Neer Dose Karnataka
Take a fresh look at your lifestyle.

Buying New Home: ಟೋಪಿ ಹಾಕುವ ಈ ಜಗತ್ತಿನಲ್ಲಿ, ಹೊಸ ಮನೆ ಖರೀದಿ ಮಾಡುವ ಮುನ್ನ ಈ ಚಿಕ್ಕ ವಿಷಯಗಳನ್ನು ತಿಳಿದುಕೊಂಡು ಲಕ್ಷ ಲಕ್ಷ ಉಳಿಸಿ. ಏನು ಗೊತ್ತೇ?

298

Buying New Home: ಎಲ್ಲರಿಗೂ ಕೂಡ ತಮ್ಮದೇ ಆದ ಸ್ವಂತ ಮನೆ ಬೇಕು ಎಂದು ಆಸೆ ಇರುತ್ತದೆ. ಹೊಸ ಮನೆ ಕೊಂಡುಕೊಳ್ಳುವುದಕ್ಕೆ ಕಷ್ಟಪಟ್ಟು ದುಡಿಯುತ್ತಾರೆ, ಸಾಲ ಮಾಡುತ್ತಾರೆ, ಬ್ಯಾಂಕ್ ನಲ್ಲಿ ಲೋನ್ ಮೊರೆ ಹೋಗುತ್ತಾರೆ. ಏನಾದರೂ ಮಾಡಿ ಹೊಸ ಮನೆಯೊಂದನ್ನು ಸ್ವಂತಕ್ಕೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಾರೆ. ಆದರೆ ಹೊಸ ಮನೆ ಖರೀದಿ ಮಾಡುವುದಕ್ಕಿಂತ ಮೊದಲು ನೀವು ಕೆಲವು ಚಿಕ್ಕ ಪುಟ್ಟ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಲಕ್ಷಗಟ್ಟಲೇ ಹಣವನ್ನು ಉಳಿಸಬಹುದು.

ಸ್ವಂತ ಮನೆ ಖರೀದಿ ಮಾಡುವಾಗ ಈ ಕೆಲವು ವಿಷಯಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳುವುದು, ಏಕೆಂದರೆ ಮನೆ ಕೊಂಡುಕೊಂಡ ನಂತರ ನಿಮಗೆ ತೊಂದರೆ ಆಗಬಾರದು. ಒಂದು ಮನೆ ಕೊಂಡುಕೊಳ್ಳುವುದಕ್ಕಿಂತ ಮೊದಲು ಮನೆಯ ಮಾಲೀಕರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಿ. ಹಾಗೆಯೇ ಮನೆಯ ಪೇಪರ್ಸ್ ಅನ್ನು ಸರಿಯಾಗಿ ನೋಡಿ.. ಇದನ್ನು ಓದಿ..Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.

ನೀವು ತಿಳಿದುಕೊಂಡಿರಬೇಕಾದ ಸರಿಯಾಗಿ ಗಮನಿಸಬೇಕಾದ ಮತ್ತೊಂದು ವಿಷಯ ಏನು ಎಂದರೆ, ನೀವು ಕೊಂಡುಕೊಳ್ಳುವ ಮನೆಯ ಜಾಗದ ಪತ್ರಗಳೆಲ್ಲವು ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡಿ. ಪತ್ರದಲ್ಲಿ ಯಾವುದೇ ದೋಷಗಳು ಇರಬಾರದು. ನೀವು ಮನೆ ಕೊಂಡುಕೊಳ್ಳುತ್ತಿರುವ ಕಡೆ ನಿಮಗೆ ಅವಶ್ಯಕತೆ ಇರುವ ಎಲ್ಲವೂ ಹತ್ತಿರದಲ್ಲಿ ಇದೆಯೇ ಎಂದು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು.

ಅಂಗಡಿಗಳು, ಮಾಲ್, ಸ್ಕೂಲ್, ರೈಲ್ವೆ ಸ್ಟೇಶನ್ ಇದೆಲ್ಲವೂ ಹತ್ತಿರ ಇದೆಯಾ ಎಂದು ಚೆಕ್ ಮಾಡಿ. ಒಂದು ವೇಳೆ ನೀವು ಲೋನ್ ಇಂದ ಮನೆ ಕೊಂಡುಕೊಳ್ಳಬೇಕು ಎಂದು ಅಂದುಕೊಂಡಿದ್ದರೆ, ಬ್ಯಾಂಕ್ ನಲ್ಲಿ ಪ್ರತಿ ತಿಂಗಳು ಎಷ್ಟು EMI ಕಟ್ಟಬೇಕು, ಬಡ್ಡಿದರ ಎಷ್ಟಿರುತ್ತದೆ ಇದೆಲ್ಲವನ್ನು ಸರಿಯಾಗಿ ತಿಳಿದುಕೊಳ್ಳಿ. ಈ ಎಲ್ಲಾ ವಿಷಯಗಳನ್ನು ಗಮನಿಸುವುದರಿಂದ ನೀವು ಲಕ್ಷಗಟ್ಟಲೇ ಹಣ ಉಳಿಸಬಹುದು. ಇದನ್ನು ಓದಿ..SIP: ನೋಡುಗುರು ಕಡಿಮೆ ಅಂದ್ರೆ 266 ರೂಪಾಯಿಯಂತೆ ಪ್ಲಾನ್ ಮಾಡಿ ನೀವು ಉಳಿಸಿದ, ಕೋಟ್ಯಧಿಪತಿ ಆಗ್ತೀರಾ. ಅದೆಷ್ಟು ಸುಲಭ ಗೊತ್ತೆ? ನೀವೇನು ಮಾಡ್ಬೇಕು ಗೊತ್ತೇ?

Leave A Reply

Your email address will not be published.