡದೆ ಖರೀದಿ ಮಾಡಿ.
Comments are closed.