Devi Sri Prasad: ಆ ಬೆಣ್ಣೆಯಂತಹ ಸುಂದರಿ ಮೋಸ ಮಾಡಿದ್ರ?? ಅದಕ್ಕೆ ದೇವಿ ಶ್ರೀ ಪ್ರಸಾದ್ ಮದುವೆಯಾಗಿಲ್ಲ. ಯಾರು ಗೊತ್ತೇ? ಈಕೆಗೆ ಜೀವ ಕೊಟ್ರು ಕಡಿಮೇನೆ ಎಂದ ನೆಟ್ಟಿಗರು.
Devi Sri Prasad: ಚಿತ್ರರಂಗದಲ್ಲಿ ಅನೇಕ ಸ್ಟಾರ್ ಗಳಿದ್ದಾರೆ. ಅವರಿಗೆ ಇನ್ನು ಮದುವೆಯಾಗಿಲ್ಲ. ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದರು ಕೂಡ ಕೆಲವರು ಹಲವು ಕಾರಣಗಳಿಗೆ ಮದುವೆ ಆಗದೆ ಹಾಗೆಯೇ ಇದ್ದುಬಿಡುತ್ತಾರೆ. ಅಂಥವರಲ್ಲಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಕೂಡ ಒಬ್ಬರು. ಇವರಿಗೆ ಈಗಾಗಲೇ 43 ವರ್ಷ ವಯಸ್ಸಾಗಿದೆ. ಆದರೆ ಇಂದಿಗೂ ಮದುವೆಯಾಗದೆ ಒಂಟಿಯಾಗಿದ್ದಾರೆ.

ದೇವಿಶ್ರೀ ಪ್ರಸಾದ್ ಅವರು ಈ ರೀತಿ ಮದುವೆಯಾಗದೆ ಒಂಟಿಯಾಗಿ ಜೀವನ ಮಾಡುತ್ತಿರುವುದಕ್ಕೆ ಕಾರಣ ಒಬ್ಬ ಸ್ಟಾರ್ ಹೀರೋಯಿನ್ ಕಾರಣ ಎಂದು ಸುದ್ದಿಯೊಂದು ಕೇಳಿಬರುತ್ತಿದೆ.. ಆ ನಟಿ ಯಾರು? ಇವರಿಬ್ಬರ ನಡುವೆ ಆಗಿದ್ದೇನು ಗೊತ್ತಾ? ಆ ನಟಿ ಮತ್ಯಾರು ಅಲ್ಲ, ಸೌತ್ ಇಂಡಿಯಾದ ಖ್ಯಾತ ನಟಿಯರಲ್ಲಿ ಒಬ್ಬರಾದ ಚಾರ್ಮಿ ಅವರು. ಇವರಿಬ್ಬರು ಒಂದು ಸಿನಿಮಾ ಸಂಬಂಧಿತ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು, ಅಲ್ಲಿ ಇಬ್ಬರ ನಂಬರ್ ಕೂಡ ಎಕ್ಸ್ಛೇಂಜ್ ಆಗಿತ್ತು.
ಆಗಿನಿಂದ ಇಬ್ಬರ ನಡುವೆ ಸ್ನೇಹ ಶುರುವಾಯಿತು. ಬಳಿಕ ಅದು ಪ್ರೀತಿಯಾಗಿ ಬದಲಾಯಿತು. ಕೆಲ ಸಮಯ ಪ್ರೀತಿಸಿದ ನಂತರ ಇಬ್ಬರು ಮದುವೆ ಆಗಬೇಕು ಎಂದು ಬಯಸಿದರು. ಆಗ ಇಬ್ಬರ ನಿಶ್ಚಿತಾರ್ಥ ಕೂಡ ನಡೆದಿದೆ ಎನ್ನುವ ಸುದ್ದಿಗಳು ಕೂಡ ಕೇಳಿಬಂದಿದ್ದವು. ಆದರೆ ದೇವಿಶ್ರೀ ಪ್ರಸಾದ್ ಅವರನ್ನು ಪ್ರೀತಿಸುತ್ತಿರುವಾಗ ನಿರ್ದೇಶಕ ಪೂರಿ ಜಗನ್ನಾಥ್ ಅವರೊಡನೆ ಸಹ ಚಾರ್ಮಿ ಕ್ಲೋಸ್ ಆಗಿದ್ದರು. ಇದು ದೇವಿಶ್ರೀ ಪ್ರಸಾದ್ ಅವರಿಗೆ ಇಷ್ಟವಾಗಲಿಲ್ಲ.

ಚಾರ್ಮಿ ಅವರು ಮೋಸ ಮಾಡುತ್ತಿದ್ದಾರೆ ಎಂದು ಅನ್ನಿಸಿ, ಬ್ರೇಕಪ್ ಮಾಡಿಕೊಂಡರು. ಆಗಿನಿಂದ ದೇವಿಶ್ರೀ ಪ್ರಸಾದ್ ಅವರಿಗೆ ಹುಡುಗಿಯರ ಮೇಲೆ ಹಾಗೂ ಪ್ರೀತಿಯ ಮೇಲೆ ನಂಬಿಕೆ ಹೊರಟು ಹೋಗಿದೆ, ಪೂರ್ತಿಯಾಗಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅದೇ ಕಾರಣಕ್ಕೆ ಈಗಲೂ ಕೂಡ ಮದುವೆಯಾಗದೆ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಇವರು ಮದುವೆಯಾಗಲಿ ಎಂದು ಅಭಿಮಾನಿಗಳು ಇಂದಿಗೂ ಕೂಡ ಕಾಯುತ್ತಿದ್ದಾರೆ.