Neer Dose Karnataka
Take a fresh look at your lifestyle.

Railway Jobs: ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಕರೆದ ರೈಲ್ವೆ- ಈ ಬಾರಿ 10 ನೇ ತರಗತಿ, 12 ನೇ ತರಗತಿ ಪಾಸ್ ಆಗಿದ್ದರೂ ಅರ್ಜಿ ಹಾಕಿ. ಉದ್ಯೋಗ ಗಿಟ್ಟಿಸಿ. ಏನು ಮಾಡಬೇಕು ಗೊತ್ತೇ?

Railway Jobs: ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕರೆ ಒಳ್ಳೆಯ ಸಂಬಳ ಹಾಗು ಕೆಲಸ ಎರಡು ಸಿಗುತ್ತದೆ. ಇದೀಗ ರೈಲ್ವೆ ಇಲಾಖೆಯು ಹೊಸದಾಗಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ರೈಲ್ವೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಅಡಿಯಲ್ಲಿ ಈ ಹುದ್ದೆಗೆ ಆಹ್ವಾನ ನೀಡಲಾಗಿದೆ. ಮೇ 31ರಿಂದ ಅರ್ಜಿ ಸಲ್ಲಿಕೆ ಸಮಯ ಶುರುವಾಗಿದ್ದು, ಜೂನ್ 30ರವರೆಗು ನೀವು ಅರ್ಜಿ ಸಲ್ಲಿಸಬಹುದು. ಒಟ್ಟಾರೆಯಾಗಿ 782 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದೆ.

ಅದರಲ್ಲಿ 252 ಹುದ್ದೆ ಫ್ರೆಶರ್ ಗಳಿಗೆ ನೀಡಲಿದ್ದು, 532 ಹುದ್ದೆಗಳನ್ನು X-ITI ಮೀಸಲಾಗಿದೆ ಇಡಲಾಗಿದೆ. ಈ ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ, ಫಿಟ್ಟರ್, ಎಲೆಕ್ಟ್ರಿಷಿಯನ್ ಮತ್ತು ಮೆಷಿನಿಸ್ಟ್ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು 10 ನೇ ತರಗತಿ ಮಿನಿಮಮ್ 50% ನಲ್ಲಿ ಪಾಸ್ ಮಾಡಿರಬೇಕು. ಹಾಗೂ ಸಂಬಂಧ ಇರುವ ಕ್ಷೇತ್ರದಲ್ಲಿ ITI ಮಾಡಿರಬೇಕು. ಕಾರ್ಪೆಂಟರ್, ವೆಲ್ಡರ್ ಮತ್ತು ಪೇಂಟರ್ ಹುದ್ದೆಗೆ, ನ್ಯಾಷನಲ್ ಕೌನ್ಸಿಲ್ ಆಫ್ ವೋಕಲೇಶನ್ ಟ್ರೇನಿಂಗ್ ಅಥವಾ ಸ್ಟೇಟ್ ಕೌನ್ಸಿಲ್ ನೀಡಿದ ಅಧಿಸೂಚಿತ ಬ್ಯುಸಿನೆಸ್ ನಲ್ಲಿ ಪ್ರಮಾಣ ಪತ್ರ ಇರಬೇಕು. ಇದನ್ನು ಓದಿ..Farmers Scheme: ರೈತರಿಗೆ ಉಚಿತವಾಗಿ 10000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹಕ್ಕಾಗಿ ಕೊಡಲು ಮುಂದಾದ ಸರ್ಕಾರ- ನಿಮಗೂ ಬೇಕು ಎಂದರೆ ಏನು ಮಾಡಬೇಕು ಗೊತ್ತೆ?

10ನೇ ತರಗತಿಯನ್ನು 50% ಮಾರ್ಕ್ಸ್ ಇಂದ ಪಾಸ್ ಆಗಿರಬೇಕು. ಈ ಕೆಲಸಕ್ಕೆ ಒಂದು ವರ್ಷ ಅಥವಾ ಹೆಚ್ಚಿನ ವೃತ್ತಿಪರ ಅನುಭವ ಹೊಂದಿರಬೇಕು. ಪ್ರೋಗ್ರಾಮಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಅಸಿಸ್ಟಂಟ್ ಹುದ್ದೆಗೆ 10ನೇ ಕ್ಲಾಸ್ 50% ಮಾರ್ಕ್ಸ್ ಜೊತೆಗೆ ಪಾಸ್ ಆಗಿರಬೇಕು. ಈ ಹುದ್ದೆಗೆ ವೃತ್ತಿಪರ ತರಬೇಟಿಯಾಗಿ ರಾಷ್ಟ್ರೀಯ ಕೌನ್ಸಿಲ್ ಅಥವಾ ಸ್ಟೇಟ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೇನಿಂಗ್ ಆಗಿರಬೇಕು. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣ ಪತ್ರ ಇರಬೇಕು.

ಫಿಟ್ಟರ್, ಎಲೆಕ್ಟ್ರಿಷಿಯನ್ ಹಾಗೂ ಮೆಶಿನಿಸ್ಟ್ ಹುದ್ದೆಗೆ 10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ಕಲಿತಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು 15 ರಿಂದ 24ವರ್ಷದ ಒಳಗೆ ಇರಬೇಕು. OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ, ಬೆಂಚ್ ಮಾರ್ಕ್ ವಿಕಲಾಂಗ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಈ ಕೆಲಸಕ್ಕೆ ಸಿಗುವ ಸ್ಟೈಪೆಂಡ್, 10ನೇ ತರಗತಿ ಪಾಸ್ ಆದ ಫ್ರೆಶರ್ಸ್ ಗೆ ತಿಂಗಳಿಗೆ ₹6000..2nd ಪಿಯುಸಿ ಪಾಸ್ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ ₹7000. X-ITI ಅಭ್ಯರ್ಥಿಗಳಿಗೆ ತಿಂಗಳಿಗೆ ₹7000 ಸಂಬಳ ಸಿಗುತ್ತದೆ. ಇದನ್ನು ಓದಿ..Kannada News: ಕೊನೆಗೂ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಫೈನಲ್ ಆಯ್ತಾ? ಬೊಮ್ಮಾಯಿ ಅಲ್ಲ, ಯತ್ನಾಳ್ ಅಲ್ಲ. ಮತ್ಯಾರು ಅಂತೇ ಗೊತ್ತೆ?

Comments are closed.