Pension Lic Policy: ಪ್ರತಿ ತಿಂಗಳು 11 ಸಾವಿರ ಪೆನ್ಷನ್ ಬೇಕು ಎಂದರೆ, ಈ ಚಿಕ್ಕ ಪಾಲಿಸಿ ತಗೋಳಿ ಸಾಕು: ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಯಾವುದು ಗೊತ್ತೇ?
Pension Lic Policy: ವೃದ್ಧಾಪ್ಯದಲ್ಲಿ ತಿಂಗಳಿಗೆ ₹11,000 ಪೆನ್ಶನ್ ಬೇಕು ಎಂದು ಆಸೆ ಇದೆಯೇ? ಹಾಗಿದ್ದರೆ LICಯ ಈ ಪಾಲಿಸಿ ನಿಮಗೆ ಉಪಯೋಗಕರ. ಈ ಪಾಲಿಸಿಯಲ್ಲಿ ನೀವು ಪ್ರತಿತಿಂಗಳು ಉತ್ತಮವಾಗಿ ಹಣ ಗಳಿಸುತ್ತೀರಿ. ಎಲ್.ಐ.ಸಿ ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರಿಗೂ ಒಳ್ಳೆಯ ಆದಾಯ ನೀಡುವ ಯೋಜನೆಗಳನ್ನು ತರುತ್ತದೆ.. ಇಂಥದ್ದೇ ಒಂದು ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಈ ಯೋಜನೆಯಲ್ಲಿ ಪ್ರತಿ ತಿಂಗಳು ನಿಮಗೆ ಪೆನ್ಶನ್ ಸಿಗಿತ್ತದೆ. ಈ ಹೊಸ ಪಾಲಿಸಿ ಹೆಸರು ಜೀವನ ಶಾಂತಿ ನೀತಿ.. ಇದರಲ್ಲಿ ನೀವು ಸೀಮಿತವಾಗಿ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯಬಹುದು.

ಎಲ್.ಐ.ಸಿಯ ಈ ಯೋಜಮೆ ವರ್ಷಾಶನ ಯೋಜನೆ ಆಗಿದೆ, ಈ ಯೋಜನೆ ಖರೀದಿ ಮಾಡಿದ ನಂತರ ನಿಮ್ಮ ಪೆನ್ಶನ್ ಹಣವನ್ನು ನಿಗದಿ ಮಾಡಲಾಗುತ್ತದೆ. ಇದರಲ್ಲಿ ನೀವು ಪ್ರತಿ ತಿಂಗಳೂ ಎಲ್.ಐ.ಸಿ ಇಂದ ಹಣ ಸಿಗುತ್ತದೆ. ಇಲ್ಲಿ ನೀವು 2 ಬೇರೆ ಬೇರೆ ಆಯ್ಕೆಗಳನ್ನು ಪಡೆಯುತ್ತೀರಿ. ಮೊದಲ ಆಯ್ಕೆ, Differed Annuity for Single Life ಎರಡನೆಯದು Deferred Annuity for Joint Life. ಮೊದಲ ಆಯ್ಕೆಯಲ್ಲಿ ಒಬ್ಬ ವ್ಯಕ್ತಿಗೆ ಪೆನ್ಶನ್ ಯೋಜನೆ ತೆಗೆದುಕೊಳ್ಳಬಹುದು. ಈ ಯೋಜನೆಯನ್ನು 30 ರಿಂದ 79 ವರ್ಷದ ಒಳಗಿನವರು ಯಾರಾದರೂ ಖರೀದಿ ಮಾಡಬಹುದು.
ಈ ಪಾಲಿಸಿಗಾಗಿ ಮಿನಿಮಂ ₹1.5ಲಕ್ಷ ರೂಪಯು ಇನ್ವೆಸ್ಟ್ ಮಾಡಬೇಕು, ಪಾಲಿಸಿ ಬೇಡ ಎನ್ನುವುದಾದರೆ ಯಾವಾಗ ಬೇಕಾದರೂ ನಿಲ್ಲಿಸಬಹುದು..ಈ ಪಾಲಿಸಿಯಲ್ಲಿ ಸಾಲ ಕೂಡ ಸಿಗುತ್ತದೆ. ಈ ಪಾಲಿಸಿಯಲ್ಲಿ ₹10 ಲಕ್ಷ ಹೂಡಿಕೆ ಮಾಡುವ ಮೂಲಕ ತಿಂಗಳಿಗೆ ₹11,192 ರೂಪಾಯಿಯನ್ನು ಪೆನ್ಶನ್ ರೂಪದಲ್ಲಿ ಪಡೆಯುತ್ತೀರಿ..ಇದೇ ಯೋಜನೆಯಲ್ಲಿ ₹1.5ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ತಿಂಗಳಿಗೆ ₹1000 ಪೆನ್ಶನ್ ಬರುತ್ತದೆ. ಇದರಲ್ಲಿ ಮೀವು ಮಾಸಿಕ, ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಆಧಾರದ ಮೇಲೆ ಕೂಡ ಪೆನ್ಶನ್ ಹಣ ಪಡೆಯಬಹುದು.
ಒಂದು ವೇಳೆ ಈ ಪಾಲಿಸಿ ತೆಗೆದುಕೊಂಡವರು ವಿಧಿವಶರಾದರೆ ನಾಮಿನಿ ಮಾಡಿರುವವರಿಗೆ ಪೂರ್ತಿ ಹಣ ಸಿಗುತ್ತದೆ. ಪಾಲಿಸಿದಾರರು ಬದುಕಿದ್ದರೆ, ಅವರಿಗೆ ಪೆನ್ಶನ್ ಪಡೆಯುದಕ್ಕೆ ಶುರು ಮಾಡುತ್ತಾರೆ. ಒಂದು ವೇಳೆ ಜಾಯಿಂಟ್ ಅಕೌಂಟ್ ಆಗಿದ್ದು, ಅವರಲ್ಲಿ ಒಬ್ಬರು ವಿಧಿವಶರಾದರೆ, ಮತ್ತೊಬ್ಬರಿಗೆ ಪೆನ್ಶನ್ ಸೌಲಭ್ಯ ಸಿಗುತ್ತದೆ. ಇಬ್ಬರು ವಿಧಿವಶರಾದರೆ, ನಾಮಿನಿಗೆ ಪೂರ್ತಿ ಹಣ ಸಿಗುತ್ತದೆ.