News: ಮಧ್ಯಾಹ್ನದ ಬಿಸಿ ಊಟದಲ್ಲಿ ಸತ್ತು ಬಿದ್ದಿತ್ತು ಹಾವು, ಸೇವಿಸಿದ ಮಕ್ಕಳಿಗೆ ಏನಾಗಿದೆ ಗೊತ್ತೇ?? ಎಲ್ಲರೂ ಶಾಕ್ ಆಗಿ ಶೇಕ್ ಶೇಕ್ ಆಗಿದ್ದು ಯಾಕೆ ಗೊತ್ತೇ??
News: ಕೆಲವೊಮ್ಮೆ ನಾವು ಊಹಿಸದ ಘಟನೆ ನಡೆದಿರುತ್ತದೆ. ಅವುಗಳನ್ನು ಕೇಳಿದರೆ ನಿಜಕ್ಕೂ ಹೀಗೂ ನಡೆಯುತ್ತಾ ಎಂದು ಅನ್ನಿಸದೆ ಇರದು. ನಿನ್ನೆಯಷ್ಟೇ ಬಿಹಾರದ ಆರಾರಿಯಾ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಎಲ್ಲರೂ ಬೆಚ್ಚಿಬೀಳುವ ಹಾಗೆ ಮಾಡಿದೆ. ಈ ಘಟನೆ ನಡೆದಿರುವುದು ಶಾಲೆಯಲ್ಲಿ, ಶಾಲೆಯ ಮಕ್ಕಳು ಮಾಡುವ ಬಿಸಿ ಊಟದಲ್ಲಿ ಹಾವು ಸತ್ತು ಬಿದ್ದಿದ್ದು, ಅದನ್ನು ಸೇವಿಸಿದ 100 ಮಕ್ಕಳು ಅಸ್ವಸ್ಥರಾಗಿದ್ದಾರೆ..

ಅರಾರಿಯಾ ಜಿಲ್ಲೆಯ ಜೋಗಬಾನಿ ನಗರ ಪರಿಷತ್ನ ಅಮೌನಾ ಮಿಡ್ಲ್ ಸ್ಕೂಲ್ ವಾರ್ಡ್ ನಂ. 21 ರಲ್ಲಿನ ಶಾಲೆಯಲ್ಲಿ ಈ ಘಟನೆ ನಡೆಸಿದೆ. ಶಾಲಾ ಬಾಲಕ ಊಟದಲ್ಲಿ ಹಾವು ಸತ್ತಿರುವುದನ್ನು ನೋಡಿ ಕಿರುಚಿದ್ದಾನೆ. ಆಗ ಎಲ್ಲರಿಗೂ ಗೊತ್ತಾಗಿದ್ದು, ಅಷ್ಟರಲ್ಲಾಗಲೇ, 100 ಮಕ್ಕಳು ಊಟ ಮಾಡಿದ್ದರು. ಈ ಬಗ್ಗೆ ಶಿಕ್ಷಣಾಧಿಕಾರಿಗಳು ಮಾತನಾಡಿದ್ದಾರೆ, “ಮಧ್ಯಾಹ್ನದ ಊಟ ಮಾಡಿದ ಎಲ್ಲಾ ಮಕ್ಕಳನ್ನು ಫೋರ್ಬ್ಸ್ ಗಂಜ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ಓದಿ..Kannada News: ಪಾತ್ರೆ ತೊಳೆಯುತ್ತಿದ್ದ ಹೋಟೆಲ್ ಅನ್ನು ಖರೀದಿ ಮಾಡಿದ 18 ರ ಯುವತಿ; ಪಾತ್ರೆ ತೊಳೆಯುವ ಕೆಲಸದಿಂದ ಮಾಲಿಕೆ ಆಗಿದ್ದು ಹೇಗೆ ಗೊತ್ತೇ? ಇದು ಚಿಕ್ಕ ಟ್ರಿಕ್. ನೀವು ಟ್ರೈ ಮಾಡಿ.
ಸಧ್ಯ ಈಗ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ಶಾಲೆಗೆ ಒಂದು ಎನ್.ಜಿ.ಓ ಮೂಲಕ ಊಟ ಬರುತ್ತಿತ್ತು, ಈ ವಿಚಾರವನ್ನು ಈಗ ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಅವರದ್ದೇ ತಪ್ಪು ಕಂಡುಬಂದರೆ, ಅವರ ಲೈಸೆನ್ಸ್ ಅನ್ನು ರದ್ದು ಮಾಡಲಾಗುತ್ತದೆ. ಇಲ್ಲಿ ಎನ್.ಜಿ.ಓ ನ ನಿರ್ಲಕ್ಷ್ಯವಿದೆ..” ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳಿಗೆ ಯಾವುದೇ ತೊಂದರೆ ಆಗದೆ ಇರುವುದು ಇಲ್ಲಿ ಸಮಾಧಾನ ಪಟ್ಟುಕೊಳ್ಳಬೇಕಾದ ವಿಷಯ ಆಗಿದೆ.
ಮಧ್ಯಾಹ್ನದ ಊಟದ ವಿಷಯದಲ್ಲಿ ಗುಣಮಟ್ಟ ಚೆನ್ನಾಗಿಲ್ಲ ಎಂದು ಎಷ್ಟೇ ಹೇಳಿದರು ಎನ್.ಜಿ.ಓ ನವರು ಸರಿಪಡಿಸಿಕೊಳ್ಳಲಿಲ್ಲ.. ಎಂದು ಶಾಲೆಯ ಶಿಕ್ಷಕರು ದೂರಿನಲ್ಲಿ ಹೇಳಿದ್ದಾರೆ. ಹಾಗೆಯೇ ಊಟದಲ್ಲಿ ಸತ್ತಿರುವ ಹಾವು ಹೇಗೆ ಬಂತು ಎಂದು ಗೊತ್ತಿಲ್ಲ ಎಂದು ಎನ್.ಜಿ.ಓ ಅಧಿಕಾರಿ ತಿಳಿಸಿದ್ದಾರೆ. ಇದೀಗ ಘಟನೆ ಸ್ಥಳೀಯರು ಶಾಕ್ ಆಗುವ ಹಾಗೆ ಮಾಡಿದೆ.. ಇದನ್ನು ಓದಿ..Viral Video: ಎಲ್ಲರ ಮೈ ಜುಮ್ ಎನ್ನುವಂತೆ ತರಗತಿಯಲ್ಲಿಯೇ ಡಾನ್ಸ್ ಮಡಿದ ಶಿಕ್ಷಕಿ- ಬಾಯ್ಬಿಟ್ಟು ನೋಡುತ್ತಾ ಕುಳಿತ ಮಂದಿ- ವಿಡಿಯೋ ಹೇಗಿದೆ ಗೊತ್ತೇ?